ನಿಮ್ಮ ಮಕ್ಕಳು ಕಲಿಯೋಕೆ ಯಾವ ವಿಜ್ಞಾನ ಕಾಲೇಜ್ ಬೆಸ್ಟ್

By Rajatha

ಹತ್ತನೇ ತರಗತಿ ಮುಗಿದ ತಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಹೆತ್ತವರನ್ನು ಕಾಡುವ ಮೊತ್ತಮೊದಲ ಪ್ರಶ್ನೆಯೆಂದರೆ ಯಾವ ಕೋಸ್F ತೆಗೆದುಕೊಳ್ಳುವುದು ಹಾಗೂ ಯಾವ ಕಾಲೇಜನ್ನು ಆಯ್ಕೆ ಮಾಡುವುದು ಎನ್ನುವುದು.

ಸಾಕಷ್ಟು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದು ಶುದ್ಧ ಹಾಗೂ ಆನ್ವಯಿಕ ವಿಜ್ಞಾನವನ್ನು. ಮೇಕ್ ಇನ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಕೂಡಾ ಬೆಂಬಲಿಸುವುದು ಇದನ್ನೇ. ಯಾವ ಹೆತ್ತವರು ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಆಗಿಸುವ ಕನಸು ಕಂಡಿರುತ್ತಾರೋ ಅವರು ತಮ್ಮ ಮಕ್ಕಳನ್ನು ವಿಜ್ಞಾನ ಕಾಲೇಜಿಗೆ ಸೇರಿಸುತ್ತಾರೆ.

ನಿಮ್ಮ ಮಕ್ಕಳನ್ನು ಐಐಟಿ, ಎನ್‌ಐಟಿಯಲ್ಲಿ ಇಂಜಿನಿಯರಿಂಗ್ ಓದಿಸುವ ಆಲೋಚನೆ ಇದ್ದಿರಬಹುದು. ಆದರೆ ವಿಜ್ಞಾನದ ಟಾಪ್ ಕಾಲೇಜಿಗಳ ಪಟ್ಟಿಗೆ ಬಂದಾಗ ಐಐಟಿ, ಎನ್‌ಐಟಿ ಹೆಸರು ಬರುವುದಿಲ್ಲ. ಭಾರತದಲ್ಲಿ ವಿಜ್ಞಾನ ಕಲಿಯಬೇಕಾದರೆ ಯಾವ ಕಾಲೇಜು ಸೂಕ್ತ. ಟಾಪ್ 10ರಲ್ಲಿ ಯಾವೆಲ್ಲಾ ಕಾಲೇಜುಗಳು ಬರುತ್ತವೆ ಎನ್ನುವುದಕ್ಕೆ ಇಲ್ಲಿದೆ ಕೆಲವು ಮಾಹಿತಿ.

1. ಲಾಯೆಲಾ ಕಾಲೇಜ್, ಚೆನ್ನೈ

1. ಲಾಯೆಲಾ ಕಾಲೇಜ್, ಚೆನ್ನೈ

ಮದ್ರಾಸ್ ಯುನಿವರ್ಸಿಟಿಯ ಅಡಿಯಲ್ಲಿ ಬರುವ ಅಟಾನಾಮಸ್ ಕಾಲೇಜು ಇದಾಗಿದ್ದು, ಇಲ್ಲಿಯ ಶುಲ್ಕ ಕೂಡಾ ತುಂಬಾ ಕಡಿಮೆಯೂ ಅಲ್ಲ, ತುಂಬಾ ಜಾಸ್ತಿಯೂ ಅಲ್ಲ. ಎರಡು ವರ್ಷದ ಎಂಎಸ್ಸಿ ಕೋಸ್Fಗೆ ಸುಮಾರು ೫೦ ಸಾವಿರ ರೂ. ಶುಲ್ಕವಿದೆ. ಈ ಕಾಲೇಜು ಉದ್ಯೋಗ ತರಬೇತಿ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಹೂಡಿಕೆ ಮಾಡುತ್ತದೆ ಜೊತೆಗೆ ಸಾಕಷ್ಟು ಶ್ರಮವನ್ನು ವಹಿಸುತ್ತದೆ. ಪ್ರತಿವರ್ಷ ೧೦೦% ಫಲಿತಾಂಶ ಬರುತ್ತಿದ್ದು ಉದ್ಯೋಗವಕಾಶವನ್ನೂ ಒದಗಿಸಿಕೊಡುತ್ತದೆ.

 

 

2. ಸೆಂಟ್ ಸ್ಟೀಫನ್ಸ್ ಕಾಲೇಜ್, ನವದೆಹಲಿ

2. ಸೆಂಟ್ ಸ್ಟೀಫನ್ಸ್ ಕಾಲೇಜ್, ನವದೆಹಲಿ

ದೆಹಲಿ ವಿಶ್ವವಿದ್ಯಾನಿಲಯದ ಸ್ಥಾಪನೆ ಸ್ಥಂಭಗಳಲ್ಲಿ ಒಂದಾಗಿರುವ ಸೆಂಟ್ ಸ್ಟೀಫನ್ಸ್‌ ಕಾಲೇಜ್‌ ೧೮೮೧ರಲ್ಲಿ ಸ್ಥಾಪನೆಯಾದಾಗಿನಿಂದಲೂ ದೇಶದ ಟಾಪ್ 10 ಕಾಲೇಜುಗಳಲ್ಲಿ ಒಂದಾಗಿದೆ. ಸಮಯದಲ್ಲಿ ಬದಲಾವಣೆ ಮಾಡಿದ್ದಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಬಹಳಷ್ಟು ಹೊಸ ಕೋಸ್Fಗಳನ್ನು ಹೊರತಂದಿದೆ. ಸಾಧಾರಣ ಶುಲ್ಕವನ್ನು ಹೊಂದಿದೆ. 2016-17ರ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 8 ಲಕ್ಷ ಆದಾಯವನ್ನು ಒದಗಿಸಲು ಸಮರ್ಥವಾಗಿದೆ.

3. ಸೆಂಟ್. ಕ್ಸೇವಿಯರ್ ಕಾಲೇಜ್, ಕೊಲ್ಕತ್ತಾ

3. ಸೆಂಟ್. ಕ್ಸೇವಿಯರ್ ಕಾಲೇಜ್, ಕೊಲ್ಕತ್ತಾ

ಸಾಧಿಸಲಾಗದ್ದು ಯಾವದೂ ಇಲ್ಲ ಎನ್ನುವ ಧ್ಯೆಯ ವಾಕ್ಯವನ್ನು ನಂಬಿಕೊಂಡಿರುವ ಈ ಕಾಲೇಜು ದೇಶದ ಟಾಪ್ ೩ನೇ ವಿಜ್ಞಾನ ಕಾಲೇಜ್ ಎನ್ನುವ ಹೆಮ್ಮೆಗೆ ಪಾತ್ರವಾಗಿದೆ. ಈ ಕಾಲೇಜಿನ ಕಾಮಸ್F ವಿಭಾಗವೂ ಚೆನ್ನಾಗಿದೆ. ಇಲ್ಲಿನ ಶುಲ್ಕವೂ ಬಹಳ ಕಡಿಮೆ ಇದೆ. ಸ್ವ ಹಣಕಾಸು ಶಿಕ್ಷಣಕ್ಕೆ೧೦ ಸಾವಿರ, ಇನ್ನುಳಿದ ಕೋಸ್Fಗಳಿಗೆ ೫ ಸಾವಿರ ರೂ. ಶುಲ್ಕವಿದೆ. ಹಾಗಂತ ಈ ಕಾಲೇಜು ಉದ್ಯೋಗವನ್ನು ಒದಗಿಸಿಕೊಡೋದಿಲ್ಲವೆಂದೇನಿಲ್ಲ. ಕಳೆದ ಕೆಲವು ವರ್ಷಗಳಿಂದ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ೫೦೦ಕ್ಕೂ ಅಧಿಕ ವಿದ್ಯಾರ್ಥಿಘಳನ್ನು ಉತ್ತಮ ಗ್ಲೋಬಲ್ ಕಂಪನಿಯಲ್ಲಿ ಉದ್ಯೋಗ ಒದಗಿಸಿಕೊಟ್ಟಿದೆ.

4. ಕ್ರಿಸ್ಟ್ ಕಾಲೇಜ್ , ಬೆಂಗಳೂರು

4. ಕ್ರಿಸ್ಟ್ ಕಾಲೇಜ್ , ಬೆಂಗಳೂರು

1969ರಲ್ಲಿ ಸ್ಥಾಪಿಸಲಾಗಿರುವ ಈ ಕಾಲೇಜ್ 2008ರಲ್ಲಿ ಅಟಾನಾಮಸ್ ಆಗಿದೆ. ಅತ್ಯಂತ ದುಬಾರಿ ಕಾಲೇಜು ಇದಾಗಿದೆ. ಇಲ್ಲಿ ಒಂದೊಂದು ಕೋಸ್Fಗೂ ಸುಮಾರು 4 ಲಕ್ಷ ರೂ. ಶುಲ್ಕವಿದೆ.

ಹಾಗೆಯೇ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಒದಗಿಸುವಲ್ಲಿಯೂ ಕ್ರಿಸ್ಟ್ ಕಾಲೇಜ್ ಸಮರ್ಥವಾಗಿದೆ. ಕಳೆದ ವರ್ಷ ಸುಮಾರು 700 ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಲ್ಯಾಬೋರೆಟರಿ ಈ ಕಾಲೇಜಿನ ಇನ್ನೊಂದು ವಿಶೇಷತೆ.

 

5. ರಾಮ್ಜಾಸ್ ಕಾಲೇಜ್, ದೆಹಲಿ

5. ರಾಮ್ಜಾಸ್ ಕಾಲೇಜ್, ದೆಹಲಿ

ದೆಹಲಿಯಲ್ಲಿರುವ ಇನ್ನೊಂದು ಪ್ರಸಿದ್ಧ ಕಾಲೇಜ್ ಇದಾಗಿದೆ. ದೆಹಲಿ ಯುನಿವರ್ಸಿಟಿಗಿಂತಲೂ ಹಳೆಯ ಕಾಲೇಜ್‌ ಇದಾಗಿದೆ. ಈ ಸಂಸ್ಥೆಯು ವಿದೇಶ ಅಧ್ಯಯನ ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಸಾಧಾರಣಾ ಶುಲ್ಕವನ್ನು ಹೊಂದಿದ್ದು, ಎಲ್ಲರಿಗೂ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

 

 

6. ಮಿರಾಂಡ ಹೌಸ್, ದೆಹಲಿ

6. ಮಿರಾಂಡ ಹೌಸ್, ದೆಹಲಿ

ಶಿಕ್ಷಣ ಕೇವಲ ಪುರುಷರಿಗೆ ಮಾತ್ರ ಎನ್ನುತ್ತಿದ್ದ ಕಾಲದಲ್ಲಿ ಕೇಲವ ಮಹಿಳೆಯರಿಗಾಗಿಯೇ ಪ್ರಾರಂಭವಾದ ಕಾಲೇಜು ಇದಾಗಿದೆ. ಸ್ವಾತಂತ್ರ್ಯ ಪಡೆದ ನಂತರದ ವರ್ಷದಲ್ಲೇ ಪ್ರಾರಂಭವಾದ ಈ ಕಾಲೇಜು. ಲ್ಯಾಬೊರೆಟರಿಗಾಗಿ ಬಹಳಷ್ಟು ಹಣ ಹೂಡಿಕೆ ಮಾಡಿದೆ. ಇಲ್ಲಿ ಪ್ರತಿಯೊಂದು ಕೋಸ್Fಗೂ ಸುಮಾರು 15 ಸಾವಿರ ರೂ ಶುಲ್ಕವಿದ್ದು, ತನ್ನಲ್ಲಿ ಪದವಿ ಪಡೆದ 80% ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

