ದೇಶದ ಟಾಪ್‌ 10 ಮೆಡಿಕಲ್ ಕಾಲೇಜುಗಳು ಯಾವ್ಯಾವು ಗೊತ್ತಾ?

Written By: Rajatha

ಅತ್ಯಂತ ಗೌರವಯುತ ಕ್ಷೇತ್ರಗಳಲ್ಲಿ ವೈದ್ಯಕೀಯ ಕ್ಷೇತ್ರವೂ ಒಂದು. ಪ್ರತಿಯೊಬ್ಬ ತಂದೆತಾಯಿಗೂ ಮಕ್ಕಳನ್ನು ಡಾಕ್ಟರ್ ಓದಿಸಬೇಕೆಂಬ ಹಂಬಲ ಇರುತ್ತದೆ. ಭವಿಷ್ಯದ ವೈದ್ಯರಾಗುವವರು ಸರಿಯಾದ ಟ್ರೈನಿಂಗ್‌ನ್ನು ಪಡೆದುಕೊಳ್ಳುವುದು ಅತೀ ಅಗತ್ಯ. ಅದಕ್ಕೆ ಬೇಕಾದ ತರಬೇತಿ ಸಿಗಬೇಕಾದರೆ ಕಾಲೇಜ್ ಕೂಡಾ ಚೆನ್ನಾಗಿರಬೇಕು. ಇತ್ತೀಚೆಗಂತೂ ಹಲವು ವೈದ್ಯಕೀಯ ಕಾಲೇಜುಗಳು ತಲೆ ಎತ್ತಿವೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ತಮ್ಮನ್ನು ತಾವು ಬೆಸ್ಟ್ ಎಂದು ತೋರಿಸಿಕೊಳ್ಳುವಲ್ಲಿ ಕಾಲೇಜುಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಹಾಗಾದ್ರೆ ಸದ್ಯಕ್ಕೆ ಭಾರತದಲ್ಲಿರುವ ಟಾಪ್ 10 ಮೆಡಿಕಲ್ ಕಾಲೇಜು ಯಾವುದು ಎಂಬುವುದನ್ನು ತಿಳಿಯೋಣ.

1. ಆಲ್ ಇಂಡಿಯಾ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್, ನವದೆಹಲಿ

1956ರಲ್ಲಿ ಪ್ರಾರಂಭವಾದ ಈ ಕಾಲೇಜು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಅಟಾನಮಸ್‌ ಆಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ವಿಶ್ವದ ಉತ್ತಮ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿಸುತ್ತದೆ. ಮೆಡಿಕಲ್ ಟಾಕ್ಸಿಕಾಲಜಿ ಲ್ಯಾಬ್ ಹಾಗೂ ಡಿಎನ್‌ಎ ಫ್ರೋಫೈಲಿಂಗ್ ಲ್ಯಾಬ್‌ನ್ನು 1990ರಲ್ಲಿ ಸ್ಥಾಪಿಸಲಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಕಾಲೇಜು ಒದಗಿಸುತ್ತದೆ.

2. ಕ್ರಿಸ್ಟಿಯನ್ ಮೆಡಿಕಲ್ ಕಾಲೇಜು, ವೆಲ್ಲೂರು

ಹೆಸರೇ ಉಲ್ಲೇಖಿಸುವಂತೆ ವೆಲ್ಲೂರಿನಾದ್ಯಂತವಿರುವ ಆಸ್ಪತ್ರೆ ಇದಾಗಿದೆ. ಅಲ್ಪಸಂಖ್ಯಾತ ಕ್ರೈಸ್ತರಿಂದ ನಡೆಸಲ್ಪಡುವ ಈ ಕಾಲೇಜು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾದ ತರಬೇತಿ ಹಾಗೂ ಸೌಲಭ್ಯವನ್ನು ಒದಗಿಸುತ್ತದೆ. ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಕುಷ್ಠರೋಗದ ಶಸ್ತ್ರಚಿಕಿತ್ಸೆ ಮಾಡಿರುವ ಖ್ಯಾತಿ ಈ ಮೆಡಿಕಲ್ ಕಾಲೇಜಿಗಿದೆ.

3. ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜ್, ಪುಣೆ

ಈ ಕಾಲೇಜನ್ನು ಎರಡನೇ ಮಹಾಯುದ್ದದ ನಂತರ ನಿರ್ಮಿಸಲಾಗಿದೆ. ಸಾಕಷ್ಟು ಮಂದಿ ವೈದ್ಯ ಸೈನಿಕರನ್ನು ಹೊರತರುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಂತರ ಅವರನ್ನು ಭೂ ಸೇನೆ, ವಾಯುಸೇನೆ ಅಥವಾ ನೌಕಾಸೇನೆಯಲ್ಲಿ ಬೇಡಿಕೆಗೆ ಅನುಗುಣವಾಗಿ ನೇಮಿಸಲಾಗುವುದು. ಈ ಕಾಲೇಜು ಈಗಾಗಲೇ ಸಾಕಷ್ಟು ವೈದ್ಯರನ್ನು ಸೇನೆಗೆ ನೀಡಿದೆ.

 

 

4. ಮೌಲಾನ ಆಜಾದ್ ಮೆಡಿಕಲ್ ಕಾಲೇಜ್, ನವದೆಹಲಿ

ಈ ಕಾಲೇಜಿಗೆ 4 ವಿಭಾಗಗಳಿವೆ. ಲೋಕ್‌ ನಾಯಕ್ ಹಾಸ್ಪಿಟಲ್, ಜಿ ಬಿ ಪಾಂಟ್ ಇನ್ಸ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಡ್ಯುಯೆಟ್ ಮೆಡಿಕಲ್ ಎಡ್ಯುಕೇಶನ್ ಆಂಡ್ ರಿಸರ್ಚ್, ಮೌಲಾನ ಆಜಾದ್ ಇನ್ಸ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮತ್ತು ಗುರುನಾನಕ್ ಐ ಸೆಂಟರ್. ಈ ನಾಲ್ಕು ಸಂಸ್ಥೆಗಳೂ ಕೂಡಾ ತಮ್ಮ ಸಿಟಿಯಲ್ಲಿ ಬಹಳ ಪ್ರಸಿದ್ಧವಾಗಿವೆ. ದಿನಕ್ಕೆ ಸುಮಾರು ೭೦೦೦ ಹೊರರೋಗಿಗಳನ್ನು ಈ ಆಸ್ಪತ್ರೆ ಹೊಂದಿದೆ. ಇಲ್ಲಿ ಸುಮಾರು 290 ಪದವಿ ವಿದ್ಯಾರ್ಥಿಗಳು ಹಾಗೂ 245 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

 

 

5. ಗ್ರಾಂಟ್ ಮೆಡಿಕಲ್ ಕಾಲೇಜ್ ಮತ್ತು ಸರ್‌ ಜೆ.ಜೆ ಗ್ರೂಪ್ ಆಫ್ ಹಾಸ್ಪಟಲ್ಸ್‌, ಮುಂಬೈ

1845ರಲ್ಲಿ ಸ್ಥಾಪನೆಯಾಗಿರುವ ವೈದ್ಯಕೀಯ ವಿಜ್ಞಾನ ತರಬೇತಿ ಹಾಗೂ ಉತ್ತಮ ಬೋಧನೆಗೆ ಹೆಸರುವಾಸಿಯಾಗಿದೆ. ಬಡವರಿಗೆ, ಅಗತ್ಯವಿರುವವರಿಗೆ ಸರಿಯಾಗಿ ಗುಣಮಟ್ಟದ ಆರೈಕೆಯನ್ನು ನೀಡಲು ತಮ್ಮ ಕಾಲೇಜಿನಿಂದ ಹೊರಬೀಳುವ ವೈದ್ಯರಿಗೆ ಇಲ್ಲಿ ತಿಳಿಸಲಾಗುತ್ತದೆ.

6. ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜ್, ನವದೆಹಲಿ

ದೇಶದ ಮಹಿಳಾ ಸಬಲೀಕರಣದ ಪ್ರವರ್ತಕರಲ್ಲಿ ಒಬ್ಬರಾಗಿರುವವರು ಲೇಡಿ ಹಾರ್ಡಿಂಗ್, ಈ ಕಾಲೇಜು 1916 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ಉತ್ತಮ ವೈದ್ಯರನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಮೊದಲಿಗೆ 80 ಬೆಡ್‌ಗಳಲ್ಲಿ ಪ್ರಾರಂಭವಾದ ಈ ಕಾಲೇಜು ಈಗ 1200 ಬೆಡ್‌ ಹಾಗೂ ಅಷ್ಟೇ ಹೊರರೋಗಿ ವಿಭಾಗವನ್ನೂ ಹೊಂದಿದೆ.

7. ಕಿಂಗ್‌ಜಾರ್ಜ್ ಮೆಡಿಕಲ್ ಯುನಿವರ್ಸಿಟಿ, ಲಕ್ನೋ

ದಶಕಗಳಿಂದ ದೇಶ ಹೆಮ್ಮೆಪಡುವಂತಹ ವೈದ್ಯಕೀಯ ವಿಶ್ವವಿದ್ಯಾನಿಲಯಗಳಲ್ಲಿ ಇದೂ ಒಂದು. ಈ ವಿಶ್ವವಿದ್ಯಾನಿಲಯವು ವೈದ್ಯಕೀಯ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತನ್ನನ್ನು ತಾನು ಅಪ್‌ಡೇಟ್ ಮಾಡಿಟ್ಟುಕೊಂಡಿದೆ. ಇಲ್ಲಿನ ಕಾರ್ಡಿಯೋಲಜಿ ವಿಭಾಗವು ವಿಶ್ವದಲ್ಲೇ ಹೆಸರುವಾಸಿಯಾಗಿರುವಂತಹದ್ದು.

8. ಕಸ್ತೂರಿ ಬಾ ಮೆಡಿಕಲ್ ಕಾಲೇಜ್ , ಮಣಿಪಾಲ

ವೈದ್ಯಕೀಯಕ್ಕೆ ಸಂಬಂಧ ಪಟ್ಟಂತಹ ಸಂಶೋಧನೆಯನ್ನು ಮಾಡಲು ಕಸ್ತೂರಿ ಬಾ ಮೆಡಿಕಲ್ ಕಾಲೇಜ್ ಉತ್ತಮವಾಗಿದೆ. 30 ಎಕರೆಯ ಕ್ಯಾಂಪಸ್‌ನ್ನು ಒಳಗೊಂಡಿದೆ. ಸರ್ಕಾರ ನಡೆಸಲ್ಪಡದಿದ್ದರೂ ಈ ಕಾಲೇಜಿನ ಮೂಲ ಸೌಕರ್ಯವು ಶ್ಲಾಘನೀಯವಾಗಿದೆ.

9. ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸಾಯನ್ಸ್, ನವದೆಹಲಿ

ಈ ಕಾಲೇಜು ಸೆಲೆಕ್ಟೆಡ್ ವಿದ್ಯಾರ್ಥಿಗಳನ್ನಷ್ಟೇ ಆಯ್ಕೆ ಮಾಡುತ್ತದೆ. ಹಾಗಾಗಿ ಇದು ಟಾಪ್ ಪೊಸಿಷನ್‌ನಲ್ಲಿ ಇದೆ. UNICEF, WHO, UNAID, World Bank, ICMR ಹಾಗೂ CSIR ಗೆ ಸಂಬಂಧಿಸಿದ ಬೋಧಕವರ್ಗವನ್ನು ಈ ಕಾಲೇಜು ಹೊಂದಿದೆ. ಮೆಡಿಕಲ್‌ನ್ನು ಹೊರತುಪಡಿಸಿ ಇನ್ನೂ ಅನೇಕ ಕೋರ್ಸ್‌ಗಳನ್ನೂ ಈ ಕಾಲೇಜ್ ಹೊಂದಿದೆ.

10. ಬೆಂಗಳೂರು ಮೆಡಿಕಲ್ ಕಾಲೇಜ್ ಹಾಗೂ ರಿಸರ್ಚ್ ಇನ್ಸಿಸ್ಟಿಟ್ಯೂಟ್, ಬೆಂಗಳೂರು

ಈ ಸಂಸ್ಥೆ 2500ಕ್ಕೂ ಅಧಿಕ ಬೆಡ್‌ನ್ನು ಹೊಂದಿದೆ. ಈ ಕಾಲೇಜ್‌ನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಲೈವ್ ಕೇಸ್‌ಗಳನ್ನು ಹ್ಯಾಂಡಲ್ ಮಾಡಲು ಸಿಗುತ್ತದೆ. ಸಾವಿರಾರು ಪುಸ್ತಕಗಳನ್ನು ಹೊಂದಿರುವ ಲೈಬ್ರೆರಿ ಸೌಲಭ್ಯವನ್ನೂ ಇದು ಹೊಂದಿದೆ.

English summary
it is all the more important that the students who become doctors in the future are trained in an appropriate way. Top 10 Medical Colleges In India

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia