ಟಿಡಿಎಸ್ ನಲ್ಲಿ ದಾಖಲಾಗಲಿದೆ ಎಲ್ಲಾ ಶಿಕ್ಷಕರ ಮಾಹಿತಿ

Posted By:

ಇದೇ ಮೊದಲ ಬಾರಿಗೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಪ್ರೌಢಶಾಲೆಗಳ ಶಿಕ್ಷಕರ ಮಾಹಿತಿಗಳನ್ನು ಸಾಫ್ಟ್ವೇರ್ ನಲ್ಲಿ ಸಂಗ್ರಹಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಇದಕ್ಕಾಗಿ ರಾಜ್ಯ ಶಿಕ್ಷಣ ಇಲಾಖೆ ಟಿಡಿಎಸ್ (ಟೀಚರ್ಸ್ ಡೇಟಾ ಸಾಫ್ಟ್ವೇರ್) ಅಳವಡಿಸುತ್ತಿದ್ದು ಒಂದೇ ಸೂರಿನಡಿಯಲ್ಲಿ ಶಿಕ್ಷಕರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಟಿಡಿಎಸ್ ನಲ್ಲಿ ಶಿಕ್ಷಕರ ಸಂಪೂರ್ಣ ಮಾಹಿತಿ

ಈ ಹಿಂದೆ ಶಿಕ್ಷಕರ ಮಾಹಿತಿಯನ್ನು ಮ್ಯಾನ್ಯವಲ್ ಮೂಲಕ ಸಂಗ್ರಹಿಸಲಾಗುತ್ತಿತ್ತು. ಇದರಿಂದ ಅನೇಕ ಸಮಸ್ಯೆಗಳನ್ನು ಶಿಕ್ಷಣ ಇಲಾಖೆ ಎದುರಿಸುತ್ತಿದ್ದ ಪರಿಣಾಮ ಈ ಟಿಡಿಎಸ್ ನಲ್ಲಿ ದಾಖಲಿಸಲು ಮುಂದಾಗಿದೆ.

ಸರ್ಕಾರಿ ಪಿಯು ಕಾಲೇಜಿನ ಪರಿಶಿಷ್ಟ ವಿದ್ಯಾರ್ಥಿಗಳಿಗೆ 'ವಿಶ್ವಾಸ ಕಿರಣ' ಯೋಜನೆ

ಏನಿದು ಟಿಡಿಎಸ್ ?

ಟಿಡಿಎಸ್ ಅಂದರೆ ಟೀಚರ್ಸ್ ಡೇಟಾ ಸಾಫ್ಟ್ವೇರ್ ಎಂದರ್ಥ. ಇಲ್ಲಿ ಪ್ರತಿಯೊಬ್ಬ ಶಿಕ್ಷಕರ ಎಲ್ಲಾ ಮಾಹಿತಿ ಒಂದೇ ಸಾಫ್ಟ್ವೇರ್ ನಲ್ಲಿ ಲಭ್ಯವಿರುತ್ತದೆ. ಶಿಕ್ಷಕರು ಹುದ್ದೆಗೆ ಸೇರಿದ ದಿನದಿಂದ ಹಿಡಿದು ಕಾರ್ಯನಿರ್ವಹಿಸಿದ ವಿವರ, ತರಬೇತಿ ಪಡೆದ ವಿವರ, ಸಂಬಳದ ವಿವರ, ಭಡ್ತಿ ಪಡೆದ ವಿವರ, ವರ್ಗಾವಣೆ ವಿವರ, ಆಧಾರ್ ನಂಬರ್, ಜಾತಿ ಪ್ರಮಾಣ ಪತ್ರ ಮಾಹಿತಿ ಸೇರಿ ಪ್ರತಿಯೊಂದು ಮಾಹಿತಿಯೂ ದಾಖಲಾಗಿರುತ್ತದೆ.

ಈ ಸಾಫ್ಟ್ವೇರ್ ನಲ್ಲಿ ಕಾಲಕಾಲಕ್ಕೆ ಪ್ರತಿಯೊಂದು ಮಾಹಿತಿ ಅಪ್ಡೇಟ್ ಮಾಡುತ್ತಿರುವುದರಿಂದ ಶಿಕ್ಷಕರಿಗೂ ಮತ್ತು ಶಿಕ್ಷಣ ಇಲಾಖೆಗೂ ಸಹಾಯಕಾರಿಯಾಗಲಿದೆ.

ಮುಂದಿನ ವರ್ಷದಿಂದ ಬೆಂಗಳೂರು ಉತ್ತರ ವಿವಿಯಲ್ಲಿ ಹೊಸ ಕೋರ್ಸುಗಳು

ಈ ಹಿಂದೆ ಮ್ಯಾನ್ಯುವಲ್ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಮಾಹಿತಿ ದೋಷ ಹೆಚ್ಚಾಗಿರುತ್ತಿತ್ತು. ಕೆಲವು ಮಾಹಿತಿಗಳು ಪರಸ್ಪರ ಪೂರಕವಾಗಿ ಇರುತ್ತಿರಲಿಲ್ಲ.

ಶೀಘ್ರದಲ್ಲೇ ಟಿಡಿಎಸ್ ಸೇವೆ

ಟಿಡಿಎಸ್ ಸಾಫ್ಟ್ವೇರ್ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ಇನ್ನೊಂದು ವಾರದೊಳಗೆ ಅದಕ್ಕೆ ಅನುಮೋದನೆ ದೊರೆಯಲಿದೆ. ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡುವಾಗಶಿಕ್ಷಕರ ಮಾಹಿತಿ ಅಪ್ಲೋಡ್ ಮಾಡಿದರೂ ಕೆಲವೊಂದು ಮಾಹಿತಿ ಪುನರಾವರ್ತನೆ ಆದ ಹಿನ್ನೆಲೆ, ಕೆಜಿಐಡಿ ನಂ., ಎಂಪ್ಲಾಯಿ ನಂಬರ್ ಗಳನ್ನು ಎಚ್ಆರ್ ಎಂಎಸ್ ನಲ್ಲಿರುವಂತೆ ಅಳವಡಿಸದ ಹಿನ್ನೆಲೆ ಹಾಗೂ ಕೆಲವೊಂದು ಮಾಹಿತಿ ತಪ್ಪಾಗಿ ದಾಖಲಾಗಿದೆ. ಈ ಸಮಸ್ಯೆ ತಿದ್ದುಪಡಿಯಾದ ನಂತರ ಒಂದು ವಾರದೊಳಗೆ ಸಾಫ್ಟ್ವೇರ್ ಅನುಮೋದನೆ ಪಡೆಯುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
The Department of Education has come up with software to collect information of government and aided primary high school teachers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia