ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ವಿವಿಗಳ ಕುಸಿತ

Posted By:

ಕೆಲ ತಿಂಗಳುಗಳ ಹಿಂದಷ್ಟೇ ವಿಶ್ವ ರ್ಯಾಂಕಿಂಗ್ ನಲ್ಲಿ ಗಮನ ಸೆಳೆದಿದ್ದ ಭಾರತದ ವಿಶ್ವವಿದ್ಯಾಲಯಗಳು ಈಗ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ವಿಶ್ವದ ಶ್ರೇಷ್ಠ ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಹಿಂದೆ ಬಿದ್ದಿದ್ದು, ಭಾರಿ ನಿರಾಸೆ ಮೂಡಿಸಿದೆ.

ಟೈಮ್ಸ್ ಹೈಯರ್ ಎಜುಕೇಷನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್-2018 ಪಟ್ಟಿ ಬಿಡುಗಡೆಯಾಗಿದ್ದು, ವಿಶ್ವದ ಟಾಪ್ 1000 ವಿವಿಗಳಲ್ಲಿ ಭಾರತದ ಯೂನಿವರ್ಸಿಟಿಗಳ ರ್ಯಾಂಕಿಂಗ್ ಕುಸಿತ ಕಂಡಿದೆ.

ಬೋಧನೆ, ಸಂಶೋಧನೆ, ಮೂಲಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಆಕ್ಸಫರ್ಡ್ ಮತ್ತು ಕೇಂಬ್ರಿಡ್ಜ್ ವಿವಿಗಳು ಮೊದಲ ಸ್ಥಾನದಲ್ಲಿವೆ.

ಭಾರತದ ವಿವಿಗಳ ಕುಸಿತ

ಈ ಹಿಂದೆ, ಮೊದಲ ಸಾವಿರ ರ್ಯಾಂಕಿಂಗ್ ಪಡೆದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ 31 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದವು. ಆದರೆ ಹೊಸ ಸಮೀಕ್ಷೆಯ ಪ್ರಕಾರ ಈ ಸಂಖ‌್ಯೆ 30ಕ್ಕೆ ಕುಸಿದಿದೆ.

ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯು ಕಳೆದ ವರ್ಷ 201-250ರ ದರ್ಜೆಯಲ್ಲಿತ್ತು. ಆದರೆ ಈ ವರ್ಷ ಇದು 251-300ರ ದರ್ಜೆಯಲ್ಲಿ ಸ್ಥಾನ ಪಡೆದಿದೆ. ಆದರೆ ಬಾಂಬೆ ಶಾಖೆಯು 351-400ರ ದರ್ಜೆಗೆ ಮರಳಿದೆ' ಎಂದು ಸಮೀಕ್ಷೆ ನಡೆಸಿದ 'ಟೈಮ್ಸ್ ಹೈಯರ್ ಎಜುಕೇಶನ್' ಸಂಸ್ಥೆ ಹೇಳಿದೆ. ಐಐಟಿಯ ಕಾನ್ಪುರ, ದೆಹಲಿ, ಮದ್ರಾಸ್ ಶಾಖೆಗಳೂ ರ್ಯಾಂಕಿಂಗ್‌ನಲ್ಲಿಹಿನ್ನಡೆ ಅನುಭವಿಸಿವೆ.

ಜಾಗತಿಕವಾಗಿ ಸ್ಪರ್ಧೆ ಹೆಚ್ಚುತ್ತಿರುವುದರಿಂದಾಗಿ ಭಾರತದ ವಿಶ್ವವಿದ್ಯಾಲಯಗಳು ರ‍್ಯಾಂಕಿಂಗ್‌ನಲ್ಲಿ ಹಿಂದೆ ಬಿದ್ದಿರುವುದು ಭಾರತಕ್ಕೆ ನಿರಾಸೆ ತಂದಿದೆ. ಇದೇ ವೇಳೆ ಚೀನಾ, ಹಾಂಕಾಂಗ್ ಮತ್ತು ಸಿಂಗಪುರ ವಿಶ್ವವಿದ್ಯಾಲಯಗಳು ಸತತವಾಗಿ ಉತ್ತಮ ಸಾಧನೆ ತೋರುತ್ತಿವೆ ಎಂದು ಟಿಎಚ್‌ಇ ಜಾಗತಿಕ ರ‍್ಯಾಂಕಿಂಗ್‌ನ ನಿರ್ದೇಶಕ ಫಿಲ್ ಬ್ಯಾಟಿ ಹೇಳಿದ್ದಾರೆ.

ಈ ವರ್ಷ ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗುಣಮಟ್ಟ ಮತ್ತು ಸಂಶೋಧನೆಯಿಂದಾಗಿ ಬರುವ ಆದಾಯ ಹೆಚ್ಚಿರುವುದು ಗುಣಾತ್ಮಕ ಅಂಶ. ಸಂಶೋಧನೆಯ ಮಹತ್ವವನ್ನು ವಿಶ್ವವಿದ್ಯಾಲಯಗಳು ಗುರುತಿಸುತ್ತಿವೆ. ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳ ಸ್ಥಾಪನೆಯ ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ಭಾರತವು ಉತ್ತಮ ಸಾಧನೆ ತೋರುವ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ.

ಭಾರತದ ವಿಶ್ವವಿದ್ಯಾಲಯಗಳಲ್ಲಿ ಓದಲು ಬರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸುವುದು ಮತ್ತು ಅಂತರರಾಷ್ಟ್ರೀಯ ವಿದ್ವಾಂಸರನ್ನು ದೀರ್ಘಾವಧಿ ಬೋಧಕರ ಹುದ್ದೆಗೆ ನೇಮಿಸಿಕೊಳ್ಳುವುದರ ಮೇಲೆ ಸರ್ಕಾರದ ನಿರ್ಬಂಧದಿಂದಾಗಿಯೇ ಭಾರತದ ಸಾಧನೆ ಕಳಪೆಯಾಗಿದೆ ಎಂದು ರ‍್ಯಾಂಕಿಂಗ್ ತಜ್ಞರು ಆರೋಪಿಸಿದ್ದಾರೆ.

English summary
The Times Higher Education World University Rankings 2018 of top 1,000 universities in the world has been released. Some of the premier Indian institutes such as IIT Delhi and IISc Bangalore have slide down in the rankings to lower bands. Not a single Indian institute was able to made it to the top 100 list.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia