ಗೇಟ್ 2017 ಫಲಿತಾಂಶ ಪ್ರಕಟ

Posted By:

ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಗೇಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಅಧಿಕೃತ ವೆಬ್ಸೈಟ್ ವಿಳಾಸ ಮೂಲಕ ಅಭ್ಯರ್ಥಿಗಳು ಪಡೆಯಬಹುದಾಗಿದೆ.

ಈ ಬಾರಿ ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೇಟ್ ಪರೀಕ್ಷೆಯನ್ನು ಆಯೋಜಿಸಿತ್ತು, ಕಳೆದ ತಿಂಗಳು ನಡೆದಿದ್ದ ಪರೀಕ್ಷೆಯಲ್ಲಿ ದೇಶಾದಾದ್ಯಂತ ಲಕ್ಷಾಂತರ ಮಂದಿ ಬರೆದಿದ್ದರು.

ಪರೀಕ್ಷೆ ನಡೆದ ದಿನಾಂಕ

ಫೆಬ್ರವರಿ 4 , 2017
ಫೆಬ್ರವರಿ 5 , 2017
ಫೆಬ್ರವರಿ 11 , 2017
ಫೆಬ್ರವರಿ 12 , 2017

ಗೇಟ್ ಫಲಿತಾಂಶ ಪ್ರಕಟ

ಫಲಿತಾಂಶ ಪಡೆಯುವ ವಿಧಾನ

  • ಗೇಟ್ ಅಧಿಕೃತ ವಿಳಾಸಕ್ಕೆ ಭೇಟಿ ನೀಡಿ
  • ರಿಸಲ್ಟ್ ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನೋಂದಣಿ ಸಂಖ್ಯೆ/ ಇ-ಮೇಲ್ ಮತ್ತು ಪಾಸ್ ವರ್ಡ್ ನಮೂದಿಸಿ
  • submit ಬಟನ್ ಕ್ಲಿಕ್ ಮಾಡಿ
  • ರಿಸಲ್ಟ್ ಶೀಟ್ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಸೂಚನೆ

ಅಭ್ಯರ್ಥಿಗಳು ಮೇ 05 ,2017 ರವರೆಗೂ ಮಾತ್ರ ವೆಬ್ಸೈಟ್ ಮೂಲಕ ರಿಸಲ್ಟ್ ಪಡೆಯಬಹುದಾಗಿದೆ.

ಹರ್ಷ್ ಗುಪ್ತ ಪ್ರಥಮ ರ್ಯಾಂಕ್

22 ವರ್ಷದ ಜೈಪುರ ಹುಡುಗ ಹರ್ಷ್ ಗುಪ್ತಾ 1,000 ಕ್ಕೆ 999 ಅಂಕಗಳಿಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಪ್ರಸ್ತುತ ಜೈಪುರದ ಮಾಳವೀಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNIT) ನಲ್ಲಿ ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿರುವ ಹರ್ಷ್ ಗುಪ್ತ ರಾಸಾಯನಿಕ ಎಂಜಿನಿಯರಿಂಗ್ ನಲ್ಲಿ ಮೊದಲ ರ್ಯಾಂಕ್  ಪಡೆದುಕೊಂಡಿದ್ದಾರೆ.

ಗೇಟ್ ಪರೀಕ್ಷೆ

ಗ್ರ್ಯಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಂಗ್ (ಗೇಟ್) ಪರೀಕ್ಷೆಯು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ನಕ ಪರೀಕ್ಷೆ. ಇದು ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಸಹಕಾರಿಯಾಗಿರುವ ಪರೀಕ್ಷೆಯಾಗಿದೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ದೇಶದ ಏಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು (ಬಾಂಬೆ, ದೆಹಲಿ, ಗೌಹತಿ, ಕಾನ್ಪುರ, ಮದ್ರಾಸ್, ರೂರ್ಕಿ ಮತ್ತು ಖರಗ್ಪುರ) ಸೇರಿ ಜಂಟಿಯಾಗಿ ಗೇಟ್ ಕಮಿಟಿ ಮೂಲಕ ಈ ಪರೀಕ್ಷೆಯನ್ನು ನಡೆಸುತ್ತವೆ.

ಗೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಪ್ರತಿಷ್ಠಿತ ಶಿಕ್ಷಣ ಸಂಸ್ಥಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಪಡೆಯಬಹುದು. ಸರ್ಕಾರದ ವಿವಿಧ ಸ್ಕಾಲರ್ಷಿಪ್ ಮತ್ತು ಇನ್ನಿತರ ಆರ್ಥಿಕ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ. ಗೇಟ್ ರ್ಯಾಂಕಿಂಗ್ ಆಧರಿಸಿ ವಿವಿಧ ಹುದ್ದೆಗಳ ನೇಮಕಾತಿ ಕೂಡ ನಡೆಯಲಿದ್ದು ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಕೂಡ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ www.gate.iitr.ernet.in ಗಮನಿಸಿ

English summary
The GATE 2017 results announced. candidates can download the results on its official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia