2nd Wave Of Covid-19: ಕೋವಿಡ್ ಕಾರಣದಿಂದಾಗಿ ಮತ್ತೊಮ್ಮೆ ಈ ರಾಜ್ಯಗಳಲ್ಲಿ ಶಾಲೆ ಕಾಲೇಜು ಬಂದ್

ಯಾವೆಲ್ಲಾ ರಾಜ್ಯಗಳಲ್ಲಿ ಮತ್ತೊಮ್ಮೆ ಶಾಲೆ ವಿಶ್ವವಿದ್ಯಾಲಯಗಳು ಬಂದ್! ಇಲ್ಲಿದೆ ಮಾಹಿತಿ

ದೇಶದೆಲ್ಲೆಡೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ದಿನಗಳ ಕಾಲ ಈ ರಾಜ್ಯಗಳಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ಮತ್ತೊಮ್ಮೆ ಮುಚ್ಚಲಾಗುತ್ತಿದೆ.

 

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಶಾಲೆಗಳನ್ನು ಬಂದ್ ಮಾಡುವ ಮೂಲಕ ಲಾಕ್‌ಡೌನ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ್ದರು. ತದನಂತರ ಅನೇಕ ರಾಜ್ಯಗಳಲ್ಲಿ ಆಫ್‌ಲೈನ್ ತರಗತಿಗಳನ್ನು ಕೂಡ ಸ್ಥಗಿತಗೊಳಿಸಲಾಯಿತು.

ರಾಜ್ಯ ಸರ್ಕಾರಗಳು ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುತ್ತಿರುವ ನಡುವೆಯೇ ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದಾರೆ. ಹೀಗಾಗಿ ಕೆಲವು ರಾಜ್ಯ ಸರ್ಕಾರಗಳು ಮತ್ತೊಮ್ಮೆ ಶಾಲೆ ಮತ್ತು ಕಾಲೇಜುಗಳನ್ನು ಸ್ಥಗಿತ ಮಾಡಲು ಮುಂದಾಗಿವೆ. ಯಾವೆಲ್ಲಾ ರಾಜ್ಯಗಳು ಶಾಲೆ ಮತ್ತು ಕಾಲೇಜುಗಳನ್ನು ಸ್ಥಗಿತಗೊಳಿಸಲು ಮುಂದಾಗಿವೆ ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶ:

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ 1 ರಿಂದ 8ನೇ ತರಗತಿ ವರೆಗಿನ ಶಾಲೆಗಳನ್ನು ಮಾರ್ಚ್ 31,2021ರ ವರೆಗೆ ಮುಚ್ಚಲಾಗಿದೆ. ಯುಪಿ ಸರ್ಕಾರವು ಶಾಲೆ ಪುನರಾರಂಭಿಸು ದಿನಾಂಕವನ್ನು ಏಪ್ರಿಲ್ ೪,೨೦೨೧ರ ವರೆಗೆ ವಿಸ್ತರಿಸಲಾಗಿದೆ.

ಮಧ್ಯ ಪ್ರದೇಶ:

ಕೋವಿಡ್ ಪ್ರಕರಣ ಹೆಚ್ಚುತ್ತಿರುವುದನ್ನು ಗಮನಿಸಿಕೊಂಡು ಮಧ್ಯ ಪ್ರದೇಶ ಸರ್ಕಾರವು 1 ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಏಪ್ರಿಲ್ 15,2021ರ ವರೆಗೆ ಮುಚ್ಚುವಂತೆ ಆದೇಶ ಹೊರಡಿಸಿದೆ. 9 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಕೊರೋನಾ ಮಾರ್ಗಸೂಚಿಯಡಿ ಶಾಲೆಗಳನ್ನು ನಡೆಸಲಾಗುತ್ತಿದೆ.

 

ಪಂಜಾಬ್:

ಪಂಜಾಬ್ ರಾಜ್ಯದ ಮುಖ್ಯ ಮಂತ್ರಿ ಅಮರೇಂದರ್ ಸಿಂಗ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜು ಹೊರತುಪಡಿಸಿ ಶಾಲೆ ಮತ್ತು ಕಾಲೇಜುಗಳನ್ನು ಮಾರ್ಚ್ 31,2021ರ ವರೆಗೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿದ್ದರು. ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಶಾಲೆ ಮತ್ತು ಕಾಲೇಜುಗಳನ್ನು ಏಪ್ರಿಲ್ 10,2021ರ ವರೆಗೆ ಸ್ಥಗಿತಗೊಳಿಸುವ ಪ್ರಕಟಣೆಯನ್ನು ಹೊರಡಿಸಿದೆ.

ಹಿಮಾಚಲ ಪ್ರದೇಶ:

ಹಿಮಾಚಲ ಪ್ರದೇಶ ಸರ್ಕಾರವು ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಏಪ್ರಿಲ್ 4,2021ರ ವರೆಗೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿದೆ.

ಗುಜರಾತ್:

ಗುಜರಾತ್ ರಾಜ್ಯದಲ್ಲಿ ತರಗತಿಗಳನ್ನು ಏಪ್ರಿಲ್ 10,2021ರ ವರೆಗೆ ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

For Quick Alerts
ALLOW NOTIFICATIONS  
For Daily Alerts

English summary
These states shut schools and universities again due to increasing cases of covid 19.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X