7. ಮದ್ರಾಸ್ ಕ್ರಿಸ್ಟಿಯನ್ ಕಾಲೇಜ್, ಚೆನ್ನೈ

7. ಮದ್ರಾಸ್ ಕ್ರಿಸ್ಟಿಯನ್ ಕಾಲೇಜ್, ಚೆನ್ನೈ

ದೇಶದ ಪ್ರಸಿದ್ಧ ಕಾಲೇಜುಗಳಲ್ಲಿ ಇದೂ ಒಂದಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಪ್ರಕಾಶ ಕಾರಟ್, ಇಂದ್ರಾ ನೂಯಿ ಮೊದಲಾದವರೆಲ್ಲಾ ಇದೇ ಕಾಲೇಜಿನ ಹಳೆ ವಿದ್ಯಾರ್ಥಿಗಳು. ಶುಲ್ಕವನ್ನು ಒಮ್ಮೆಲೆ ಕಟ್ಟುವ ಬದಲು ಸೆಮಿಸ್ಟರ್ ಪ್ರಕಾರ ಕಟ್ಟುವ ವ್ಯವಸ್ಥೆ ಈ ಕಾಲೇಜ್‌ನಲ್ಲಿದೆ. ಬಹಳ ಕಟ್ಟುನಿಟ್ಟಾಗಿರುವ ಈ ಕಾಲೇಜಿನಲ್ಲಿ ಡೊನೇಶನ್‌ಗೆ ಅವಕಾಶವಿಲ್ಲ.

8. ಹಂಸರಾಜ್ ಕಾಲೇಜ್, ನವದೆಹಲಿ

8. ಹಂಸರಾಜ್ ಕಾಲೇಜ್, ನವದೆಹಲಿ

ದೆಹಲಿ ಯುನಿವರ್ಸಿಟಿಯ ಅಡಿಯಲ್ಲಿರುವ ಮತ್ತೊಂದು ಪ್ರಸಿದ್ಧ ಕಾಲೇಜ್ ಇದಾಗಿದೆ. ಇಲ್ಲಿ ವಿಜ್ಞಾನ ಪದವಿಯ ಶುಲ್ಕ 70ಸಾವಿರ ರೂ.ನೀವು ಅಷ್ಟೊಂದು ಫೀಸ್ ಕೊಟ್ಟರೂ ಅದು ವ್ಯರ್ಥವಾಗೋದಿಲ್ಲ. ಯಾಕೆಂದರೆ ಅಲ್ಲಿ ಕಲಿತವರಿಗೆ ಪಕ್ಕಾ ಉದ್ಯೋಗವನ್ನೂ ಒದಗಿಸಿಕೊಡುತ್ತದೆ. ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯವೂ ಉತ್ತಮವಾಗಿದೆ. ಎಲ್ಲಾ ತಂತ್ರಜ್ಞಾನಗಳು ಸುಲಭವಾಗಿ ವಿದ್ಯಾರ್ಥಿಗಳಿಗೆ ದೊರೆಯುತ್ತದೆ.

9. ಫರ್ಗುಸನ್ ಕಾಲೇಜ್, ಪುಣೆ

9. ಫರ್ಗುಸನ್ ಕಾಲೇಜ್, ಪುಣೆ

ಬಹಳ ಹಳೆಯ ಕಾಲೇಜ್ ಇದಾಗಿದ್ದು, ಪರಂಪಂರೆಯನ್ನೂ ಹೊಂದಿದೆ. ಆ ಕಾರಣಕ್ಕಾಗಿಯೋ ಏನೋ ಇಲ್ಲಿನ ಫೀಸ್ ಕೂಡಾ ಬಹಳ ಕಡಿಮೆ ಇದೆ. ಕಾಲೇಜಿನ ಸಮಯವನ್ನೂ ಬದಲಾಯಿಸಿದ್ದು, ಕೆಲವು ಹೊಸ ಕೋಸ್Fಗಳನ್ನೂ ಹೊರತಂದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು 70% ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.

10. ಹಿಂದು ಕಾಲೇಜ್, ದೆಹಲಿ

10. ಹಿಂದು ಕಾಲೇಜ್, ದೆಹಲಿ

ದೆಹಲಿ ಯುನಿವರ್ಸಿಯ ಕೆಳಗೆ ಬರುವ ಹಳೆಯ ಕಾಲೇಜ್ ಇದಾಗಿದೆ. ಸಾಯನ್ಸ್ ಕೋಸ್Fಗೆ ಸುಮಾರು 50 ಸಾವಿರಕ್ಕಿಂತಲೂ ಕಡಿಮೆ ಶುಲ್ಕವನ್ನು ಹೊಂದಿದ್ದು, ಸಾಧಾರಣ ಶುಲ್ಕವನ್ನು ಹೊಂದಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಉತ್ತಮ ಗ್ಲೋಬಲ್ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
more students are looking towards a career in pure and applied sciences. Government initiatives like Make in India and Digital India encourage the same.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X