ವಿಜ್ಞಾನ ವಸ್ತು ಪ್ರದರ್ಶನ: ರಾಷ್ಟ್ರಮಟ್ಟಕ್ಕೆ ರಾಜ್ಯದ ವಿದ್ಯಾರ್ಥಿನಿಯರು

Posted By:

ಸರಳ ಪ್ರಯೋಗಗಳಿಂದ ಆಹಾರ ಕಲಬೆರಕೆ ಕಂಡು ಹಿಡಿಯುವುದನ್ನು ನಿರೂಪಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಹೊಸಪೇಟೆಯ ಬಾಲಕಿಯರ ಸರಕಾರಿ ಪ್ರೌಢಶಾಲೆ (ಮಾಜಿ ಪುರಸಭೆ)ಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕವಟಗಿ ಕಾವ್ಯಾ ಮತ್ತು ಅನು ಎಂ ಈ ಸಾಧನೆ ಮಾಡಿದ್ದು, ಜನವರಿ 2018 ರಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ಎಸ್ ಎಸ್ ಸಿ ನೇಮಕಾತಿ: ಭಾಷಾ ತಾರತಮ್ಯ, ಕನ್ನಡಿಗರಿಗೆ ಅನ್ಯಾಯ!

ರಾಷ್ಟ್ರಮಟ್ಟಕ್ಕೆ ರಾಜ್ಯದ ವಿದ್ಯಾರ್ಥಿನಿಯರು

ಮೈಸೂರಿನಲ್ಲಿ ಡಿಸೆಂಬರ್ 8ರಿಂದ 10ರ ವರೆಗೆ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು 'ಆರೋಗ್ಯ ಮತ್ತು ಯೋಗಕ್ಷೇಮ' ಎಂಬ ಶೀರ್ಷಿಕೆಯಡಿ 'ಆಹಾರ ಕಲಬೆರಕೆ ಕಂಡುಹಿಡಿಯುವ ಸರಳ ಪ್ರಯೋಗ' ಪ್ರದರ್ಶಿಸಿದ್ದರು.

ವಿಜ್ಞಾನ ಶಿಕ್ಷಕ ಬಿ.ರಾಜಾಖಾನ್ ಅವರ ಮಾರ್ಗದರ್ಶನದಲ್ಲಿ 15 ಆಹಾರ ಪದಾರ್ಥಗಳ ಕಲಬೆರಕೆ ಪತ್ತೆಯನ್ನು ಸರಳ ಪ್ರಯೋಗಗಳ ಮೂಲಕ ಯಶಸ್ವಿಯಾಗಿ ತೋರಿಸಿದ್ದಾರೆ.

ಪ್ರಯೋಗದ ವಿವರ: ಆಹಾರದ ಎಣ್ಣೆಯಲ್ಲಿ ಅನ್ಯ ಎಣ್ಣೆ ಮಿಶ್ರಣ ಮಾಡಿದ್ದನ್ನು ಕಂಡುಹಿಡಿಯಲು 5 ಎಂ.ಎಲ್.ನಷ್ಟು ಹೈಡ್ರೋಕ್ಲೋರಿಕ್ ಆಮ್ಲ ಹಾಕಿದರೆ, ಎಣ್ಣೆ ಕಂದು ಮಿಶ್ರಿತ ಕೆಂಪುಬಣ್ಣಕ್ಕೆ ತಿರುಗುತ್ತದೆ. ಹಾಲಿನಲ್ಲಿ ನೀರು ಬೆರೆಸಿರುವ ಜತೆಗೆ ಗಟ್ಟಿಮಾಡಲು ಜೋಳ, ಗೋಧಿ ಹಿಟ್ಟು ಸೇರಿಸಿದ್ದನ್ನು ಪತ್ತೆಹಚ್ಚಲು 5 ಎಂ.ಎಲ್. ಹಾಲಿನಲ್ಲಿ 2ರಿಂದ 3 ಎಂ.ಎಲ್.ನಷ್ಟು ಅಯೋಡಿನ್ ದ್ರಾವಣ ಬೆರೆಸಿದರೆ ಸಾಕು. ಹಾಲಿನ ಬಣ್ಣ ಸ್ವಲ್ಪ ಸಮಯದಲ್ಲೇ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹೀಗೆ ಆಹಾರದ ಕಲಬೆರಕೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂದು ವಿದ್ಯಾರ್ಥಿನಿಯರು ಸಾಧಿಸಿತೋರಿಸಿದ್ದಾರೆ.

ಇಷ್ಟೇ ಅಲ್ಲದೆ ರವೆಯಲ್ಲಿ ಮರಳು ಬೆರೆಸಿದ್ದರೆ, ಒಂದು ಗಾಜಿನ ಲೋಟದ ತುಂಬ ನೀರು ಹಾಕಿ, ನಿಧಾನವಾಗಿ ರವೆ ಹಾಕುತ್ತ ಹೋದರೆ, ರವೆ ಹಗುರವಾಗಿ ನೀರಿನ ಮೇಲೆ ತೇಲಲಿದೆ. ಮರಳು ಇಲ್ಲವೇ ಮಣ್ಣು ಲೋಟದ ಕೆಳಭಾಗದಲ್ಲಿ ಸಂಗ್ರಹವಾಗಲಿದೆ. ಕಾಫಿ ಪುಡಿಯಲ್ಲಿ ಹುಣಸೆ ಬೀಜ ಮಿಶ್ರಣಮಾಡಿದ್ದರೆ, ಒಂದು ಗಾಜಿನ ಲೋಟದ ತುಂಬ ನೀರು ಹಾಕಿ, ನಿಧಾನವಾಗಿ ಕಾಫಿಪುಡಿ ಹಾಕುತ್ತ ಹೋದರೆ, ಕಾಫಿ ಪುಡಿ ಹಗುರವಾಗಿ ನೀರಿನ ಮೇಲೆ ತೇಲಲಿದೆ. ಹುಣಸೆ ಬೀಜ ಲೋಟದ ಕೆಳಭಾಗಕ್ಕೆ ಹೋಗಲಿದೆ. ಇದರಿಂದ ಕಲಬೆರಕೆಯ ವಸ್ತು ಬೇಗನೇ ಪತ್ತೆಯಾಗಲಿದೆ. ಇದೇ ಮಾದರಿಯಲ್ಲಿ ಬೇರೆ ಬೇರೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯಾಗಿರುವ ವಸ್ತುಗಳನ್ನು ಸರಳ ಪ್ರಯೋಗಗಳ ಮೂಲಕ ಪತ್ತೆಹಚ್ಚುವಲ್ಲಿ ಈ ವಿದ್ಯಾರ್ಥಿನಿಯರು ಯಶಸ್ವಿಯಾಗಿದ್ದಾರೆ.

ಶಾಲೆಯ ವಿದ್ಯಾರ್ಥಿನಿಯರಾದ ಕವಟಗಿ ಕಾವ್ಯಾ ಮತ್ತು ಅನು ಎಂ. ಅವರು ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ತೆಲಂಗಾಣಕ್ಕೆ ತೆರಳುವ ಖರ್ಚನ್ನು ಎಸ್‌ಡಿಎಂಸಿ ವತಿಯಿಂದ ಭರಿಸಲಾಗುವುದು ಎಂದು ಬಾಲಕಿಯರ ಸರಕಾರಿ ಪ್ರೌಢಶಾಲೆ (ಮಾಜಿ ಪುರಸಭೆ), ಹೊಸಪೇಟೆ ಮುಖ್ಯೋಪಾಧ್ಯಾಯರಾದ ಕಂಪ್ಲಿ ಚಂದ್ರಪ್ಪ ತಿಳಿಸಿದ್ದಾರೆ.

English summary
Two girls from Ballary district selected to the national science exhibition. They exhibits the simple experiments to find stigma in food.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia