ದೂರ ಶಿಕ್ಷಣದ ಮೂಲಕ ಎಂಬಿಎ ಮಾಡಬೇಕೆಂದಿದ್ದೀರಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಕಾಲೇಜ್

Written By: Rajatha

ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಬ್ಯಾಚುಲರ್ ಡಿಗ್ರಿ ನಂತರ ಉನ್ನತ ಶಿಕ್ಷಣ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಫ್ಯಾಮಿಲಿ ಸಮಸ್ಯೆಯಿಂದಾಗಿಯೋ, ಹಣಕಾಸಿನ ತೊಂದರೆಯಿಂದಾಗಿಯೋ ಅಥವಾ ಇನ್ಯಾವುದೋ ಕಾರಣದಿಂದಾಗಿ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗೋದಿಲ್ಲ. ಹಾಗಿರುವಾಗ ಅವರ ಉನ್ನತ ಶಿಕ್ಷಣದ ಕನಸನ್ನು ಈಡೇರಿಸಲು ಇರುವ ಏಕೈಕ ಮಾರ್ಗವೆಂದರೆ ದೂರಶಿಕ್ಷಣ.

ದೂರಶಿಕ್ಷಣದ ಮೂಲ ಎಂಬಿಎ ಪದವಿ ನೀಡುವ ನೂರಾರು ಸಂಸ್ಥೆಗಳು ಭಾರತದಲ್ಲಿದೆ. ನಿಮಗೂ ದೂರಶಿಕ್ಷಣದ ಮೂಲಕ ಎಂಬಿಎ ಮಾಡಬೇಕೆಂದಿದ್ದರೆ ಇಲ್ಲಿದೆ ಟಾಪ್ 10 ಎಂಬಿಎ(ದೂರ ಶಿಕ್ಷಣ) ಕಾಲೇಜುಗಳ ವಿವರ.

1. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ(IGNOU), ನವದೆಹಲಿ

ಭಾರತದ ಕೇಂದ್ರ ಸರ್ಕಾರ ನಡೆಸಲ್ಪಡುವ ಈ ಕಾಲೇಜಿನಲ್ಲಿ ಸುಮಾರು 4 ಮಿಲಿಯನ್ ವಿದ್ಯಾರ್ಥಿಗಳನ್ನು ಹೊಂದಿದೆ. ಇದು ವಿಶ್ವದಲ್ಲೇ ದೊಡ್ಡ ಮುಕ್ತ ವಿಶ್ವವಿದ್ಯಾನಿಲಯವಾಗಿದೆ. ಈ ಸಂಸ್ಥೆಯಲ್ಲಿ ಎಂಬಿಎ ಪಡೆದವರು ದೊಡ್ಡ ದೊಡ್ಡ ಎಂಎನ್‌ಸಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿನ ಶುಲ್ಕ ಕೂಡಾ ಸಾಮಾನ್ಯರ ಕೈಗೆಟಕುವಂತಿದೆ.

2. ಸಿಂಬೋಸಿಸ್ ಸೆಂಟರ್ ಫಾರ್ ಡಿಸ್ಟೆನ್ಸ್ ಲರ್ನಿಂಗ್ (SCDL), ಪುಣೆ

ಆನ್‌ಲೈನ್ ಕ್ಲಾಸ್‌ರೂಮ್‌ನ್ನು ಪರಿಚರಿಯಿಸಿರುವ ಮೊಟ್ಟ ಮೊದಲ ಸಂಸ್ಥೆ ಇದಾಗಿದೆ. ಡಿಜಿಟಲ್ ಮೊನಿಟರಿಂಗ್ ಸಿಸ್ಟಮ್ ಕೂಡಾ ಉತ್ತಮವಾಗಿದೆ. ವಿದ್ಯಾರ್ಥಿಗಳು ಎಲ್ಲಿಂದ ಬೇಕಾದರೂ ತಮ್ಮ ಭೋಧಕರಲ್ಲಿ ಆನ್‌ಲೈನ್ ಚಾಟ್ ಮೂಲಕ ಸಂಭಾಷಣೆ ನಡೆಸಬಹುದಾಗಿದೆ. ಪ್ರತಿಯೊಂದು ವ್ಯವಸ್ಥೆಯು ಡಿಜಿಟಲೀಕರಣವಾಗಿದೆ. ಮನೆಯಲ್ಲೇ ಕುಳಿತು ಕ್ಲಾಸ್‌ ರೂಂ ಅನುಭವ ಪಡೆಯಬಹುದಾಗಿದೆ.

3. ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್‌, ಗಾಜಿಯಾಬಾದ್

ಈ ಕಾಲೇಜಿ ಎಂಬಿಎ ವಿದ್ಯಾರ್ಥಿಗಳಿಗೆ ಇತರ ಕಾಲೇಜುಗಳಲ್ಲಿರುವಂತೆ ಸಮಗ್ರ ಪರೀಕ್ಷೆ, ರಸಪ್ರಶ್ನೆಗಳನ್ನೆಲ್ಲಾ ನಡೆಸುತ್ತದೆ. ರೆಗ್ಯುಲರ್ ಕಾಲೇಜುಗಳಿಗಿಂತ ಈ ಕಾಲೇಜು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ.

4. ಐಸಿಎಫ್‌ಎಐ ವಿಶ್ವವಿದ್ಯಾನಿಯದ, ಹೈದರಾಬಾದ್

ಈ ಕಾಲೇಜಿನಲ್ಲಿ ದೂರಶಿಕ್ಷಣ ಮಾಡುವುದರಿಂದ ಒಂದು ಲಾಭವೆಂದರೆ. ಇಲ್ಲಿ ಪ್ರತಿಯೊಂದು ಯುನಿಟ್‌ಗೆ ಸಂಬಂಧಪಟ್ಟಂತೆ ಕೇಸ್‌ ಸ್ಟಡೀಸ್ ಇರುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಬಹುಬೇಗನೆ ಉದ್ಯೋಗ ಗಳಿಸುತ್ತಾರೆ. ಇಲ್ಲಿ ವಿದ್ಯಾರ್ಥೀಗಳಿಗೆ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯವೂ ಇದೆ.

5. ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾನಿಲಯ, ಸಿಕ್ಕಿಂ

ಇಲ್ಲಿ ಪ್ರತಿ ಕೋರ್ಸ್‌ಗೆ 20,000ರೂ. ಶುಲ್ಕವಿದೆ. ಈ ಶುಲ್ಕವನ್ನು ಇಎಮ್‌ಐ ಮೂಲಕವೂ ಪಾವತಿಸಬಹುದು. ಹಾಗಾಗಿ ಹಣವಿಲ್ಲವೆಂದು ಎಂಬಿಎ ಮಾಡೋದಿಲ್ಲ ಎನ್ನುವಹಾಗಿಲ್ಲ. ಯಾರೂ ಬೇಕಾದರೂ ಸುಲಭವಾಗಿ ಎಂಬಿಎ ಕೋರ್ಸ್ ಸೇರಿಕೊಳ್ಳಬಹುದು.

6. ನರ್ಸಿ ಮೊಂಜೀ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಬೆಂಗಳೂರು

ಈ ಸಂಸ್ಥೆಯಲ್ಲಿ 200ಕ್ಕೂ ಅಧಿಕ ನುರಿತ ಶಿಕ್ಷಕರಿದ್ದಾರೆ. ಈ ಸಂಸ್ಥೆಯು ಎಸ್‌ಎಎಸ್‌ ಜೊತೆಗೆ ಪಾರ್ಟನರ್‌ಶಿಪ್ ಹೊಂದಿದೆ. ಇಲ್ಲಿ ಕಲಿತಂತಹ ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿದ್ದಾರೆ.

7. ಅಣ್ಣಾಮಲೈ ಯುನಿವರ್ಸಿಟಿ, ಚಿದಂಬರಮ್

ದೂರಶಿಕ್ಷಣ ಕಲಿಕಾ ವಿಧಾಣವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಕೋರ್ಸ್‌ಗಳನ್ನು ಮಾಡಲಾಗಿದೆ. ಇದು ಮನೆಯಲ್ಲಿಯೇ ಶಿಕ್ಷಣವನ್ನು ಪಡೆಯುವ ಸೌಲಭ್ಯವೂ ಇದೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕಾಲೇಜಿನಿಂದ ದೂರಶಿಕ್ಷಣ ಅಭ್ಯಾಸ ಮಾಡುತ್ತಾರೆ.

8. ಅಮ್ಟಿ ಯುನಿವರ್ಸಿಟಿ, ಜೈಪುರ್

ದೂರ ಶಿಕ್ಷಣದ ಮೂಲಕ ಎಂಬಿಎ ಮಾಡಲು ಇರುವ ಬೆಸ್ಟ್‌ ಟಾಪ್‌ 10 ವಿಶ್ವವಿದ್ಯಾನಿಲಯಗಳಲ್ಲಿ ಆಮ್ಟಿ ಯುನಿವರ್ಸಿಟಿಯೂ ಒಂದು. ಈ ಸಂಸ್ಥೆಯು ಉತ್ತಮ ಭೋಧಕರ ತಂಡವನ್ನು ಹೊಂದಿದೆ. ವಿದ್ಯಾರ್ಥಿಗಳ ಕೆರೆಯರ್‌ಗಾಗಿ 24x7ಸೇವೆಯನ್ನು ಪ್ರಾರಂಭಿಸಿದೆ. ಇಲ್ಲಿನ ಹಳೆ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.

9. ಲವ್ಲಿ ಪ್ರೊಫೇಶನಲ್ ಯುನಿವರ್ಸಿಟಿ, ಫಾಗ್ವಾರಾ

ದೂರ ಶಿಕ್ಷಣದ ವಿದ್ಯಾರ್ಥಿಗಳಿಗೆ 145 ಪ್ಲೇಸ್ಮೆಂಟ್ ಡ್ರೈವ್‌ಗಳನ್ನು ಒದಗಿಸಲಾಗಿದೆ. ಹಾಗಾಗಿ ಉದ್ಯೋಗ ಗಿಟ್ಟಿಸಿಕೊಡುವುದರಲ್ಲಿ ಈ ಕಾಲೇಜು ಮೊದಲ ಸ್ಥಾನದಲ್ಲಿದೆ. ಇತರ ದೂರಶಿಕ್ಷಣ ಎಂಬಿಎ ಕೋರ್ಸ್‌ಗಳಂತೆ ಈ ಯುನಿವರ್ಸಿಟಿ ತನ್ನ ವಿದ್ಯಾರ್ಥಿಗಳಿಗೆ ಅವರಿಗಿಷ್ಟವಾದಂತಹ ವಿಷ್ಯವನ್ನು ಸ್ಪೆಶಲೈಜೇಶನ್ ಆಗಿ ಆಯ್ಕೆ ಮಾಡಲು ಅನುಮತಿ ನೀಡುತ್ತದೆ.

10. ಪ್ರಿನ್. ಎಲ್.ಎನ್.ವೆಲ್ಲಿಂಗ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಡೆವೆಲಪ್ಮೆಂಟ್ ಅಂಡ್ ರಿಸರ್ಚ್, ಬೆಂಗಳೂರು

ಮುಂಬೈನಲ್ಲಿರು ಈ ಸಂಸ್ಥೆಯು ಕೆಲವೇ ಸಂದರ್ಭದಲ್ಲಿ ಟಾಪ್ 10 ದೂರ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಒಂದೇ ಕಮ್ಯೂನಿಟಿಗೆ ಸೇರಿರುವವರು ಎಂಬ ಸ್ವಭಾವವನ್ನು ಹೊಂದಿರುವವರಾಗಿದ್ದಾರೆ.

English summary
Get the latest news on admissions from top universities/colleges. Find online admission forms, eligibility, date notifications details only at Kannada Careerindia.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia