ಇವು ಭಾರತದಲ್ಲಿನ ಟಾಪ್ 10 ಕಾಮರ್ಸ್ ಕಾಲೇಜ್‌ಗಳು

By Rajatha

ಹೆಚ್ಚಿನ ವಿದ್ಯಾರ್ಥಿಗಳು ತಾನು ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕೆಂಬ ಗುರಿ ಇರುತ್ತದೆ. ಅವರು ಅದಕ್ಕೆ ಬೇಕಾದಂತಹ ಕೋರ್ಸ್‌ನ್ನು ಆಯ್ಕೆ ಮಾಡುತ್ತಾರೆ. ಇನ್ನೂ ಕೆಲವರು ಚಾರ್ಟೆಡ್ ಅಕೌಂಟೆಂಟ್ ಆಗಬೇಕು, ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಬೇಕೆಂಬ ಗುರಿ ಹೊಂದಿರುತ್ತಾರೆ. ಆದರೆ ಹಲವಾರು ವಿದ್ಯಾರ್ಥಿಗಳಲ್ಲಿ ಪಿಯುಸಿ ಆದ ನಂತರ ಏನು ಮಾಡ್ತಿಯಾ ಅಂತ ಕೇಳಿದರೆ ಡಿಗ್ರಿ ಮಾಡುತ್ತೇನೆ ಅಂತಾರೆ. ಕಾಮರ್ಸ್‌ನಲ್ಲಿ ಪದವಿ ಪಡೆದವರಿಗೆ ಹಲವಾರು ಉದ್ಯೋಗ ಅವಕಾಶಗಳಿವೆ. ಅಡಿಟರ್, ಚಾರ್ಟೆಡ್ ಅಕೌಂಟೆಂಟ್, ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಬೇಕಾದರೆ ಕಾಮರ್ಸ್ ಪದವಿ ಬೇಕೆ ಬೇಕು.

ವೃತ್ತಿ ಜೀವನದ ಯೋಜನೆಗಳು ಯಾವುದನ್ನೂ ಲೆಕ್ಕಿಸದೆ ಹೆಚ್ಚಿನವರು ಮಾಡುವ ಕೋರ್ಸ್ ಎಂದರೆ ಪದವಿ. ಹಾಗಾಗಿ ಡಿಗ್ರಿ ಕಾಲೇಜುಗಳ ನಡುವೆ ಬಹಳ ಪೈಪೋಟಿ ಇರುತ್ತದೆ. ತಮ್ಮನ್ನು ದೇಶದ ಟಾಪ್ 10 ಪಟ್ಟಿಯಲ್ಲಿ ಸೇರಿಸಲು ಹರಸಾಹಸ ಮಾಡುತ್ತಾರೆ. ಭಾರತದಲ್ಲಿರುವ ಟಾಪ್ 10 ಕಾಮರ್ಸ್ ಕಾಲೇಜು ಯಾವುದು ಎಂಬುದು ಇಲ್ಲಿದೆ.

1. ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ನವದೆಹಲಿ

1. ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ನವದೆಹಲಿ

ನ್ಯಾಕ್ ವತಿಯಿಂದ A+ ಗ್ರೇಡ್ ಹೊಂದಿರುವ ಈ ಕಾಲೇಜು, ಬಹಳ ಹಳೆಯ ಕಾಲೇಜಾಗಿದ್ದು, ಕಾಮರ್ಸ್ ನಲ್ಲಿ ಉನ್ನತ ವ್ಯಾಸಂಗಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸಿಕೊಡುವಲ್ಲಿ 100% ಯಶಸ್ವಿಯಾಗಿದೆ. ಇಲ್ಲಿ ಬ್ಯಾಚುಲರ್ ಡಿಗ್ರಿ ಅಂದರೆ ಬಿಕಾಂ ಪದವಿ ಕೋರ್ಸ್‌ಗೆ ಮೂರು ವರ್ಷಕ್ಕೆ 90,000ರೂ. ಶುಲ್ಕವಿದೆ.

2. ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ನವದೆಹಲಿ

2. ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ನವದೆಹಲಿ

ಮಹಿಳೆಯರಿಗಾಗಿಯೇ ಇರುವ ಕಾಮರ್ಸ್‌ ಕಾಲೇಜುಗಳಲ್ಲಿ ಲೇಡಿ ಶ್ರೀ ರಾಮ್ ಕಾಲೇಜ್ ದೇಶದಲ್ಲಿಯೇ ಬೆಸ್ಟ್ ಕಾಲೇಜು. ಇಲ್ಲಿಯ ಫೀಸ್ ಕೂಡಾ ಬಹಳ ಕಡಿಮೆ ಇದೆ. ಹಾಗಂತ ಇಲ್ಲಿನ ಭೋದನಾ ಗುಣಮಟ್ಟ ಹಾಗೂ ಉದ್ಯೋಗ ಒದಗಿಸಿಕೊಡುವುದರಲ್ಲಿ ಹಿಂದುಳಿದಿದೆ ಎಂಬ ಅರ್ಥವಲ್ಲ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸಿಕೊಡುವಲ್ಲಿ 90% ಯಶಸ್ವಿಯಾಗಿದೆ.

3. ಲಾಯೆಲಾ ಕಾಲೇಜ್ , ಚೆನ್ನೈ

3. ಲಾಯೆಲಾ ಕಾಲೇಜ್ , ಚೆನ್ನೈ

ದಕ್ಷಿಣ ಭಾರತದಲ್ಲಿ ಕಾಮರ್ಸ್ ಪದವಿ ಪಡೆಯಬೇಕೆಂದಾದರೆ ಚೆನ್ನೈನಲ್ಲಿರುವ ಲಾಯೆಲಾ ಕಾಲೇಜು ಬೆಸ್ಟ್. ಅಷ್ಟೇ ಅಲ್ಲದೆ ಉದ್ಯೋಗ ಕಲ್ಪಿಸಿಕೊಡುವುದರಲ್ಲೂ ಈ ಕಾಲೇಜು ಮುಂದಿದೆ. ಅಮೆಜಾನ್, ಜೆನೆಮಿಟಿಕ್ ಹಾಗೂ ಸ್ಟ್ರಾಟೇಜ್‌ ಸೊಲ್ಯೂಶನ್‌ನಂತಹ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಈ ಕಾಲೇಜ್‌ಗೆ ಆಗಾಗ ಬರುತ್ತಿರುತ್ತವೆ. ಇಲ್ಲಿ ಫೀಸ್‌ಕೂಡ ಬಹಳ ಕಡಿಮೆ. ಮೂರು ವರ್ಷದ ಕಾಮರ್ಸ್‌ ಬ್ಯಾಚುಲರ್ ಡಿಗ್ರಿಗೆ 13,842 ರೂ. ಇದೆ.

4. ಕ್ರಿಸ್ಟ್ ಕಾಲೇಜ್, ಬೆಂಗಳೂರು

4. ಕ್ರಿಸ್ಟ್ ಕಾಲೇಜ್, ಬೆಂಗಳೂರು

ದಕ್ಷಿಣ ಭಾರತದಲ್ಲಿರುವ ಇನ್ನೊಂದು ಉತ್ತಮ ಕಾಲೇಜ್ ಎಂದರೆ ಬೆಂಗಳೂರಿನಲ್ಲಿರುವ ಕ್ರಿಸ್ಟ್ ಕಾಲೇಜ್. ಕಳೆದ ಶೈಕ್ಷಣಿಕ ವರ್ಷದಲ್ಲಿ ಇಲ್ಲಿನ ಸುಮಾರು 700 ವಿದ್ಯಾರ್ಥಿಗಳು ಉತ್ತಮ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇದು ಪ್ರೈವೆಟ್ ಕಾಲೇಜ್ ಆಗಿರುವುದರಿಂದ ಇಲ್ಲಿನ ಫೀಸ್‌ ಕೂಡಾ ಉಳಿದೆಲ್ಲಾ ಕಾಲೇಜಿಗಿಂತ ಸ್ವಲ್ಪ ಜಾಸ್ತಿನೇ ಇದೆ. ಇಲ್ಲಿ ಕಾಮರ್ಸ್ ಪದವಿಗೆ ಸುಮಾರು 2 ಲಕ್ಷ ಕ್ಕೂ ಅಧಿಕ ಫೀಸ್ ಇದೆ.

5. ಹಂಸರಾಜ್ ಕಾಲೇಜ್, ದೆಹಲಿ

5. ಹಂಸರಾಜ್ ಕಾಲೇಜ್, ದೆಹಲಿ

ಈ ಕಾಲೇಜ್ ತನ್ನ ವಿದ್ಯಾರ್ಥಿಗಳಿಗೆ ವಲ್ಡ್ ಕ್ಲಾಸ್ ಸೌಲಭ್ಯವನ್ನು ಒದಗಿಸುತ್ತದೆ. ಈ ಕಾಲೇಜು 54000ಫೀಸ್‌ನ್ನು ಹೊಂದಿದೆ. ತರಗತಿಯಲ್ಲಿ ಕಲಿತಿರುವುದನ್ನು ನೈಜ ಜಗತ್ತಿನಲ್ಲಿ ಅನ್ವಯಿಸಲು ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಉದ್ಯೋಗಾವಕಾಶ ಕಲ್ಪಿಸುವುದರಲ್ಲೂ ಹಂಸರಾಜ್ ಕಾಲೇಜು ಯಶಸ್ವಿಯಾಗಿದೆ.

6.ಹಿಂದೂ ಕಾಲೇಜ್, ದೆಹಲಿ

6.ಹಿಂದೂ ಕಾಲೇಜ್, ದೆಹಲಿ

ಬಹುಸಂಖ್ಯಾತರು ನಡೆಸುತ್ತಿರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಹಿಂದೂ ಕಾಲೇಜ್ ಕೂಡಾ ಒಂದು. ಸಾಧಾರಣ ಶುಲ್ಕವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವುದರಲ್ಲಿ 95% ಯಶಸ್ವಿಯಾಗಿದೆ..

7.ಅನಿಲ್ ಸುರೇಂದ್ರ ಮೋದಿ ಕಾಲೇಜ್ ಆಫ್ ಕಾಮರ್ಸ್, ಮುಂಬೈ

7.ಅನಿಲ್ ಸುರೇಂದ್ರ ಮೋದಿ ಕಾಲೇಜ್ ಆಫ್ ಕಾಮರ್ಸ್, ಮುಂಬೈ

ಕಾಮರ್ಸ್‌ಗಾಗಿಯೇ ಇರುವ ಕಾಲೇಜ್ ಇದಾಗಿದ್ದು, ಇಲ್ಲಿ ಸುಮಾರು 2200ಪದವಿ ವಿದ್ಯಾರ್ಥಿಗಳು ಹಾಗೂ 30 ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದಾರೆ. ಫೈನಾನ್ಸ್ ಹಾಗೂ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲೂ ಕೋರ್ಸ್‌ಗಳಿವೆ. 25 ವರ್ಷ ಹಳೆಯ ಕಾಲೇಜ್ ಇದಾಗಿದ್ದು. ಮೂರು ವರ್ಷದ ಪದವಿ ವ್ಯಾಸಾಂಗಕ್ಕೆ 6.75 ಲಕ್ಷ ಫೀಸ್‌ನ್ನು ಹೊಂದಿದೆ.

 

 

8. ಸೆಂಟ್ ಜೋಸೆಫ್ ಕಾಲೇಜ್, ಬೆಂಗಳೂರು

8. ಸೆಂಟ್ ಜೋಸೆಫ್ ಕಾಲೇಜ್, ಬೆಂಗಳೂರು

ಯುಜಿಸಿಯಿಂದ ಮಾನ್ಯತೆ ಪಡೆದಿರುವ ಈ ಕಾಲೇಜ್ 135 ವರ್ಷದ ಇತಿಹಾಸ ಹೊಂದಿದ್ದು ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಕಾಲೇಜ್ ಇದಾಗಿದೆ. ಬಿಕಾಂ ಪದವಿಗೆ 70000ಫೀಸ್‌ನ್ನು ಹೊಂದಿದೆ. ಪ್ರತಿವರ್ಷ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಈ ಕಾಲೇಜ್‌ಗೆ ಆಗಮಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

 

 

9. ಮದ್ರಾಸ್ ಕ್ರಿಸ್ಟಿಯನ್ ಕಾಲೇಜ್, ಚೆನ್ನೈ

9. ಮದ್ರಾಸ್ ಕ್ರಿಸ್ಟಿಯನ್ ಕಾಲೇಜ್, ಚೆನ್ನೈ

ಈ ಕಾಲೇಜು ಎಲ್ಲರಿಗೂ ಉದ್ಯೋಗದ ಸಮಾನ ಅವಕಾಶವನ್ನು ಪ್ರೋತ್ಸಾಹಿಸುತ್ತದೆ. ಇಲ್ಲಿನ ಬೋಧನೆಯ ಗುಣಮಟ್ಟ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮೂಲಭೂತ ಸೌಕರ್ಯಗಳನ್ನು ಗಮನಿಸಿದಾಗ ಇಲ್ಲಿನ ಶುಲ್ಕ ಸಮಂಜಸವಾಗಿದೆ ಎಂದನಿಸುತ್ತದೆ.

10.ಸಿಂಬೋಸ್ಸಿಸ್ ಕಾಲೇಜ್ ಆಫ್ ಆರ್ಟ್‌ ಆಂಡ್ ಕಾಮರ್ಸ್

10.ಸಿಂಬೋಸ್ಸಿಸ್ ಕಾಲೇಜ್ ಆಫ್ ಆರ್ಟ್‌ ಆಂಡ್ ಕಾಮರ್ಸ್

ಸಿಂಬೋಸಿಸ್ ಗ್ರೂಪ್‌ನ ಕೆಳಗಿರುವ ಸುಮಾರು 30 ಸಂಸ್ಥೆಗಳಲ್ಲಿ ಕಾಮರ್ಸ್ ಕೋರ್ಸ್ ಇಲ್ಲಿ ಉತ್ತಮವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಪ್ರಾಕ್ಟಿಕಲ್‌ನ್ನು ನಡೆಸಲಾಗುತ್ತದೆ. ಮೂರು ವರ್ಷದ ಪದವಿಗೆ ಸುಮಾರು 50,000 ಫೀಸ್ ಇದೆ. ಇಲ್ಲಿಂದ ಪದವಿ ಪಡೆದ ಬಹಳಷ್ಟು ವಿದ್ಯಾರ್ಥಿಗಳು ಎಮ್ಎನ್‌ಸಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
There is a wide array of career options available to those pursuing a degree in commerce. These range from being an auditor to a chartered accountant.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X