ಟೆಲಿಕಾಂ ಉದ್ಯಮಕ್ಕೆ 'ಟಾಟಾ' ಬೈ ಬೈ: 5000 ಉದ್ಯೋಗ ನಷ್ಟ

Posted By:

ಟಾಟಾ ಸನ್ಸ್ ಒಡೆತನದ ಟೆಲಿಕಾಂ ಸಂಸ್ಥೆ ಟಾಟಾ ಟೆಲಿಸರ್ವೀಸಸ್(ಟಿಟಿಎಸ್ಎಲ್) ನಿಂದ ಸುಮಾರು 5,000ಕ್ಕೂ ಅಧಿಕ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ವ್ಯವಸ್ಥೆಯಡಿಯಲ್ಲಿ ಉದ್ಯೋಗ ತೊರೆಯುಂತೆ ಸೂಚಿಸಿರುವ ಸುದ್ದಿ ಬಂದಿದೆ.

ಭಾರಿ ಸಾಲದ ಹೊರೆ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟಾಟಾ ಟೆಲಿ ಸರ್ವೀಸಸ್ (ಟಿಟಿಎಸ್ಎಲ್) ಟೆಲಿಕಾಂ ಉದ್ಯಮದಿಂದ ನಿರ್ಗಮಿಸಲು ಸಿದ್ಧತೆ ನಡೆಸುತ್ತಿದ್ದು, ಕೆಲ ಉದ್ಯೋಗಿಗಳಿಗೆ ಈ ಕುರಿತಂತೆ ಮೂರರಿಂದ ಆರು ತಿಂಗಳ ನೋಟಿಸ್ ನೀಡಿದೆ.

ಮುಚ್ಚಲಿದೆ ಟಾಟಾ ಟೆಲಿ ಸರ್ವೀಸಸ್

ಟಾಟಾ ಟೆಲಿಕಾಂ ನಲ್ಲಿ ವಿಆರ್ ಎಸ್ ಪಡೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಪರಿಹಾರ ಪ್ಯಾಕೇಜ್, ಹಿರಿಯ ನಾಗರೀಕರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್) ಪ್ರಕ್ರಿಯೆಗಳನ್ನು ಕಂಪನಿ ಹಮ್ಮಿಕೊಂಡಿದೆ.

ಟೆಲಿಕಾಂನ ಪ್ರಾದೇಶಿಕ ವೃತ್ತದ ಉನ್ನತ ಅಧಿಕಾರಿಗಳಿಗೆ ಮಾರ್ಚ್ 31,2018 ರೊಳಗೆ ಉದ್ಯೋಗ ತೊರೆಯುವಂತೆ ಸೂಚಿಸಲಾಗಿದೆ. ಮಾರ್ಚ್ 2017ರ ಗಣತಿಯಂತೆ ಸಂಸ್ಥೆಯಲ್ಲಿ 5,101 ಉದ್ಯೋಗಿಗಳಿದ್ದಾರೆ.

ಸುಮಾರು 149 ವರ್ಷ ಇತಿಹಾಸ ಹೊಂದಿರುವ ಟಾಟಾ ಸಮೂಹ ಸಂಸ್ಥೆಯು ತನ್ನ ಅತಿ ದೊಡ್ಡ ಟೆಲಿಕಾಂ ಘಟಕವನ್ನು ಮುಚ್ಚುತ್ತಿದೆ. 1996ರಲ್ಲಿ ಲ್ಯಾಂಡ್ ಲೈನ್ ಮೂಲಕ ಸೇವೆ ನೀಡಲು ಆರಂಭಿಸಿದ ಟಾಟಾ ಸಂಸ್ಥೆ 2002ರಲ್ಲಿ ಸಿಡಿಎಂಎ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. 2008ರಲ್ಲಿ ಜಿಎಸ್ಎಂ ಫೋನ್ ಗಳನ್ನು ಪರಿಚಯಿಸಿದರೂ ಸಂಸ್ಥೆ ಏಳಿಗೆ ಕಂಡಿರಲಿಲ್ಲ. ಎನ್ ಟಿಟಿ ಡೊಕೊಮೊದಿಂದ ಸುಮಾರು 14,000 ಕೋಟಿ ರು ಬಂಡವಾಳ ಹೂಡಿಕೆ ಪಡೆದ ಬಳಿಕ 2014ರ ತನಕ ಜಂಟಿಯಾಗಿ ಮಾರುಕಟ್ಟೆ ಸ್ವಲ್ಪ ಹೆಸರು ಕೇಳಿ ಬರುತ್ತಿತ್ತು.

2014ರ ನಂತರ ಎನ್ ಟಿಟಿ ಡೊಕೊಮೊ ಒಪ್ಪಂದದಿಂದ ಹೊರ ಬಂದ ಬಳಿಕ ಟಾಟಾ ಟೆಲಿಕಾಂ ಘಟಕ ನಷ್ಟ ಅನುಭವಿಸುತ್ತಾ ಬಂದು ಈಗ ಮುಚ್ಚುವ ಹಂತ ತಲುಪಿದೆ.

English summary
Tata Teleservices (TTSL), the telecom unit of Tata Sons, is preparing an exit plan for most of its 5,000-odd employees.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia