ಕೆಎಸ್ಒಯು ಗೆ ಯುಜಿಸಿ ಪಾಠ: ವಿದ್ಯಾರ್ಥಿಗಳ ಪರದಾಟ

ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಕೆಎಸ್ಒಯು ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಂಡಿದ್ದು, ಈ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಒಯು) ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಲು ಯುಜಿಸಿ ಆದೇಶ ಹೊರಡಿಸಿದೆ.

ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಕೆಎಸ್ಒಯು ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಂಡಿದ್ದು, ಈ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

ಒಂದು ಕಾಲದಲ್ಲಿ ದೂರ ಶಿಕ್ಷಣದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದ ಕೆಎಸ್ಒಯು ಈಗ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ತನ್ನ ಹೆಸರನ್ನು ತಾನೇ ಹಾಳು ಮಾಡಿಕೊಂಡಿದೆ.

ಕೆಎಸ್ಒಯು ಮಾನ್ಯತೆ ರದ್ದು ಪಡಿಸಿದ ಯುಜಿಸಿ

ವ್ಯಾಪ್ತಿ ಮೀರಿ ಚಟುವಟಿಕೆ ವಿಸ್ತರಣೆ, ನಿಯಮ ಉಲ್ಲಂಘಿಸಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ ಆರಂಭಿಸಿರುವ ಕಾರಣ ಮಾನ್ಯತೆ ರದ್ದುಗೊಳಿಸಲಾಗಿದೆ.

ಕರ್ನಾಟಕದ ಮುಕ್ತ ವಿಶ್ವವಿದ್ಯಾನಿಲಯದ ಅಧಿಕಾರಿಗಳ ನಿರ್ಲಕ್ಷಕ್ಕೆ ಕಡೆಗೂ 3.25 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಚಿಂತಾಜನಕವಾಗಿದೆ. ಇಷ್ಟು ದಿನ ಪದವಿ ಆಸೆ ಹೊತ್ತಿದ್ದ ವಿದ್ಯಾರ್ಥಿಗಳ ಕನಸಿಗೆ ನೀರೆರಚಿದಂತಾಗಿದೆ.

ಇದೀಗ ಯುಜಿಸಿ ನೂತನ ನಿಯಮಾಳಿಯನ್ನು ರೂಪಿಸಿದ್ದು, ಇದರ ಅನ್ವಯ ಕೆಎಸ್​​ಒಯು ದೂರ ಶಿಕ್ಷಣ ಪದ್ಧತಿಯಲ್ಲಿ ಪದವಿ ಪಡೆದಿದ್ದ ಯಾವುದೇ ಅಂಕ ಪಟ್ಟಿಗಳಿಗೆ ಮಾನ್ಯತೆ ಇಲ್ಲಾ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಯುಜಿಸಿ ಹೊಸ ನಿಯಮಾವಳಿಯನ್ನು ಜಾರಿಗೆ ತಂದಿದ್ದು, ಕಳೆದ 10 ವರ್ಷಗಳ ಹಿಂದೆ ಇದ್ದ ನಿಯಮಾವಳಿಗೆ ತಿದ್ದುಪಡಿ ತರಲಾಗಿದೆ. ಈ ಮುಖೇನ 2017-18 ನೇ ಸಾಲಿನ ಶೈಕ್ಷಣಿಕ ವರ್ಷದ ನವೀಕರಣ ಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಮೂರು ಕಾಲು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಮಣ್ಣುಪಾಲಾಗಿದೆ. ಗೃಹಿಣಿಯರು, ಕೂಲಿ ಮಾಡುತ್ತ ಪದವಿ ಕಟ್ಟಿದ್ದವರು, ಶಿಕ್ಷಣ ವಂಚಿತರಾಗಿ ದೂರ ಶಿಕ್ಷಣದ ಆಸೆ ಹೊತ್ತವರು ಹೀಗೆ ಲಕ್ಷಾಂತರ ನತದೃಷ್ಟ ವಿದ್ಯಾರ್ಥಿಗಳ ಪಾಡು ಕೆಳುವವರಿಲ್ಲದೆ, ತಮ್ಮ ವಿದ್ಯಾಭ್ಯಾಸದಲ್ಲಾದ ಹಿನ್ನೆಡೆ ಕುರಿತು ಚಿಂತೆಗಿಡಾಗಿ ಕೆಎಸ್​ಒಯುಗೆ ಹಿಡಿ ಶಾಪ ಹಾಕುತ್ತಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
University Grants Commission (UGC) has withdrawn its recognition to the academic programmes run by the Karnataka State Open University (KSOU), Mysuru.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X