ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್)ಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮುಂದೂಡಿದೆ.
ಈ ಹಿಂದೆ ಸೆಪ್ಟೆಂಬರ್ 16 ರಿಂದ 25ರವರೆಗೆ ನೆಟ್ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಆದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್)ಯ ಪರೀಕ್ಷೆಯ ದಿನದಂದೇ ನೆಟ್ ಪರೀಕ್ಷೆ ಇರುವುದರಿಂದ ಪರೀಕ್ಷೆಯನ್ನು ಸೆ.24ಕ್ಕೆ ಮುಂದೂಡಲಾಗಿದೆ.
'ಐಸಿಎಆರ್ ಪರೀಕ್ಷೆಗಳನ್ನು ಸೆ 16 ರಿಂದ 23ರವರೆಗೆ ನಡೆಸಲು ಎನ್‌ಟಿಎ ನಿರ್ಧರಿಸಿದೆ. ಸೆ.24 ರಿಂದ ಯುಜಿಸಿ-ನೆಟ್ 2020ರ ಪರೀಕ್ಷೆಗಳು ಆರಂಭವಾಗಲಿವೆ' ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ ಸಾಧನಾ ಪರಶಾರ್ ಹೇಳಿದ್ದಾರೆ. ಶೀಘ್ರದಲ್ಲೇ ವಿಷಯವಾರು ದಿನಾಂಕ, ಅವಧಿಯನ್ನು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
For Quick Alerts
For Daily Alerts