ಎಲ್ಲಾ ಶಿಕ್ಷಕರಿಗೂ ಮಾರ್ಚ್ 2019 ರೊಳಗೆ ತರಬೇತಿ

Posted By:

ಮಾರ್ಚ್ 2019 ರೊಳಗೆ ದೇಶದ ಎಲ್ಲಾ ಶಿಕ್ಷಕರಿಗೂ ತರಬೇತಿಯನ್ನು ನೀಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಉಪೇಂದ್ರ ಕುಶ್ವಾ ತಿಳಿಸಿದ್ಧಾರೆ.

ಸರ್ಕಾರಿ ಶಾಲೆ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸೇರಿದಂತೆ ದೇಶದ ಎಲ್ಲಾ ತರಬೇತಿ ರಹಿತ ಶಿಕ್ಷಕರು ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ತರಬೇತಿ ಪಡೆಯಲೇಬೇಕು ಎಂದು ಅವರು ಹೇಳಿದ್ದಾರೆ.

ಶಿಕ್ಷಕರಿಗೆ ತರಬೇತಿ ಕಡ್ಡಾಯ

ಇಲ್ಲಿಯ ತನಕ ತರಬೇತಿ ಪಡೆಯದ ಶಿಕ್ಷಕರು 2019 ರ ಮಾರ್ಚ್ ಒಳಗೆ ತರಬೇತಿ ಪಡೆಯುವಲ್ಲಿ ವಿಫಲವಾದರೆ ಅಂಥವರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಹೇಳಿದರು.

ಕೆಪಿಎಸ್ಸಿ: ವಸತಿ ಶಾಲೆ ನೇಮಕಾತಿ ಪರೀಕ್ಷೆ ವೇಳಾಪಟ್ಟಿ

ಪ್ರಸ್ತುತ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿರುವ ತರಬೇತಿ ರಹಿತ ಶಿಕ್ಷಕರೆಲ್ಲರೂ ತರಬೇತಿ ಪಡೆಯುವುದು ಕಡ್ಡಾಯ ಎಂಬ ನಿಯಮ ಪಾಲನೆಗೆ ಮಾನವ ಸಂಪನ್ಮೂಲ ಸಚಿವಾಲಯ ಬಂದಿದೆ. ಆರ್ ಟಿ ಇ ಕಾಯ್ದೆ ಪ್ರಕಾರ ಎಲ್ಲಾ ತರಬೇತಿ ರಹಿತ ಶಿಕ್ಷಕರು 2015 ರೊಳಗೆ ತರಬೇತಿ ಪಡೆಯಬೇಕಿತ್ತು. ಆದರೆ ಅದನ್ನು ಸಾಧಿಸಲಾಗಿಲ್ಲ ಎಂದು ಸಚಿವರು ತಿಳಿಸಿದರು.

ತರಬೇತಿ ಪಡೆಯದೇ ಪಾಠ ಮಾಡುತ್ತಿರುವ ಶಿಕ್ಷಕರ ಸಂಖ್ಯೆ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ ಎನ್ನುವುದನ್ನು ಮನಗಂಡ ಕೇಂದ್ರ ಸರ್ಕಾರ ಆರ್ ಟಿ ಇ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು. ಅದರ ಪ್ರಕಾರ ತರಬೇತಿರಹಿತ ಶಿಕ್ಷಕರು ತರಬೇತಿ ಪಡೆಯುವಂತಾಗಲು ಅವರಿಗೆ ಎನ್ಐಓಎಸ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್)ನಲ್ಲಿ ತರಬೇತಿ ವ್ಯವಸ್ಥೆಯಾಗಿತ್ತು.

ಎನ್ಐಒಎಸ್ ನಲ್ಲಿ ಆನ್-ಲೈನ್ ಶಿಕ್ಷಣದ ಮೂಲಕ ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಗುತ್ತದೆ. ಈವರೆಗೂ 15 ಲಕ್ಷ ತರಬೇತಿ ಶಿಕ್ಷಕರು ತಮ್ಮ ಹೆಸರುಗಳನ್ನು ಎನ್ಐಓಎಸ್ ನಲ್ಲಿ ನೋಂದಾಯಿಸಿದ್ದು, ಅದರಲ್ಲಿ 12 ವರೆ ಲಕ್ಷ ಶಿಕ್ಷಕರು ಶುಲ್ಕ ಪಾವತಿಸುವ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ.

ಎನ್ಐಒಎಸ್ ನಲ್ಲಿ ಹೆಸರು ನೋಂದಾಯಿಸಿದವರ ಪೈಕಿ ಖಾಸಗಿ ಶಾಲಾ ಶಿಕ್ಷಕರ ಸಂಖ್ಯೆಯೇ ಹೆಚ್ಚಿದೆ. ಸುಮಾರು 9 ಲಕ್ಷ ಖಾಸಗಿ ಶಾಲಾ ಶಿಕ್ಷಕರಿದ್ದರೇ ಮೂರುವರೆ ಲಕ್ಷ ಸರ್ಕಾರಿ ಶಾಲಾ ಶಿಕ್ಷಕರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅತಿಹೆಚ್ಚು ಅಂದರೆ ಬಿಹಾರ್ ರಾಜ್ಯದಿಂದ 2.8 ಲಕ್ಷ ಶಿಕ್ಷಕರು ನೋಂದಾಯಿಸಿದ್ದಾರೆ.

English summary
Teachers who do not possess the minimum qualifications as on March 31, 2015 will acquire the minimum qualifications within a period of four years -- that is, by March 31, 2019.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia