ಟ್ರಯೋ ವರ್ಲ್ಡ್ ಐಬಿಡಿಪಿ ಕೋರ್ಸ್ ವಿದ್ಯಾರ್ಥಿವೇತನ

ಎಸ್ಎಸ್ಎಲ್ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆ ನಡೆಸಲಿದ್ದು ಅದರಲ್ಲಿ ಅತಿ ಹೆಚ್ಚು ಅಂಕಗಳಿಸಿದ ಐವರು ವಿದ್ಯಾರ್ಥಿಗಳಿಗೆ ಒಟ್ಟು ರೂ.30 ಲಕ್ಷ ವಿದ್ಯಾರ್ಥಿವೇತನ ನೀಡಲಾಗುವುದು.

ಟ್ರಯೋ ವರ್ಲ್ಡ್ ಅಕಾಡೆಮಿಯು ಇಂಟರ್ನ್ಯಾಷನಲ್ ಬ್ಯಾಕೆಲಾರಿಯೇಟ್ ಡಿಪ್ಲೊಮಾ ಪ್ರೋಗ್ರಾಮ್ (ಐಬಿಡಿಪಿ) ಕೋರ್ಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಹಾಗೂ ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಲೆಂದು ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಪೂರ್ಣ ಶಾಲಾ ಶುಲ್ಕವನ್ನು ಸಂಸ್ಥೆಯೇ ನೋಡಿಕೊಳ್ಳುವುದು.

ಎಸ್ ಎಸ್ ಎಲ್ ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆ ನಡೆಸಲಿದ್ದು ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐವರು ವಿದ್ಯಾರ್ಥಿಗಳಿಗೆ ಒಟ್ಟು ರೂ.30 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

 ಐಬಿಡಿಪಿ ಕೋರ್ಸ್ ವಿದ್ಯಾರ್ಥಿವೇತನ

ಸ್ಕಾಲರ್ಷಿಪ್ ನಿಯಮಗಳು ಮತ್ತು ಷರತ್ತುಗಳು

ಐದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಇದರಲ್ಲಿ ವಿದ್ಯಾರ್ಥಿಯ ಶಾಲಾ ಟ್ಯೂಷನ್ ಶುಲ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗುವುದು.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

  • ಭಾರತೀಯ ಅಥವಾ ಅನ್ಯದೇಶದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
  • ವಿದ್ಯಾರ್ಥಿಯು ಹತ್ತನೇ ತರಗತಿಯಲ್ಲಿ (ಐಜಿಸಿಎಸ್ಇ, ಎಂವೈಪಿ, ಐಸಿಎಸ್ಇ, ಸಿಬಿಎಸ್ಇ) ಕನಿಷ್ಠ ಶೇ.90 ಅಂಕಗಳನ್ನು ಗಳಿಸಿರಬೇಕು.
  • ವಿದ್ಯಾರ್ಥಿಯ ವಯಸ್ಸು ಆಗಸ್ಟ್ 2017 ಕ್ಕೆ 17 ವರ್ಷ ಮೀರಿರಬಾರದು.

    ವಿದ್ಯಾರ್ಥಿವೇತನ ಮಾನದಂಡ

    • ವಿದ್ಯಾರ್ಥಿಯು ಹಿಂದಿನ ಎರಡು ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿರಬೇಕು.
    • ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಬೇಕು.
    • ಸಮುದಾಯ ಸೇವೆಗಳಲ್ಲಿ ತೊಡಗಿಸಿಕೊಂಡು ಸಮುದಾಯಕ್ಕೆ ಏನಾದರು ಕೊಡುಗೆಗಳನ್ನು ನೀಡಿರಬೇಕು.
    • ವಿದ್ಯಾರ್ಥಿಯು ಶಾಲೆಯ ವತಿಯಿಂದ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.
    • ಪರೀಕ್ಷೆಯು ಇಂಗ್ಲಿಷ್, ಮ್ಯಾಥಮ್ಯಾಟಿಕ್ಸ್ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿರುತ್ತದೆ.
    • ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

    ಅರ್ಜಿ ಸಲ್ಲಿಕೆ

    ವಿದ್ಯಾರ್ಥಿವೇತನದ ಶುಲ್ಕ ರೂ.2000/- ದೊಂದಿಗೆ ವಿದ್ಯಾರ್ಥಿವೇತನದ ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸತಕ್ಕದ್ದು.

    ಅರ್ಜಿಯ ಜೊತೆಯಲ್ಲಿ ಈ ಕೆಳಕಂಡ ದಾಖಲೆಗಳನ್ನು ಲಗತ್ತಿಸುವುದು

    • ವಿದ್ಯಾರ್ಥಿ ವೇತನ ಏತಕ್ಕಾಗಿ ಎನ್ನುವುದನ್ನು ಖುದ್ದು ವಿದ್ಯಾರ್ಥಿಯೇ 800 ಪದಗಳ ಮಿತಿಯಲ್ಲಿ ಬರೆದುಕಳುಹಿಸಬೇಕು.
    • ಹತ್ತನೇ ತರಗತಿ ಅಂಕಪಟ್ಟಿ
    • ಕಳೆದ ಎರಡು ವರ್ಷಗಳ ಶೈಕ್ಷಣಿಕ ವರದಿ
    • ಶೈಕ್ಷಣಿಕ ಹೊರತು ಪಡಿಸಿ ಇತರೆ ಸಾಧನೆಗಳ ಮಾಹಿತಿ
    • ಪ್ರಸ್ತುತ ಕಲಿಯುತ್ತಿರುವ ಶಾಲೆಯ ವತಿಯಿಂದ ಶಿಫಾರಸ್ಸು ಪತ್ರ

    ಷರತ್ತುಗಳು

    • ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ಅವಧಿಯಲ್ಲಿ ಯಾವುದೇ ರೀತಿಯ ದುರ್ನಡತೆ ಹೊಂದಿರಬಾರದು.
    • ಆಯ್ಕೆಯಾದ ವಿದ್ಯಾರ್ಥಿಗಳಿಗೆ ದಾಖಲೆಯ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ ಮಾಹಿತಿ ನೀಡಲಾಗುವುದು
    • ಯಾವುದೇ ಸಂದರ್ಭದಲ್ಲಾದರು ವಿದ್ಯಾರ್ಥಿವೇತನವನ್ನು ಮೊಟಕುಗೊಳಿಸುವ ಎಲ್ಲಾ ಹಕ್ಕು ಟ್ರಯೋ ಸಂಸ್ಥೆಗೆ ಇರುತ್ತದೆ.

    ಅರ್ಜಿ ಸಲ್ಲಿಕೆ ದಿನಾಂಕ

    ಜುಲೈ ಮೊದಲ ವಾರದವರೆಗೂ ಅರ್ಜಿ ಸಲ್ಲಿಸಬಹುದು

    ಟ್ರಯೋ ವರ್ಲ್ಡ್ ಅಕಾಡೆಮಿ

    ಬೆಂಗಳೂರಿನ ಸಹಕಾರನಗರದಲ್ಲಿರುವ ಟ್ರಯೋ ವರ್ಲ್ಡ್ ಅಕಾಡಿಮಿಯು ಅಂತಾರಾಷ್ಟ್ರೀಯ ಮಾದರಿಯ ಶಿಕ್ಷಣ ಸಂಸ್ಥೆಯಾಗಿದ್ದು ಇಂಟರ್ನ್ಯಾಷನಲ್ ಬ್ಯಾಕೆಲಾರಿಯೇಟ್ ಶಿಕ್ಷಣ ಒದಗಿಸುತ್ತಿದೆ. ತನ್ನದೇ ಆದ ವಿಶಿಷ್ಟ ಕಲಿಕಾ ಮಾದರಿಯಲ್ಲಿ ಶಿಕ್ಷಣದಲ್ಲಿ ಹೊಸತನ ತುಂಬುತ್ತ ಸಮಾಜಕ್ಕೆ ಉತ್ತಮ ನಾಗರೀಕರನ್ನು ಕೊಡುವ ಮಹತ್ವದ ಉದ್ದೇಶದಿಂದ ಸ್ಥಾಪಿತವಾಗಿದೆ.

    ಹೆಚ್ಚಿನ ಮಾಹಿತಿಗಾಗಿ www.trioworldacademy.co ಗಮನಿಸಿ

    For Quick Alerts
    ALLOW NOTIFICATIONS  
    For Daily Alerts

    English summary
    TRIO world academy invites application from sslc toppers for the IBDP scholarship program
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X