ಈ ಶಿಕ್ಷಕರುಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು!

Posted By:

ಸೆಪ್ಟೆಂಬರ್ 5 ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನಲ್ಲಿ ಆಚರಿಸುವ ಈ ದಿನದಂದು ನಾವು ನಮ್ಮ ನೆಚ್ಚಿನ ಶಿಕ್ಷಕರುಗಳಿಗೆ ಗೌರವ ಸಲ್ಲಿಸುತ್ತೇವೆ.
ವಿದ್ಯಾರ್ಥಿಗಳ ಜೀವನಕ್ಕಾಗಿ ತಮ್ಮ ಜೀವನವನ್ನು ಮುಡಿಪಿಡುವ ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಪಾತ್ರ ವಹಿಸುತ್ತಾರೆ.
ಹೀಗೆ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿಯೇ ಅರ್ಪಿಸಿಕೊಂಡಿರುವ ಭಾರತದ ವಿಶಿಷ್ಟ ಶಿಕ್ಷಕರ ಪರಿಚಯಿಸುವುದೇ ಈ ಲೇಖನದ ಉದ್ದೇಶ.

ಬಾಬರ್ ಅಲಿ

ಶಿಕ್ಷಣ ಕಲಿಯುವಾಗಲೇ ಶಿಕ್ಷಕನಾದ ಬಾಬರ್ ಅಲಿ ಇಂದು ಎಲ್ಲರಿಗೂ ಮಾದರಿ. 25 ವರ್ಷದ ಬಾಬರ್ ಅಲಿ ಪಶ್ಚಿಮ ಬಂಗಾಳದ ಮೊಶಿರಾಬಾದ್‌ ನವರು. ಶಾಲಾ ದಿನಗಳನ್ನು ಕಷ್ಟಪಟ್ಟು ಅನುಭವಿಸಿದ ಬಾಬರ್ ಅಲಿ ಜಗತ್ತಿನ ಅತ್ಯಂತ ಕಿರಿಯ ಮುಖ್ಯೋಪಧ್ಯಾಯ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಇವರೇ ನಿಜವಾದ ಶಿಕ್ಷಕರು

ಬಾಬರ್ ಅಲಿ ಶಾಲಾ ದಿನಗಳಲ್ಲಿಯೇ ತಾವೇ ಒಂದು ಶಾಲೆ ಶುರು ಮಾಡಿದವರು. ಬಾಬರ್ ಅಲಿ ಶಾಲೆಗೆ ಹೋಗುವಾಗ ಬೇರೆ ಮಕ್ಕಳು ಶಾಲೆಗೆ ಹೋಗದೆ ದನ, ಕುರಿ ಮೇಯಿಸುವುದು ಸೇರಿದಂತೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದನ್ನು ಗಮನಿಸಿ, ಇವರೂ ತನ್ನಂತೆ ಶಾಲೆಗೆ ಬರಬೇಕು ಎಂಬ ಹಂಬಲದಿಂದ ತಾವೇ ಒಂದು ಶಾಲೆಯನ್ನು ತೆಗೆದರು.
8ನೇ ತರಗತಿ ಓದುತ್ತಿದ್ದ ಬಾಬರ್‌ ತನ್ನ ಮನೆಯ ಸಮೀಪದಲ್ಲಿದ್ದ ಮರದಡಿಯಲ್ಲಿ ಶಾಲೆಯನ್ನು ಆರಂಭಿಸಿದಾಗ, ಆ ಶಾಲೆಗೆ ಮೊದಲ ವಿದ್ಯಾರ್ಥಿಯಾಗಿ ಸೇರಿದ್ದು ಬಾಬರ್‌ ಅಕ್ಕ. ಇಂದು ಅವರ ಶಾಲೆಯಲ್ಲಿ ಸಾವಿರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಬಾಬರ್ ಅಲಿಯ ಪಾಠವನ್ನು ಕರ್ನಾಟಕದ ಪಿಯುಸಿ ಪಠ್ಯದಲ್ಲಿ ಅಳವಡಿಸಲಾಗಿದೆ.

ಆದಿತ್ಯ ಕುಮಾರ್

ಇವರೇ ನಿಜವಾದ ಶಿಕ್ಷಕರು
ಅದಿತ್ಯ ಕುಮಾರ್ ಸೈಕಲ್ ಗುರೂಜಿ ಎಂದೇ ಖ್ಯಾತಿ ಪಡೆದಿರುವ ಇವರು 1995 ರಿಂದಲೂ ಲಕ್ನೋದ ಸ್ಲಂಗಳಲ್ಲಿ ಇರುವ ಮಕ್ಕಳಿಗೆ ಪಾಠ ಹೇಳಲು 60 ರಿಂದ 65 ಕಿ.ಮೀ ವರೆಗೂ ನಿತ್ಯ ಸೈಕಲ್ ತುಳಿದು ಸಾಗುತ್ತಾರೆ.

ರಾಜೇಶ್ ಕುಮಾರ್ ಶರ್ಮ

ಇವರೇ ನಿಜವಾದ ಶಿಕ್ಷಕರು
ದೆಹಲಿಯ ಮೆಟ್ರೊ ಬ್ರಿಡ್ಜ್ ಕೆಳಗೆ ಸ್ಲಂ ಮಕ್ಕಳಿಗಾಗಿ ನಿತ್ಯವು ಸುಮಾರು 200 ಮಕ್ಕಳಿಗೆ ಪಾಠ ಮಾಡುತ್ತಾರೆ. 2005 ರಲ್ಲಿ ಶುರುವಾದ ಇವರ ಶಾಲೆ ಅಂಡರ್ ದಿ ಬ್ರಿಡ್ಜ್ ಸ್ಕೂಲ್ ಎಂದೇ ಖ್ಯಾತಿ.

ಅಬ್ದುಲ್ ಮಲ್ಲಿಕ್

ಇವರೇ ನಿಜವಾದ ಶಿಕ್ಷಕರು
ಕೇರಳದ ಮಲ್ಲಪುರಂ ಜಿಲ್ಲೆಯ ಪ್ರಾಥಮಿಕ ಶಾಲೆಯ ಈ ಶಿಕ್ಷಕ ಮಕ್ಕಳಿಗಾಗಿ ನಿತ್ಯವು ಈಜಿಕೊಂಡು ಹೋಗಿ ಪಾಠ ಮಾಡಿ ಬರುತ್ತಾರೆ. ಬಸ್ನಲ್ಲಿ ಪ್ರಯಾಣ ಮಾಡಿದರೆ ಮೂರು ಗಂಟೆ ವ್ಯರ್ಥವಾಗುತ್ತದೆ ಎಂದು ನದಿಯಲ್ಲಿ ಈಜಿಕೊಂಡು ಹೋಗಿ ಪಾಠ ಮಾಡುತ್ತಾರೆ.

ಇವರಿಷ್ಟೇ ಅಲ್ಲ ಇಂತಹ ಅನೇಕ ಮಹಾ ಶಿಕ್ಷಕರು ಈ ದೇಶದಲ್ಲಿ ಇದ್ದಾರೆ. ಇವರೆಲ್ಲರು ಭಾರತದ ಭವಿಷ್ಯ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ. ಶಿಕ್ಷಕ ವೃತ್ತಿಗೆ ವಿಶೇಷ ಗೌರವ ತೊಂದುಕೊಟ್ಟಿರುವ ಇವರುಗಳಿಗೇ ಒಂದು ಸಲಾಂ.

English summary
This teachers day, Careerindia takes the opportunity to honour the most unconventional teachers our country has ever seen. They are the wonderful people who have put their lives to shape students lives by guiding them to achieve success in life.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia