ಉದ್ಯೋಗ ಕಲ್ಪಿಸಲಿದೆ ಟಾಟಾ ಟೆಕ್ನಾಲಜಿಸ್ 'ರೆಡಿ ಇಂಜಿನಿಯರ್ಸ್'

Posted By:

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ ಕೆಲಸಕ್ಕಾಗಿ ಪೇಚಾಡಬೇಕಿಲ್ಲ. ಟಾಟಾ ಟೆಕ್ನಾಲಜಿಸ್ ಸಂಸ್ಥೆಯು ರಾಜ್ಯದ ಏಳು ಇಂಜಿನಿಯರಿಂಗ್ ಕಾಲೇಜುಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲೇ ತರಬೇತಿ ಪಡೆಯಲಿದ್ದಾರೆ.

ಉದ್ದಿಮೆ ಪರಿಣಿತರು, ಡಿಸೈನ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವವರು ಸೇರಿದಂತೆ ಅನೇಕ ತಜ್ಞರಿಂದ ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ವಿಭಾಗದ 3ನೇ ಮತ್ತು 4ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು.

ಬೆಂಗಳೂರಿನ ನಾಲ್ಕು ಕಾಲೇಜು, ಮೈಸೂರಿನ ಎರಡು ಮತ್ತು ತುಮಕೂರಿನ ಒಂದು ಕಾಲೇಜಿನ ಜೊತೆಗೆ ಟಾಟಾ ಟೆಕ್ನಾಲಜಿಸ್ ಸಂಸ್ಥೆಯು ಒಪ್ಪಂದ ಮಾಡಿಕೊಂಡಿದೆ.

ಟಾಟಾ ಟೆಕ್ನಾಲಜಿಸ್ 'ರೆಡಿ ಇಂಜಿನಿಯರ್ಸ್'

ಒಪ್ಪಂದ ಮಾಡಿಕೊಂಡಿರುವ ಏಳು ಕಾಲೇಜುಗಳು

ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್
ರೇವಾ ಯೂನಿವರ್ಸಿಟಿ
ಪಿಇಎಸ್ ಯೂನಿವರ್ಸಿಟಿ
ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಜೆಎಸ್‌ಎಸ್ ಯೂನಿವರ್ಸಿಟಿ (ಮೈಸೂರು)
ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಮೈಸೂರು)
ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತುಮಕೂರು)

'ನಾಲ್ಕು ವರ್ಷ ಕಲಿಕೆ ನಂತರ ಕಂಪೆನಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿವೆ. ಈ ಸಮಯ ವ್ಯರ್ಥವಾಗುವುದನ್ನು ತಡೆಯುವುದು ನಮ್ಮ ಉದ್ದೇಶ. ಕಲಿಕೆ ಸಮಯದಲ್ಲೇ ಪ್ರಾಯೋಗಿಕ ತರಬೇತಿ ನೀಡಲು 'ರೆಡಿ ಎಂಜಿನಿಯರ್ಸ್‌' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ' ಟಾಟಾ ಸಂಸ್ಥೆಯು ತಿಳಿಸಿದೆ.

'ತಾಂತ್ರಿಕ ಶಿಕ್ಷಣ ಮತ್ತು ಕೌಶಲ ಆಧಾರಿತ ತರಬೇತಿಯಲ್ಲಿರುವ ಅಂತರವನ್ನು ಕಡಿಮೆ ಮಾಡಲು ಈ ತರಬೇತಿ ಸಹಾಯವಾಗಲಿದೆ. ಭಾರತ ಕೌಶಲ ವರದಿ-2017ರ ಪ್ರಕಾರ ದೇಶದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಐದು ಅಭ್ಯರ್ಥಿಗಳಲ್ಲಿ ಇಬ್ಬರು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಹಾಗಾಗಿ ವ್ಯಾಸಂಗದ ಅವಧಿಯಲ್ಲಿಯೇ ತರಬೇತಿ ನೀಡಿ, ಹೆಚ್ಚು ಜನ ಉದ್ಯೋಗ ಪಡೆಯಲು ಶಕ್ತರನ್ನಾಗಿಸುವುದು ನಮ್ಮ ಉದ್ದೇಶ' ಎಂದು ಟಾಟಾ ಟೆಕ್ನಾಲಾಜಿಸ್‌ನ ವ್ಯವಸ್ಥಾಪಕ ನಿರ್ದೇಶಕ ವಾರನ್ ಹ್ಯಾರೀಸ್ ಹೇಳಿದ್ದಾರೆ.

English summary
Tata Technologies, a provider of engineering services and manufacturing enterprise IT, on Friday signed an MoU with seven colleges in Bengaluru and Mysore to offer the ‘Ready Engineering’ Program for the students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia