ಭಾರತದಲ್ಲಿನ ಟಾಪ್ 40 ಕಾಮರ್ಸ್ ಕಾಲೇಜುಗಳು ಯಾವುವು ಗೊತ್ತಾ?

By Rajatha

ಎಷ್ಟೆಲ್ಲಾ ಕೋರ್ಸ್‌ಗಳೂ ಬಂದರೂ ಕಾಮರ್ಸ್‌ಗಿರುವ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು. ಚಾರ್ಟೆಡ್ ಅಕೌಂಟೆಂಟ್ ಆಗಲು, ಕಾಮರ್ಸ್‌ ಪದವಿ ಬೇಕೆ ಬೇಕು. ಭಾರತದಲ್ಲಿ ಸಾಕಷ್ಟು ಕಾಮರ್ಸ್ ಕಾಲೇಜುಗಳಿವೆ. ಅವುಗಳಲ್ಲಿ ಟಾಪ್‌ನಲ್ಲಿರುವ 40 ಕಾಲೇಜುಗಳು ಯಾವುವು ಎನ್ನುವುದು ನಿಮಗೆ ಗೊತ್ತಾ?

 

1. ಶ್ರೀ ರಾಮ್ ಕಾಲೇಜ್, ನವದೆಹಲಿ

1. ಶ್ರೀ ರಾಮ್ ಕಾಲೇಜ್, ನವದೆಹಲಿ

1986ರಲ್ಲಿ ಸ್ಥಾಪನೆಯಾದ ಈ ಕಾಲೇಜು. ಪುರುಷರಿಗಾಗಿಯೇ ಇರುವ ಕಾಲೇಜು ಇದಾಗಿದೆ. ಕಾಮರ್ಸ್ ವಿಭಾಗವನ್ನು ಹೊರತುಪಡಿಸಿ, ಇಲ್ಲಿನ ಗ್ಲೋಬಲ್ ಬ್ಯುಸಿನೆಸ್ ಅಪರೇಶನ್ ವಿಭಾಗ ಕೂಡಾ ಉತ್ತಮವಾಗಿದೆ. ಈ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಅವರಿಗಿಷ್ಟವಾದ ಹವ್ಯಾಸ ಹಾಗೂ ಆಸಕ್ತಿಯನ್ನು ಬೆಳೆಸಲು ಪ್ರೋತ್ಸಾಹಿಸುತ್ತದೆ.

 

 

2. ಲೇಡಿ ಶ್ರೀ ರಾಮ್ ಕಾಲೇಜ್, ನವದೆಹಲಿ

2. ಲೇಡಿ ಶ್ರೀ ರಾಮ್ ಕಾಲೇಜ್, ನವದೆಹಲಿ

ಪುರುಷರಿಗಾಗಿ ಸ್ಥಾಪಿಸಲ್ಪಟ್ಟ ಶ್ರೀ ರಾಮ್ ಕಾಲೇಜ್ ಸ್ಥಾಪನೆಯಾದ ಹಲವು ವರ್ಷಗಳ ನಂತರ ಲೇಡಿ ಶ್ರೀ ರಾಮ್ ಕಾಲೇಜು ಸ್ಥಾಪನೆಯಾಯಿತು. ಕೇವಲ ಮಹಿಳೆಯರಿಗಾಗಿಯೇ ಈ ಕಾಲೇಜನ್ನು ಸ್ಥಾಪಿಸಲಾಗಿದೆ. 500 ಎಕರೆ ಕ್ಯಾಂಪಸ್ ಈ ಕಾಲೇಜಿಗಿದೆ. ಸುಮಾರು 2000ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ.

3. ಲೊಯೆಲಾ ಕಾಲೇಜ್, ಚೆನ್ನೈ
 

3. ಲೊಯೆಲಾ ಕಾಲೇಜ್, ಚೆನ್ನೈ

93ವರ್ಷ ಹಳೆಯ ಕಾಲೇಜು ಇದಾಗಿದ್ದು, ಇದರ ಹಳೆ ವಿದ್ಯಾರ್ಥಿಗಳು, ಭಾರತದ ರಾಷ್ಟ್ರಪತಿ, ರಾಜತಾಂತ್ರಿಕರು, ಮನೋರಂಜಕರು, ನಾಗರಿಕ ಸೇವಕರೂ, ಒಲಿಂಪಿಕ್ ಮೆಡಲಿಸ್ಟ್, ಫೀಲೋಸಫರ್ ಕೂಡಾ ಆಗಿದ್ದಾರೆ. ಇಲ್ಲಿನ ಈಗಿನ ವಿದ್ಯಾರ್ಥಿಗಳು ತಮ್ಮ ಹಳೆ ವಿದ್ಯಾರ್ಥಿಗಳನ್ನೇ ಮಾರ್ಗದರ್ಶಕರಾಗಿಟ್ಟುಕೊಂಡು ಅವರ ದಾರಿಯಲ್ಲೇ ನಡೆಯಲು ಪ್ರಯತ್ನಿಸುತ್ತಿದ್ದಾರೆ.

4. ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು

4. ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು

ಟಾಪ್‌ 10ಸಾಲಿನಲ್ಲಿ ಸೇರಿಕೊಂಡಿರುವ ಈ ಕಾಲೇಜು, ಖಾಸಗಿ ಕಾಲೇಜಾಗಿದೆ. ಇಲ್ಲಿನ ಶುಲ್ಕ ಕೂಡಾ ದುಬಾರಿ. ಆದರೆ ಅಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯ ಕೂಡಾ ಅಷ್ಟೇ ಉತ್ತಮವಾಗಿದೆ. ಆ ಕಾಲೇಜಿಗೆ ಹಾಕುವ ಪ್ರತಿಯೊಂದು ರೂಪಾಯಿ ಕೂಡಾ ಸರಿಯಾಗಿ ವಿನಿಯೋಗವಾಗುತ್ತದೆ.

5. ಹಂಸರಾಜ್ ಕಾಲೇಜ್, ನವದೆಹಲಿ

5. ಹಂಸರಾಜ್ ಕಾಲೇಜ್, ನವದೆಹಲಿ

ಶಾರೂಖ್ ಖಾನ್, ಅನುರಾಗ್ ಕಶ್ಯಪ್ ಈ ಕಾಲೇಜಿನ ಹಳೆವಿದ್ಯಾರ್ಥಿಗಳು. ಈ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯನ್ನು ಪ್ರಚೋದಿಸುತ್ತದೆ. ಅದನ್ನು ಹೊರತುಪಡಿಸಿ ಇನ್ನು ಬಹಳಷ್ಟು ವಿಷ್ಯಗಳಲ್ಲಿ ಕಾಲೇಜ್ ಉತ್ತಮವಾಗಿದೆ. ಆಟೋಟಕ್ಕೆ ಸಂಬಂಪಟ್ಟಂತೆ ಒಳಾಂಗಣ, ಹೊರಾಂಗಣ ಕ್ರೀಡಾಂಗಣಗಳಿವೆ.

6. ಹಿಂದೂ ಕಾಲೇಜ್, ನವದೆಹಲಿ

6. ಹಿಂದೂ ಕಾಲೇಜ್, ನವದೆಹಲಿ

ದೆಹಲಿ ಯುನಿವರ್ಸಿಟಿಯ ಅಡಿಯಲ್ಲಿ ಬರುವ ಪ್ರತಿಷ್ಠಿತ ಕಾಲೇಜು ಇದಾಗಿದೆ. ಇಲ್ಲಿನ ಲೈಬ್ರೆರಿಯು, ದೇಶದಲ್ಲಿರುವ ಅತ್ಯಂತ ಹಳೆಯ ಲೈಬ್ರೆರಿಗಳಲ್ಲಿ ಒಂದಾಗಿದೆ. ಲಕ್ಷಾಂತರ ಪುಸ್ತಕಗಳು ಹಾಗೂ ಸಾವಿರಾರು ಇ ಮ್ಯಾಗಜೀನ್‌ಗಳು ಇಲ್ಲಿವೆ.

7. ಅನಿಲ್ ಸುರೇಂದ್ರ ಮೋದಿ ಸ್ಕೂಲ್ ಆಪ್ ಕಾಮರ್ಸ್ , ಮುಂಬೈ

7. ಅನಿಲ್ ಸುರೇಂದ್ರ ಮೋದಿ ಸ್ಕೂಲ್ ಆಪ್ ಕಾಮರ್ಸ್ , ಮುಂಬೈ

ಭಾರತದ ಟಾಪ್ ೪೦ ಕಾಮರ್ಸ್ ಕಾಲೇಜುಗಳ ಪಟ್ಟಿಯಲ್ಲಿ ಅನಿಲ್ ಸುರೇಂದ್ರ ಮೋದಿ ಸ್ಕೂಲ್ ಕೂಡಾ ಒಂದು. ಇಲ್ಲಿನ ಪಠ್ಯ ವಿತರಣಾ ಪದ್ಧತಿಯು ವ್ಯವಸ್ಥಿತವಾಗಿದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಇತರ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಂದ ಬಹಳ ಬೇಗನೇ ಪಾಠವನ್ನು ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿ ಪದವಿ ತರಗತಿಗೆ ಸುಮಾರು ೭ ಲಕ್ಷ ಶುಲ್ಕವಿದೆ.

8.  ಸೆಂಟ್ ಜೋಸೆಫ್ ಕಾಲೇಜ್ , ಬೆಂಗಳೂರು

8. ಸೆಂಟ್ ಜೋಸೆಫ್ ಕಾಲೇಜ್ , ಬೆಂಗಳೂರು

ಕಥೋಲಿಕ್ ಸಂಸ್ಥೆಯಾಗಿರುವ ಸೆಂಟ್. ಜೋಸೆಫ್ ಕಾಲೇಜ್‌ನ್ನು 1882ರಲ್ಲಿ ಫ್ರೆಂಚ್‌ ಫಾರೀನ್ ಮಿಷನ್‌ನ ಫಾದರ್ ಈ ಕಾಲೇಜನ್ನು ಸ್ಥಾಪಿಸಿದರು. ದೇಶದಲ್ಲೇ ಕಾಮರ್ಸ್ ಕಲಿಕೆಗೆ ಉತ್ತಮವಾದ ಕಾಲೇಜ್ ಎನ್ನುವ ಹೆಸರನ್ನು ಇದು ಪಡೆದುಕೊಂಡಿದೆ.

9. ಮದ್ರಾಸ್ ಕ್ರಿಸ್ಟಿಯನ್ ಕಾಲೇಜ್ , ಚೆನ್ನೈ

9. ಮದ್ರಾಸ್ ಕ್ರಿಸ್ಟಿಯನ್ ಕಾಲೇಜ್ , ಚೆನ್ನೈ

ಈ ಕಾಲೇಜನ್ನು ೧೮೩೭ರಲ್ಲಿ ಪ್ರಾರಂಭಿಸಲಾಯಿತು. ಇದು ಹಳೆಯ ಕಾಲೇಜಾಗಿದ್ದು, ಭಾರತದ ಟಾಪ್ ೧೦ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನಗಳಿಸಿದೆ. ಪ್ರತಿಷ್ಠಿತ ಕಾಲೇಜು ಇದಾಗಿದ್ದು, ೨೦೧೩ರಲ್ಲಿ ನ್ಯಾಕ್ ವತಿಯಿಂದೆ ಗ್ರೇಡ್‌ ಪಡೆದುಕೊಂಡಿದೆ. ಈ ಕಾಲೇಜಿನಲ್ಲಿ ಸುಮಾರು ೩೦ ವಿಧಧ ಕೋರ್ಸ್‌ಗಳಿವೆ. ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ಇದಾಗಿದೆ. ಆರ್ಟ್ಸ್, ಸಾಯನ್ಸ್, ಕಾಮರ್ಸ್ ಕೋರ್ಸ್ ಇದೆ. ಇಲ್ಲಿನ ಅಧ್ಯಾಪರೆಲ್ಲಾ ಪಿಹೆಚ್‌ಡಿ ಪದವಿದರರಾಗಿದ್ದಾರೆ. ಇಲ್ಲಿ ಸುಮಾರು ೬೫೦೦ ವಿದ್ಯಾರ್ಥಿಗಳಿದ್ದಾರೆ. ಸುಮಾರು ೨೯೪ ಶಿಕ್ಷಕರು ಇದ್ದಾರೆ.

10. ಸಿಂಬೋಸಿಸ್ ಕಾಲೇಜ್, ಪುಣೆ

10. ಸಿಂಬೋಸಿಸ್ ಕಾಲೇಜ್, ಪುಣೆ

ಟಾಪ್ 10ಕಾಮರ್ಸ್ ಕಾಲೇಜುಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿರುವ ಇನ್ನೊಂದು ಖಾಸಗಿ ಕಾಲೇಜು ಇದಾಗಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಈ ಕಾಲೇಜುಗೆ ಆಗಮಿಸುತ್ತಾರೆ. ಕಾಮರ್ಸ್ ಅಷ್ಟೇ ಅಲ್ಲದೆ ಇನ್ನಷ್ಟು ಆಸಕ್ತಿಕರ ಕೋರ್ಸ್‌ಗಳನ್ನು ಈ ಕಾಲೇಜು ಒದಗಿಸುತ್ತಿದೆ.

11. ರಾಮ್ಜಾಸ್ ಕಾಲೇಜ್, ನವದೆಹಲಿ

11. ರಾಮ್ಜಾಸ್ ಕಾಲೇಜ್, ನವದೆಹಲಿ

ಕಾಮರ್ಸ್‌ ಅಧ್ಯಯನಕ್ಕೇಂದೇ ಇರುವ ಬಹಳ ಹಳೆಯ ಕಾಲೇಜ್ ಇದಾಗಿದೆ. 1017ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಯುನಿವರ್ಸಿಟಿಯನ್ನು ನಡೆಸುವಂತಹ ಭೋಧಕ ವರ್ಗ ಈ ಕಾಲೇಜಿನಲ್ಲಿದೆ. ತರಗತಿ ಒಳಗೆ ಹಾಗೂ ತರಗತಿ ಹೊರಗೆ ಕಲಿಯುವ ವಾತಾವರಣ ಹಾಗೂ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ.

12. ಕ್ರಿಸ್ಟು ಜಯಂತಿ ಕಾಲೇಜ್, ಬೆಂಗಳೂರು

12. ಕ್ರಿಸ್ಟು ಜಯಂತಿ ಕಾಲೇಜ್, ಬೆಂಗಳೂರು

ಈ ಕಾಲೇಜು ತನ್ನ ವಿದ್ಯಾರ್ಥಿಗಳ ಸಾಮರ್ಥ್ಯದ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧೇಗಳ ಮೂಲಕ ಸಹಕಾರ ಕ್ಷೇತ್ರದಲ್ಲಿ ಮೇಲೇರಲು ಅವಕಾಶ ಮಾಡಿಕೊಡುತ್ತಿದೆ. ವಿದ್ಯಾರ್ಥಿಗಳಿಗಾಗಿ ಉದ್ಯೋಗ ವಿಸ್ತರಣೆ ಸೇವೆಯನ್ನೂ ಒದಗಿಸುತ್ತದೆ.

13. ಗೊಯೆಂಕಾ ಕಾಲೇಜ್ ಆಫ್ ಕಾಮರ್ಸ್ ಹಾಗೂ ಬ್ಯುಸಿನೆಸ್ ಅಡ್ಮಿನಿಸ್ಟೇಶನ್, ಕೊಲ್ಕತ್ತಾ

13. ಗೊಯೆಂಕಾ ಕಾಲೇಜ್ ಆಫ್ ಕಾಮರ್ಸ್ ಹಾಗೂ ಬ್ಯುಸಿನೆಸ್ ಅಡ್ಮಿನಿಸ್ಟೇಶನ್, ಕೊಲ್ಕತ್ತಾ

ಇಲ್ಲಿನ ಪ್ರವೇಶ ಪ್ರಕಿಯೆಯೂ ಬಹಳ ಪಾರದರ್ಶಕವಾಗಿದೆ. ಜೊತೆಗೆ ಕನಿಷ್ಟ ಮೀಸಲಾತಿಯನ್ನು ಹೊಂದಿದೆ. ಶುಲ್ಕ ಕೂಡಾ ನಿಯಮಿತವಾಗಿದೆ. ಇಡೀ ಕೊರ್ಸ್‌ಗೆ 10,000ಶುಲ್ಕ ಹೊಂದಿದೆ. ಕೊಲ್ಕತ್ತಾದ ಮಧ್ಯ ಭಾಗದಲ್ಲಿರುವ ಈ ಕಾಲೇಜು ಹಸಿರು ಕ್ಯಾಂಪಸ್‌ನ್ನು ಹೊಂದಿದ್ದು, ಇದೇ ಈ ಕಾಲೇಜಿನ ಆಕರ್ಷಣೆಯಾಗಿದೆ.

14. ಗೋಸ್ವಾಮಿ ಗಣೇಶ್ ದತ್ತ ಎಸ್‌.ಡಿ ಕಾಲೇಜ್, ಚಂಡೀಗಡ್

14. ಗೋಸ್ವಾಮಿ ಗಣೇಶ್ ದತ್ತ ಎಸ್‌.ಡಿ ಕಾಲೇಜ್, ಚಂಡೀಗಡ್

1976ರಲ್ಲಿ ಸ್ಥಾಪಿಸಲಾದ ಈ ಕಾಲೇಜು 1999ರಲ್ಲಿ ಕಾಮರ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪರಿಚಯಿಸಿಕೊಟ್ಟಿರುವ ಏಕೈಕ ಕಾಲೇಜು ಇದಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್‌ಗಳು, ಕಂಪನಿ ಸೆಕ್ರೆಟರೀಗಳು ಆಗಿದ್ದಾರೆ. ಯುನಿವರ್ಸಿಟಿಯ ಶಿಕ್ಷಕರನ್ನು ಈ ಕಾಲೇಜು ಹೊಂದಿದೆ.

15. ಕೆ.ಜೆ. ಸೊಮಾಯಿಯಾ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್, ಮುಂಬೈ

15. ಕೆ.ಜೆ. ಸೊಮಾಯಿಯಾ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್, ಮುಂಬೈ

ಕಾಮರ್ಸ್ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ, ಉತ್ತಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸುತ್ತದೆ. ಎಲ್ಲಾ ಕೋರ್ಸ್‌ನ ತರಗತಿಯಲ್ಲೂ ಬಹುಸಂಸ್ಕೃತಿಯನ್ನು ಕಾಣಬಹುದು. ಇಲ್ಲಿನ ವಿದ್ಯಾರ್ಥಿಗಳು ಜೀವನದ ವಿಶಾಲ ದೃಷ್ಠೀಕೋನವನ್ನು ಬೆಳೆಸಿಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ . ಸಾಕಷ್ಟು ಡಿಗ್ರಿ ವಿದ್ಯಾರ್ಥಿಗಳೂ ಈ ಕಾಲೇಜಿನಲ್ಲಿದ್ದು, ಅವರಿಗೆ ಇಷ್ಟವಿರುವ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಈ ಕಾಲೇಜಿನಲ್ಲಿದೆ.

16. ಮಿಥಿಬಾಯಿ ಕಾಲೇಜ್, ಮುಂಬೈ

16. ಮಿಥಿಬಾಯಿ ಕಾಲೇಜ್, ಮುಂಬೈ

ಈ ಕಾಲೇಜನ್ನು 1961ರಲ್ಲಿ ಸ್ಥಾಪಿಸಲಾಗಿದೆ. ಸಾಕಷ್ಟು ಸಂಖ್ಯೆಯ ನಟ, ನಟಿಯರು ಈ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು. ಈ ಕಾಲೇಜಿನಲ್ಲಿ ಗುಜರಾತಿ ಮಾತಾಡುವ ಸಮೂದಾಯಗಳಿಗೆ 50% ರಿಸರ್ವೇಶನ್ ನೀಡಲಾಗುತ್ತದೆ. ಹಾಗೂ ಸರ್ಕಾರದ ರಿಸರ್ವೇಶನ್ ಪಾಲಿಸಿಯಲ್ಲಿ ಅಳವಡಿಸಲಾಗುತ್ತಿದೆ.

17. ದೆಹಲಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್, ನವದೆಹಲಿ

17. ದೆಹಲಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್, ನವದೆಹಲಿ

1987ರಲ್ಲಿ ಸ್ಥಾಪಿಸಲ್ಪಟ್ಟ ಈ ಕಾಲೇಜು ಸ್ಥಾಪನೆಯಾದಾಗಿನಿಂದ ಹಿಡಿದೂ ಇಲ್ಲಿಯವೆಗೂ ಕಾಮರ್ಸ್ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಕೇವಲ ಶೈಕ್ಷಣಿಕ ಪ್ರಗತಿ ಬಗ್ಗೆ ಮಾತ್ರವಲ್ಲ ನಾಯಕತ್ವವನ್ನು ತುಂಬುವ ಕೆಲಸ ಮಾಡುತ್ತಾರೆ.

18. ಮೌಂಟ್ ಕಾರ್ಮೆಲ್ ಕಾಲೇಜ್, ಬೆಂಗಳೂರು

18. ಮೌಂಟ್ ಕಾರ್ಮೆಲ್ ಕಾಲೇಜ್, ಬೆಂಗಳೂರು

ಸೆಂಟ್‌ ತೆರೆಸಾನ ಕಾರ್ಮೇಲೈಟ್ ಸಹೋದರಿಯರು ಈ ಕಾಲೇಜನ್ನು ನಡೆಸುತ್ತಿದ್ದಾರೆ. ಈ ಕಾಲೇಜು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ್ದಾಗಿದೆ. ಬಿಕಾಂ ಪದವಿ ಶಿಕ್ಷಣ ನೀಡಲಾಗುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಹೊರ ಜಗತ್ತಿನ ಚಾಲೆಂಜನ್ನು ಸ್ವೀಕರಿಸುವುದನ್ನು ಹೇಳಿಕೊಡಲಾಗುವುದು.

19. ಗಾರ್ಗಿ ಕಾಲೇಜ್, ನವದೆಹಲಿ

19. ಗಾರ್ಗಿ ಕಾಲೇಜ್, ನವದೆಹಲಿ

ಕಾಮರ್ಸ್‌ಗಾಗಿ ಸ್ಥಾಪಿಸಲ್ಪಟ್ಟ ಈ ಕಾಲೇಜು ಸುಮಾರು 2500ವಿದ್ಯಾರ್ಥಿಗಳನ್ನು ಹೊಂದಿದೆ. ಮಹಿಳೆಯರಿಗಾಗಿಯೇ ಇರುವ ಕಾಲೇಜ್ ಇದಾಗಿದೆ. ಇಲ್ಲಿ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಗೂಗಲ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ಇಲ್ಲಿನ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

20 . ಶ್ರೀ ವೆಂಕಟೇಶ್ವರ ಕಾಲೇಜ್ , ನವದೆಹಲಿ

20 . ಶ್ರೀ ವೆಂಕಟೇಶ್ವರ ಕಾಲೇಜ್ , ನವದೆಹಲಿ

ಈ ಸಂಸ್ಥೆಯು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವಗಳ ಮೇಲೆ ನಿರ್ಮಾಣವಾಗಿದೆ. ಸುಮಾರು 15ಎಕರೆ ಪ್ರದೇಶದಲ್ಲಿ ಇದರ ಕ್ಯಾಂಪಸ್ ಇದೆ. ಉದ್ಯೋಗವನ್ನು ಒದಗಿಸಿಕೊಡುವುದರಲ್ಲೂ ಮುಂದಿದೆ. ಇಲ್ಲಿನ ಅಡಿಟೋರಿಯಂ ದೇಶದಲ್ಲೇ ಉತ್ತಮವಾದ ಅಡಿಟೋರಿಯಂ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

21. ಶೇಷಾದ್ರಿಪುರಂ ಕಾಲೇಜ್ , ಬೆಂಗಳೂರು

21. ಶೇಷಾದ್ರಿಪುರಂ ಕಾಲೇಜ್ , ಬೆಂಗಳೂರು

ಬಿಕಾಂ ಕೋರ್ಸ್‌ನ್ನು ಹೊರತುಪಡಿಸಿ ಎಮ್‌ಎಫ್‌ಎ ಕೋರ್ಸ್‌ನ್ನೂ (ಸ್ಪೆಶಲೈಝೇಶನ್ ಇನ್ ಬ್ಯುಸಿನೆಸ್ ) ನೀಡುತ್ತಿದೆ. ಇಲ್ಲಿ ಪ್ರವೇಶಾತಿಗೆ ಬಹಳಷ್ಟು ಸ್ಪರ್ಧೇಗಳು ನಡೆಯುತ್ತಿದ್ದು, ಕೇವಲ ಉತ್ತಮ ವಿದ್ಯಾರ್ಥಿಗಳಿಗಷ್ಟೇ ಇಲ್ಲಿ ಸೀಟು ಸಿಗುತ್ತದೆ. ಇಲ್ಲಿ ಕಲಿತವರಿಗೆ ಉದ್ಯೋಗವಕಾಶ ಕೂಡಾ ಉತ್ತಮವಾಗಿದೆ.

 

 

22. ಜೆ.ಡಿ. ಬಿರ್ಲಾ ಸಂಸ್ಥೆ ,ಕೋಲ್ಕತ್ತಾ

22. ಜೆ.ಡಿ. ಬಿರ್ಲಾ ಸಂಸ್ಥೆ ,ಕೋಲ್ಕತ್ತಾ

ಶಿಸ್ತಿನ ವಿಷ್ಯದಲ್ಲಿ ಬಹಳ ಕಟ್ಟುನಿಟ್ಟಾಗಿರುವ ಕಾಲೇಜ್ ಇದಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಕಲಿಕೆಯನ್ನು ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ. ಯಾರ ಹಾಜರಾತಿ ಕಡಿಮೆ ಇರುತ್ತದೆಯೋ ಅವರಿಗೆ ವಾರ್ಷಿಕ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ.

23. ಸ್ಟೆಲ್ಲಾ ಮೇರಿಸ್ ಕಾಲೇಜ್, ಚೆನ್ನೈ

23. ಸ್ಟೆಲ್ಲಾ ಮೇರಿಸ್ ಕಾಲೇಜ್, ಚೆನ್ನೈ

ಈ ಕಾಲೇಜನ್ನು ಫ್ರಾನ್‌ಚೈಸ್ ಮಿಷನರೀಸ್ ಆಫ್ ಮೇರಿ ಸೊಸೈಟಿ ನಡೆಸಲ್ಪಡುತ್ತಿದೆ. ಮದ್ರಾಸ್ ವಿಶ್ವವಿದ್ಯಾನಿಲಯದ ಅಡಿಯಲ್ಲಿರುವ ಅಟೋನಾಮಸ್ ಕಾಲೇಜ್ ಇದಾಗಿದೆ. ಯಾವಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತೋ ಅದೇ ವರ್ಷ ಈ ಕಾಲೇಜನ್ನು ನಿರ್ಮಿಸಲಾಗಿದೆ. ಕಾಮರ್ಸ್‌ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ಸಂಶೋಧನೆಗಾಗಿ ಒಳ್ಳೆಯ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.

24. ನೆಸ್‌ ವಾಡಿಯಾ ಕಾಲೇಜ್ ಆಫ್ ಕಾಮರ್ಸ್

24. ನೆಸ್‌ ವಾಡಿಯಾ ಕಾಲೇಜ್ ಆಫ್ ಕಾಮರ್ಸ್

ಪಿಯುಸಿ ಕಾಮರ್ಸ್ ನಿಂದ ಪ್ರಾರಂಭಿಸಿದ ಈ ಕಾಲೇಜು, ಮಾಡರ್ನ್ ಎಜುಕೇಷನ್ ಸೊಸೈಟಿಯ ಆರೈಕೆಯಡಿಯಲ್ಲಿ ಬೆಳೆಯುತ್ತಿದ್ದು ಕೇವಲ ಗಾತ್ರ ಮಾತ್ರವಲ್ಲ ಶಿಕ್ಷಣದ ಗುಣಮಟ್ಟವನ್ನೂ ಹೆಚ್ಚಿಸಿದೆ.

25.ಸೆಂಟ್.ಪ್ರಾನ್ಸೀಸ್ ಕಾಲೆಜ್ ಫಾರ್ ವುಮೆನ್, ಹೈದರಾಬಾದ್

25.ಸೆಂಟ್.ಪ್ರಾನ್ಸೀಸ್ ಕಾಲೆಜ್ ಫಾರ್ ವುಮೆನ್, ಹೈದರಾಬಾದ್

ಕಥೋಲಿಕರು ನಡೆಸಲ್ಪಡುವ ಈ ಕಾಲೇಜ್‌ನಲ್ಲಿ ಸಮಗ್ರ ಶಿಕ್ಷಣ ಮೂಲಕ ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನೀಡಿದೆ. 1956ರಲ್ಲಿ ಸ್ಥಾಪಿಸಲ್ಪಟ್ಟ ಈ ಕಾಲೇಜು ಹೈದರಾಬಾದ್‌ನ ಟಾಪ್ ಕಾಲೇಜುಗಳ ಪಟ್ಟಿಯಲ್ಲಿ ಸೇರಲು ಸಾಕಷ್ಟು ಶ್ರಮವಹಿಸಿದೆ. ಸುಮಾರು 190ಶಿಕ್ಷಕರಿದ್ದು ಸುಮಾರು 25,000ಹಳೆ ವಿದ್ಯಾರ್ಥಿಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಇಲ್ಲಿಯ ಗುರಿಯಾಗಿದೆ.

26. ಇಂದ್ರಪ್ರಸ್ಥ ಕಾಲೇಜ್ ಮಹಿಳಾ ಕಾಲೇಜ್, ನವದೆಹಲಿ

26. ಇಂದ್ರಪ್ರಸ್ಥ ಕಾಲೇಜ್ ಮಹಿಳಾ ಕಾಲೇಜ್, ನವದೆಹಲಿ

ಮಹಿಳಾ ಸಬಲೀಕರಣಕ್ಕಾಗಿ ಮಾಡಲಾಗಿರುವ ಕಾಲೇಜು ಇದಾಗಿದೆ. ಇಲ್ಲಿನ ಹಳೆ ವಿದ್ಯಾರ್ಥಿಗಳೆಲ್ಲರೂ ಬಹುದೊಡ್ಡ ಹುದ್ದೆಯನ್ನು ಅಲಂಕರಿಸಿದ್ದು, ಕೆಲವರು ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. ಇಲ್ಲಿ ಉದ್ಯೋಗಾವಕಾಶವು ಸಾಕಷ್ಟಿದೆ. ಅರ್ಹ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಬೆಸ್ಟೇ ಆಗಿರುತ್ತದೆ,

 

 

27. ವುಮೆನ್ಸ್ ಕ್ರಿಸ್ಟಿಯನ್ ಕಾಲೇಜ್, ಚೆನ್ನೈ

27. ವುಮೆನ್ಸ್ ಕ್ರಿಸ್ಟಿಯನ್ ಕಾಲೇಜ್, ಚೆನ್ನೈ

7ಶಿಕ್ಷಕರು ಹಾಗು 41ವಿದ್ಯಾರ್ಥಿಗಳನ್ನಿಟ್ಟುಕೊಂಡು 1915ರಲ್ಲಿ ಈ ಕಾಲೇಜನ್ನು ಸ್ಥಾಪಿಸಲಾಗಿತ್ತು. ಈಗ ಈ ಕಾಲೇಜು ಇಂಗ್ಲೇಂಡ್, ಯುಎಸ್‌ಎ, ಕೆನಡಾದ ಮೆಷನರಿ ಸೊಸೈಟಿಗಳ ಜೊತೆ ಕೈ ಜೋಡಿಸಿಕೊಂಡು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇಲ್ಲಿನ ಕಾಮರ್ಸ್ ವಿಭಾಗ ಉತ್ತಮವಾಗಿದೆ. ಈಗ ಸುಮಾರು 140ಶಿಕ್ಷಕರಿದ್ದು, ಸುಮಾರು 2712ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

28. ಸೆಕ್ರೆಡ್ ಹಾರ್ಟ್ ಕಾಲೇಜ್, ತೇವರಾ

28. ಸೆಕ್ರೆಡ್ ಹಾರ್ಟ್ ಕಾಲೇಜ್, ತೇವರಾ

ಇದು ಕ್ರೈಸ್ತರು ನಡೆಸುತ್ತಿರುವ ಇನ್ನೊಂದು ಕಾಲೇಜ್ ಆಗಿದ್ದು, ಕೇವಲ ಪುರುಷರಿಗಾಗಿ ಸ್ಥಾಪಿಸಲಾಗಿದೆ. ಕೇರಳದ ಕೊಚ್ಚಿಯಲ್ಲಿ ನಿರ್ಮಿಸಲಾಗಿರುವ ಈ ಕಾಲೇಜ್‌ನಲ್ಲಿ ಕಾಮರ್ಸ್ ಪದವಿ ಮಾಡುವವರಿಗೆ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್ ನ್ನೂ ಮಾಡುವ ಅವಕಾಶವಿದೆ.

29. ಎತಿರಾಜ್ ಮಹಿಳಾ ಕಾಲೇಜ್, ಚೆನ್ನೈ

29. ಎತಿರಾಜ್ ಮಹಿಳಾ ಕಾಲೇಜ್, ಚೆನ್ನೈ

ಚೆನ್ನೈನ ಮಧ್ಯಭಾಗದಲ್ಲಿರುವ ಈ ಕಾಲೇಜು ಸುಂದರ ಕ್ಯಾಂಪಸ್‌ನ್ನು ಹೊಂದಿದೆ. ಸುಮಾರು 9ಎಕರೆ ಪ್ರದೇಶದಲ್ಲಿ ಇದರ ಕ್ಯಾಂಪಸ್ ವಿಸ್ತರಿಸಿದೆ. ಕಾಮರ್ಸ್ ವಿಭಾಗವು 2ಕೋರ್ಸ್‌ನ್ನು ಹೊಂದಿದೆ. ಈ ಎರಡೂ ಕೋರ್ಸ್‌ಗಳ ವಿದ್ಯಾರ್ಥಿಗಳು ಉತ್ತಮ ಪರಿಕಲ್ಪನೆ ಮತ್ತು ಉತ್ತಮ ಗ್ರಹಿಕೆಯನ್ನು ಹೊಂದಿರುತ್ತಾರೆ. ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಸಹಾಯ ಮಾಡುತ್ತದೆ.

30. ಕಮಲಾ ನೆಹರೂ ಕಾಲೇಜ್, ನವದೆಹಲಿ

30. ಕಮಲಾ ನೆಹರೂ ಕಾಲೇಜ್, ನವದೆಹಲಿ

ಇಲ್ಲಿನ ವಾರ್ಷೀಕೋತ್ಸವ ಉಲ್ಲಾಸ್ ಬಹಳ ಅದ್ದೂರಿಯಾಗಿ ನಡೆಯುತ್ತದೆ. ಎಲ್ಲಾ ಮಹಿಳೆಯರು ಸೇರಿ ಈ ಉತ್ಸವ ಆಚರಿಸುತ್ತಿದ್ದು, ಇದು ಮಹಿಳೆಯರನ್ನು ಬರೀ ನಾಲ್ಕು ಗೋಡೆಯ ಒಳಗೆ ಕುಳಿತುಕೊಳ್ಳುವುದರಿಂದ ಹೊರಗಿನ ಪ್ರಪಂಚದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.

31. ಆಕ್ಸ್‌ಫರ್ಡ್ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಬೆಂಗಳೂರು

31. ಆಕ್ಸ್‌ಫರ್ಡ್ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಬೆಂಗಳೂರು

ಇಲ್ಲಿ ಕಲಿತ ಬಿಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ದೊರೆಯುವುದು. ಪ್ರತಿಯೊಬ್ಬ ವಿದ್ಯಾರ್ಥಿಯ ಕೌಶಲ್ಯದ ಬಗ್ಗೆ ಗಮನ ನೀಡಲಾಗುವುದು. ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಕಲಿಸಲಾಗುತ್ತದೆ. ಇಲ್ಲಿನ ಎಂಕಾಂ ಕಲಿತ ವಿದ್ಯಾರ್ಥಿಗಳೂ ಕೂಡಾ ಉತ್ತಮ ಉದ್ಯೋಗದಲ್ಲಿದ್ದಾರೆ.

32. ಸೆಂಟ್.ಆನ್ಸ್‌ ಮಹಿಳಾ ಕಾಲೇಜ್ ಹೈದರಾಬಾದ್

32. ಸೆಂಟ್.ಆನ್ಸ್‌ ಮಹಿಳಾ ಕಾಲೇಜ್ ಹೈದರಾಬಾದ್

4ಎಕರೆ ಕ್ಯಾಂಪಸ್‌ನಲ್ಲಿ ಈ ಕಾಲೇಜ್ ಇದೆ. ಕನಸನ್ನು ಸಾಕಾರಗೊಳಿಸುವಾಗ ಸ್ಥಳಾವಕಾಶ ಒಂದು ವಿಷ್ಯವೇ ಅಲ್ಲ ಎನ್ನುವುದನ್ನು ಈ ಕಾಲೇಜು ನಿರೂಪಿಸಿದೆ. ಮಹಿಳೆಯರೂ ಕೂಡಾ ಉತ್ತಮ ಚಾರ್ಟೆಡ್ ಅಕೌಂಟೆಂಟ್ ಆಗಬಹುದು ಎನ್ನುವುದಕ್ಕೆ ಈ ಕಾಲೇಜ್ ಒತ್ತು ನೀಡಿದೆ.

33. ಕೆ.ಪಿ.ಬಿ ಹಿಂದೂಜಾ ಕಾಮರ್ಸ್ ಕಾಲೇಜ್, ಮುಂಬೈ

33. ಕೆ.ಪಿ.ಬಿ ಹಿಂದೂಜಾ ಕಾಮರ್ಸ್ ಕಾಲೇಜ್, ಮುಂಬೈ

ಈ ಕಾಲೇಜು ಕಲಿಕೆಯ ಸಮಗ್ರವಾದ ವಿಧಾನವನ್ನು ಹೊಂದಿದೆ. ಅದಕ್ಕಾಗಿ ಸಾಕಷ್ಟು ಸಂಖ್ಯೆಯ ಫೆಸ್ಟ್‌ಗಳನ್ನು ಈ ಕಾಲೇಜು ಆಯೋಜಿಸುತ್ತದೆ. ಫಿಲ್ಮ್ ಫೆಸ್ಟ್, ಸ್ಪೋರ್ಟ್ ಇನ್ನಿತರ ಕಾರ್ಯಕ್ರಮವಗಳನ್ನು ಹಮ್ಮಿಕೊಳ್ಳುತ್ತದೆ. ಕಲಿಕೆಯ ಜೊತೆ ಇನ್ನಿತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ.

 

 

34. ಡಿಎವಿ ಕಾಲೇಜ್, ಚಂಡೀಗಡ್

34. ಡಿಎವಿ ಕಾಲೇಜ್, ಚಂಡೀಗಡ್

ಮಧ್ಯಮ ವರ್ಗದವರ ಕೈಗೆಟಕುವಂತಹ ಶುಲ್ಕ ಹೊಂದಿರುವ ಈ ಕಾಲೇಜು ವಿದ್ಯಾರ್ಥಿಗಳಿಗೆ ವರ್ಲ್ಡ್ ಕ್ಲಾಸ್ ಸೌಲಭ್ಯವನ್ನು ಒದಗಿಸುತ್ತದೆ. ಸ್ಫೋರ್ಟ್ ಸೌಲಭ್ಯವೂ ಉತ್ತಮವಾಗಿದ್ದು, ಇಲ್ಲಿಂದ ಪದವಿ ಪಡೆದು ಹೊರಹೋದ ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿದ್ದಾರೆ.

35. ಎಂಸಿಎಂಡಿಎವಿ ಮಹಿಳಾ ಕಾಲೇಜ್, ಚಂಡೀಗಡ್

35. ಎಂಸಿಎಂಡಿಎವಿ ಮಹಿಳಾ ಕಾಲೇಜ್, ಚಂಡೀಗಡ್

ಮೆಹ್ರಾ ಚಂದ್ ಮಹಾಜನ್ ಡಿಎವಿ ಕಾಲೇಜ್ ಮಹಿಳೆಯರಿಗಾಗಿಯೇ ಸ್ಥಾಪಿಸಲಾಗಿದ್ದು, ಇಲ್ಲಿನ ಸ್ಪೋರ್ಟ್ ಹಾಗೂ ಸಾಂಸ್ಕೃತಿಕ ಸೌಲಭ್ಯ ಉತ್ತಮವಾಗಿದೆ. ರಾಕ್‌ ಕ್ಲೈಂಬಿಂಗ್‌ನ್ನು ಹವ್ಯಾಸದ ಆಪ್ಷನ್ ಆಗಿ ನೀಡಿರುವ ಮೊಟ್ಟ ಮೊದಲ ಕಾಲೇಜ್ ಇದಾಗಿದೆ. 37 ವರ್ಷಗಳಿಂದ ಪಂಜಾಬ್ ಯುನಿವರ್ಸಿಟಿಯ ಜನರಲ್ ವುಮೆನ್ ಸ್ಪೋರ್ಟ್ಸ್ ಎಫೆನ್ಸಿವ್ ಷೀಲ್ಡ್ ಅನ್ನು ಪಡೆದಿಯುತ್ತಾ ಬಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಕಾಲೇಜ್ .

36. ದೀನ ದಯಾಲ್ ಉಪಾಧ್ಯಾಯ ಕಾಲೇಜ್, ನವದೆಹಲಿ

36. ದೀನ ದಯಾಲ್ ಉಪಾಧ್ಯಾಯ ಕಾಲೇಜ್, ನವದೆಹಲಿ

ಇಲ್ಲಿನ ಮೂಲ ಸೌಕರ್ಯಗಳೆಲ್ಲಾ ಉತ್ತಮವಾಗಿದೆ. ಆಧುನಿಕ ವಿಡಿಯೋ ಆಡಿಯೋ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂದು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಕಂಪ್ಯೂಟರ್ ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿಗಾಗಿ ಸುಮಾರು 100ಕಂಪ್ಯೂಟರ್‌ಗಳ ವ್ಯವಸ್ಥೆಯನ್ನೂ ಕಲ್ಪಿಸಿದೆ.

 

 

37. ಎಚ್‌ಎ ಕಾಮರ್ಸ್ ಕಾಲೇಜ್ , ಗುಜರಾತ್

37. ಎಚ್‌ಎ ಕಾಮರ್ಸ್ ಕಾಲೇಜ್ , ಗುಜರಾತ್

ಈ ಕಾಲೇಜಿನ ವಿಶೇಷತೆಯೆಂದರೆ, ಇಲ್ಲಿನ ಎಲ್ಲಾ ಭೋಧಕ ವರ್ಗವು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಧುನಿಕತೆ ಜೊತೆ ಅಪ್‌ಡೇಟ್ ಆಗಿದ್ದಾರೆ. ಸಾಕಷ್ಟು ಸೆಮಿನಾರ್, ಕಾನ್ಫರೆನ್ಸ್‌ಗಳನ್ನು ನಡೆಸಿಕೊಟ್ಟಿದ್ದಾರೆ. ಇತರ ವಿಶ್ವವಿದ್ಯಾನಿಲಯಗಳಿಗಿಂತ ಉತ್ತಮ ಫಲಿತಾಂಶವನ್ನು ಈ ಕಾಲೇಜು ಪಡೆದಿದೆ.

38. ಶ್ರೀ ಗುರು ಗೋವಿಂದ್ ಸಿಂಗ್ ಕಾಮರ್ಸ್ ಕಾಲೇಜ್, ನವದೆಹಲಿ

38. ಶ್ರೀ ಗುರು ಗೋವಿಂದ್ ಸಿಂಗ್ ಕಾಮರ್ಸ್ ಕಾಲೇಜ್, ನವದೆಹಲಿ

ದೆಹಲಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಈ ಕಾಲೇಜ್ ಜಾತ್ಯಾತೀತತೆಯಲ್ಲಿ ನಂಬಿಕೆಯನ್ನು ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಇಷ್ಟವಿದ್ದದ್ದನ್ನು ಓದಲು ಹಲವಾರು ಆಯ್ಕೆಗಳನ್ನೂ ನೀಡಲಾಗುತ್ತದೆ. ತಮಗಿಷ್ಟವಾದ ಹವ್ಯಾಸವನ್ನೂ ಬೆಳೆಸಿಕೊಳ್ಳಬಹುದಾಗಿದೆ.

39. ಸೆಂಟ್. ಜಾಸೆಫ್ ಡಿಗ್ರಿ ಹಾಗೂ ಪಿಜಿ ಕಾಲೇಜ್, ಹೈದರಾಬಾದ್

39. ಸೆಂಟ್. ಜಾಸೆಫ್ ಡಿಗ್ರಿ ಹಾಗೂ ಪಿಜಿ ಕಾಲೇಜ್, ಹೈದರಾಬಾದ್

ಈ ಕಾಲೇಜು ತನ್ನ ಶೈಕ್ಷಣಿಕ ಮಟ್ಟದಲ್ಲೂ ಉತ್ತಮವಾಗಿದೆ ಜೊತೆಗೆ ಮೂಲ ಸೌಕರ್ಯಗಳಲ್ಲೂ ಉತ್ತಮವಾಗಿದೆ. ಉದ್ಯೋಗಾವಕಾಶವನ್ನು ಒದಗಿಸುವಲ್ಲೂ ಸಮರ್ಥವಾಗಿದೆ. ಎಲ್ಲಾ ಅರ್ಹ ವಿದ್ಯಾರ್ಥಿಗಳು ತಮಗಿಷ್ಟವಾದ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಎಂಎನ್‌ಸಿ ಕಂಪನಿಗಳೂ ಕೂಡಾ ಕ್ಯಾಂಪಸ್ ಸೆಲೆಕ್ಷನ್‌ ಮೂಲಕ ಇಲ್ಲಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

40. ಹೆಚ್‌ಎಲ್ ಕಾಮರ್ಸ್ ಕಾಲೇಜ್, ಅಹಮದಾಬ್

40. ಹೆಚ್‌ಎಲ್ ಕಾಮರ್ಸ್ ಕಾಲೇಜ್, ಅಹಮದಾಬ್

1936ರಲ್ಲಿ ಈ ಕಾಲೇಜನ್ನು ಸ್ಥಾಪಿಸಲಾಗಿದೆ. ಸ್ಫೋರ್ಟ್ಸ್‌ನಲ್ಲಿ ನಿರಂತರವಾಗಿ ಪದಕ ಗೆದ್ದಿರುವ ಹೆಗ್ಗಳಿಕೆ ಈ ಕಾಲೇಜ್‌ಗಿದೆ. ಫಲಿತಾಂಶ ಕೂಡಾ ಉತ್ತಮವಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ರ್ಯಾಂಕ್ ಗಳಿಸುತ್ತಿರುವುದನ್ನು ಕಾಣಬಹುದು.

 

 

For Quick Alerts
ALLOW NOTIFICATIONS  
For Daily Alerts

English summary
commerce is where students have the most cut-throat competition in terms of marks. With so much competition on the cards for the students, it is inevitable that the colleges also compete with each other to make their way to the top.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X