ಈ ಭಾರಿ ಕೊರೋನಾ ಕಾರಣದಿಂದಾಗಿ ಶಾಲಾ ಕಾಲೇಜುಗಳು ಇನ್ನೂ ಪ್ರಾರಂಭ ಆಗಿಲ್ಲ ಹಾಗಾದ್ರೆ ಶಿಕ್ಷಕರ ದಿನಾಚರಣೆ ಆಚರಿಸುವುದು ಹೇಗೆ? ಶಿಕ್ಷಕರಿಗೆ ಏನಾದ್ರು ಉಡುಗೊರೆ ಕೊಡ್ಬೇಕು ಆದರೆ ಕೊಡೋದ್ಹೇಗೆ ಅಂತ ಚಿಂತಿಸ್ತಿದ್ದೀರಾ ? ಆ ಯೋಚನೆ ಈಗ ಬಿಟ್ಹಾಕಿ. ಏಕೆಂದರೆ ನಿಮ್ಮ ಪ್ರೀತಿಯ ಗುರುಗಳಿಗೆ ನೀವು ಆನ್‌ಲೈನ್ ನಲ್ಲಿ ಉಡುಗೊರೆ ಖರೀದಿಸಿ ಪೋಸ್ಟ್ ಮೂಲಕ ಶಿಕ್ಷಕರಿಗೆ ನೀಡಬಹುದು. ಈ ಉಡುಗೊರೆ ಕೊಡುವಿಕೆ ಯೋಜನೆಗೆ "ಗುರು ವಂದನ" ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ನಮ್ಮ ಆನ್‌ಲೈನ್ ರಾಖಿ ಪೋಸ್ಟ್ ಯೋಜನೆ ಅದ್ಭುತವಾಗಿ ಯಶಸ್ವಿಯಾಯಿತು ಹಾಗಾಗಿ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಗುರು ವಂದನ ಯೋಜನೆಯನ್ನು ಹಾಕಿಕೊಂಡಿದ್ದೇವೆ, ವಿದ್ಯಾರ್ಥಿಗಳು ಸೀಡ್ ಪೆನ್ಸಿಲ್ ಅನ್ನು ಶಿಕ್ಷಕರಿಗೆ ಉಡುಗೊರೆಯಾಗಿ ನೀಡಬಹುದು. ಪೆನ್ಸಿಲ್ ಬಳಕೆ ಮಾಡಿದ ನಂತರ ಪೆನ್ಸಿಲ್ ನ ಅಂಚಿನಲ್ಲಿರುವ ಸೀಡ್ ಅನ್ನು ನೆಟ್ಟು ಗಿಡ ಬೆಳೆಸಲು ಬಳಸಬಹುದು ಹೀಗೆ ಇತರೆ ವಸ್ತುಗಳು ನಮ್ಮ ಕರ್ನಾಟಕ ಅಂಚೆ ಇಲಾಖೆಯಲ್ಲಿ ಲಭ್ಯವಿವೆ ಅದನ್ನು ವಿದ್ಯಾರ್ಥಿಗಳು ಉಡುಗೊರೆಯಾಗಿ ನೀಡಬಹುದು ಎಂದು ಬೆಂಗಳೂರು ಹೆಚ್‌ಕ್ಯು ಪ್ರದೇಶದ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಈ ಯೋಜನೆ ಪರಿಸರ ಸ್ನೇಹಿ ಮತ್ತು ವಿಭಿನ್ನವಾದ ಉಡುಗೊರೆಯಾಗಿದೆ. ವಿದ್ಯಾರ್ಥಿಗಳು ತಮಗಿಷ್ಟವಾಗುವ ಪರಿಸರ ಸ್ನೇಹಿ ಉಡುಗೊರೆಯನ್ನು ಖರೀದಿಸಿ ಜೊತೆಗೆ ವೈಯಕ್ತಿಕ ಸಂದೇಶವನ್ನು ಬರೆದು ಕಳುಹಿಸಬಹುದು. ಇದಲ್ಲದೇ ವಿಶೇಷವಾಗಿ ಅಂಚೆಯ ಲಕೋಟೆ ಮೇಲೆ 'ಶಿಕ್ಷಕರ ದಿನ' ಶುಭಾಷಯಗಳು ಎಂದು ಮುದ್ರಿತವಾಗಿರುತ್ತದೆ ಮತ್ತು 'ಪ್ರೀತಿಯ ಗುರುಗಳೆ ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ' ಎಂಬ ಸಂದೇಶವನ್ನು ಮದ್ರಿಸಲಾಗಿರುತ್ತದೆ. ಈ ಉಡುಗೊರೆಯನ್ನು ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೇವಲ 100/-ರೂಗಳ ವೆಚ್ಚದಲ್ಲಿ ನೀಡಬಹುದು.
ಉಡುಗೊರೆಗಳು ಬೆಂಗಳೂರು ಕಛೇರಿಯಲ್ಲಿ ಮಾತ್ರ ಲಭ್ಯವಿದೆ ಆದರೆ ಭಾರತದೆಲ್ಲೆಡೆ ಉಡುಗೊರೆಯನ್ನು ಬುಕಿಂಗ್ ಮತ್ತು ವಿತರಣೆಯನ್ನು ಮಾಡಬಹುದು. ಈ ಅವಕಾಶ ಸೆಪ್ಟೆಂಬರ್ 1,2020ರ ವರಗೆ ಮಾತ್ರ ಲಭ್ಯವಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ https://karnatakapost.gov.in/Guru_Vandana/Register.aspx ವೆಬ್‌ಸೈಟ್ ಗೆ ಭೇಟಿ ನೀಡಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಗೆ ಉಡುಗೊರೆ ನೀಡಿ.