ತಾಯಿ ತಾಲ್ಲೂಕಿಗೆ ಪ್ರಥಮ, ಮಗಳು ರಾಜ್ಯಕ್ಕೆ ಪ್ರಥಮ!

Posted By:

ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು ವಿಜ್ಚಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಧಿಕಾ ಪೈ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ತಾಯಂತೆ ಮಗಳು ಎಂಬ ಗಾದೆಯಂತೆ ರಾಧಿಕಾ ಪೈ ತಾಯಿ ಮಾಯಾ ಎಂ. ಪೈ ಕೂಡ ತಮ್ಮ ಶಾಲಾ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಂದಾಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದರು. ಈಗ ರಾಧಿಕಾ ತಮ್ಮ ತಾಯಿಯ ಸಾಧನೆಯನ್ನು ಮೀರಿ ರಾಜ್ಯಕ್ಕೆ ಪ್ರಥಮ ಎನಿಸಿಕೊಂಡಿದ್ದಾರೆ.

ಟ್ಯೂಷನ್ ಇಲ್ಲದೇ ಸಾಧನೆ

ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಕಾಲೇಜಿನ ಎಂ. ರಾಧಿಕಾ ಪೈ ಟ್ಯೂಷನ್‌ಗೆ ಹೋಗದೆಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಪ್ರಥಮ ಸ್ಥಾನ ಪಡೆಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ.

ರಾಧಿಕಾ ಪೈ ರಾಜ್ಯಕ್ಕೆ ಪ್ರಥಮ

ಸಾಧನೆ ಮಾಡಲು ಪ್ರತಿಷ್ಠಿತ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡಬೇಕಿಲ್ಲ. ಮಹಾನಗರವೇ ಆಗಬೇಕಿಲ್ಲ ಎಂಬ ಮಾತನ್ನು ಅಪ್ಪಟ ಗ್ರಾಮೀಣ ಪ್ರತಿಭೆ ರಾಧಿಕಾ ಸಾಧಿಸಿ ತೋರಿಸಿದ್ದಾರೆ.

600ಕ್ಕೆ 596 ಅಂಕ ಗಳಿಸಿರುವ ರಾಧಿಕಾ, ವಿಜ್ಞಾನದ ನಾಲ್ಕೂ ವಿಷಯಗಳಲ್ಲಿ 100 ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಸಂಸ್ಕೃತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ತಲಾ 98 ಅಂಕ ಪಡೆದಿದ್ದಾರೆ.

'ಟ್ಯೂಷನ್‌ಗೆ ಹೋದರೆ ಮಾತ್ರ ಹೆಚ್ಚು ಅಂಕ ಗಳಿಸಬಹುದು ಎಂಬುದು ತಪ್ಪು ಕಲ್ಪನೆ. ನಮ್ಮ ಕಾಲೇಜಿನಲ್ಲಿ ಒಳ್ಳೆ ಉಪನ್ಯಾಸಕರಿದ್ದಾರೆ. ಅವರು ಉತ್ತಮ ರೀತಿಯಲ್ಲಿ ಬೋಧನೆ ಮಾಡಿದ್ದು ಈ ಸ್ಥಾನ ಪಡೆಯಲು ಮುಖ್ಯ ಕಾರಣ. 'ಪಾಠವನ್ನು ಸರಿಯಾಗಿ ಕೇಳಿ ಮನನ ಮಾಡಿಕೊಳ್ಳುತ್ತಿದ್ದ ನನಗೆ ಟ್ಯೂಷನ್‌ಗೆ ಹೋಗಬೇಕು ಎಂದು ಅನಿಸಲಿಲ್ಲ. ಜತೆಗೆ ಯಾವುದೇ ವಿಷಯದಲ್ಲಿ ಸಂದೇಹ ಬಂದಾಗ ಉಪನ್ಯಾಸಕರನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ' ಎನ್ನುತ್ತಾರೆ ರಾಧಿಕಾ.

ದಿನಕ್ಕೆ ಎರಡು ಗಂಟೆ ಮಾತ್ರ ಓದಿಗೆ ಮೀಸಲು

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ರಾಧಿಕಾ ಓದಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟವರಲ್ಲ. ಶಾಲೆ ಆರಂಭವಾದಾಗಿನಿಂದ ದಿನಕ್ಕೆ ಎರಡು ಗಂಟೆ ಅಭ್ಯಾಸ ಮಾಡುತ್ತಿದ್ದ ರಾಧಿಕಾ ಪರೀಕ್ಷೆ ಹಿಂದಿನ ದಿನ ಅವರು ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದರು.

English summary
Udupi girl Radhika Pai got first place by scoring 596 out of 600 in second puc.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia