ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ )ಯಲ್ಲಿ ಸಿಬಿಎಸ್ಇ ಅನೇಕ ಮಾರ್ಪಾಡುಗಳನ್ನು ಮಾಡಿದೆ.
2018ರ ಎನ್ಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ಕುರಿತಾಗಿ ಸಿಬಿಎಸ್ಇ ಹೊರಡಿಸಿರುವ ಸುತ್ತೋಲೆಯಲ್ಲಿ ಪರೀಕ್ಷೆ ಹಾಗೂ ವಯೋಮಿತಿಯಲ್ಲಿ ಬದಲಾವಣೆ ತಂದಿರುವ ಮಾಹಿತಿ ಇದೆ.

ವಯೋಮಿತಿ
ಜೆ ಆರ್ ಎಫ್ ಸಾಮಾನ್ಯ ಅಭ್ಯರ್ಥಿಗಳ ವಯೋಮಿತಿಯನ್ನು 28 ರಿಂದ 30 ವರ್ಷಕ್ಕೆ ಏರಿಸಲಾಗಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 35 ರವರೆಗೆ ಅವಕಾಶ ನೀಡಲಾಗಿದೆ.
ಪರೀಕ್ಷೆ
ಈ ಬಾರಿಯ ಪರೀಕ್ಷೆ ಎರಡು ಪತ್ರಿಕೆಗಳನ್ನು ಮಾತ್ರ ಒಳಗೊಂಡಿರುತ್ತದೆ. 350 ಅಂಕಗಳ ಬದಲಾಗಿ 300 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ.
150 ಅಂಕಗಳ ಮೂರನೇ ಪತ್ರಿಕೆ ರದ್ದುಪಡಿಸಲಾಗಿದ್ದು, ಎರಡನೇ ಪತ್ರಿಕೆಯ ಅಂಕವನ್ನು 200 ಕ್ಕೆ ಏರಿಸಿ ಪರೀಕ್ಷೆ ಅವಧಿಯನ್ನು 2 ಗಂಟೆಗೆ ನಿಗದಿಪಡಿಸಲಾಗಿದೆ.
ಇನ್ನು ಪರೀಕ್ಷೆಯು ಎಂದಿನಂತೆ ಬಹು ಆಯ್ಕೆ ಮಾದರಿಯಲ್ಲಿಯೇ ಇರಲಿದೆ.

ಪ್ರಮುಖ ದಿನಾಂಕಗಳು
ಸಂಪೂರ್ಣ ಅಧಿಸೂಚನೆ ಪ್ರಕಟಿಸುವ ದಿನಾಂಕ: 01-02-2018
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 06-03-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2018
ಪರೀಕ್ಷೆ ನಡೆಯುವ ದಿನಾಂಕ: 08-07-2018
ಎನ್ ಇ ಟಿ ಪರೀಕ್ಷೆ
ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತಾ ಪರೀಕ್ಷೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ತೇರ್ಗಡೆಯಾಗಿರಬೇಕು. ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂಲಕ ವರ್ಷಕ್ಕೆ ಎರಡು ಬಾರಿ ಎನ್‌ಇಟಿ ನಡೆಯುತ್ತದೆ.
ತೇರ್ಗಡೆ ವಿಧಾನ ಯುಜಿಸಿ ನಿಯಮಾವಳಿಯಂತೆ ಶೇಕಡವಾರಿನ (ಕಟ್ ಆಫ್ ಪರ್ಸೆಂಟೇಜ್) ಮೂಲಕ ಅಭ್ಯರ್ಥಿಗಳ ಫಲಿತಾಂಶ ಘೋಷಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











