ಆನ್-ಲೈನ್ ನಲ್ಲಿ ಸಿಗಲಿದೆ ಯುಜಿಸಿ ಮಾನ್ಯತೆ ಪಡೆದ ಪದವಿಗಳು

Posted By:

ಯುಜಿಸಿ ಮಾನ್ಯತೆಯ ಪದವಿ ಕೋರ್ಸ್ ಗಳನ್ನು ಆನ್-ಲೈನ್ ಮೂಲಕ ಪಡೆಯಬಹುದು. ಕೆಲದಿನಗಳ ಹಿಂದಷ್ಟೆ 'ಸ್ವಯಂ' ಯೋಜನೆ ಮೂಲಕ ಟಿವಿ ಹಾಗೂ ಇಂಟರ್ನೆಟ್ ಮೂಲಕ ಕಲಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸರ್ಕಾರ ಈಗ ಆನ್-ಲೈನ್ ಶಿಕ್ಷಣದ ಬಗ್ಗೆ ಚಿಂತನೆ ನಡೆಸಿದೆ.

ದೂರ ಶಿಕ್ಷಣದ ಮಾದರಿಯಲ್ಲಿ ಹಲವು ಕೋರ್ಸ್ ಗಳನ್ನು ಆನ್-ಲೈನ್ ಮೂಲಕ ನೀಡುವುದು ಇದರ ಉದ್ದೇಶವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಆನ್-ಲೈನ್ ಶಿಕ್ಷಣ ನಿಯಮಾವಳಿ-2017 ಕರಡು ಪ್ರತಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಸಾರ್ವಜನಿಕರು ಆನ್-ಲೈನ್ ಪದವಿ ಶಿಕ್ಷಣ ಕುರಿತಾದ ಆಕ್ಷೇಪಣೆಗಳನ್ನು ಆಗಸ್ಟ್ 18 ರೊಳಗೆ ಸಲ್ಲಿಸುವಂತೆ ಸೂಚಿಸಿದೆ.

ಆನ್-ಲೈನ್ ಶಿಕ್ಷಣಕ್ಕೆ ಯುಜಿಸಿ ತಯಾರಿ

ಆನ್-ಲೈನ್ ಶಿಕ್ಷಣ ಜಾರಿಗೆ ಬಂದರೆ ವಿದ್ಯಾರ್ಥಿಗಳು ಹಾಗು ವೃತ್ತಿ ನಿರತರು ಯುಜಿಸಿ ಮಾನ್ಯತೆಯ ಪದವಿ ಪಡೆಯಬಹುದಾಗಿದೆ. ಈಗಾಗಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನ್ಯತೆ ಇಲ್ಲದ ಅಲ್ಪಾವಧಿ ಕೋರ್ಸುಗಳನ್ನು ಆನ್-ಲೈನ್ ಮೂಲಕ ನೀಡುತ್ತಿವೆ. ಅಲ್ಲದೇ ಆ ಕೋರ್ಸುಗಳ ಮೂಲಕ ಅನೇಕರು ಉದ್ಯೋಗವನ್ನು ಪಡೆದಿದ್ದಾರೆ. ವಿದೇಶಗಳಲ್ಲಿ ಆನ್-ಲೈನ್ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದ್ದು, ಯಶಸ್ವಿ ಕೂಡ ಆಗಿದೆ.

ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಆನ್-ಲೈನ್ ಪದವಿ ಪಡೆಯಲು ಅವಕಾಶವಿರಲಿದೆ. ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ವಾಸ್ತುಶಿಲ್ಪ ಹಾಗೂ ಫಿಸಿಯೋಥೆರಪಿ ಕೋರ್ಸ್ ಗಳು ಆನ್-ಲೈನ್ ಶಿಕ್ಷಣಕ್ಕೆ ಒಳಪಡುವುದಿಲ್ಲ.

ಈವರೆಗೂ ಯುಜಿಸಿ ಯಾವುದೇ ಆನ್-ಲೈನ್ ಶಿಕ್ಷಣಕ್ಕೆ ಮಾನ್ಯತೆ ನೀಡಿಲ್ಲ, ಬದಲಾಗಿ ದೂರಶಿಕ್ಷಣಕ್ಕೆ ಮಾನ್ಯತೆ ನೀಡಿದೆ. ಆನ್-ಲೈನ್ ಶಿಕ್ಷಣ ಜಾರಿಗೆ ಬಂದರೆ ವೃತ್ತಿನಿರತರು, ಗೃಹಿಣಿಯರು ಮತ್ತು ಶಿಕ್ಷಣ ವಂಚಿತರು ಸುಲಭವಾಗಿ ಪದವಿ ಪೂರೈಸಬಹುದಾಗಿದೆ.

English summary
The UGC has drafted UGC (Online Education) regulations, 2017 which would allow students to obtain a UGC recognised degree online.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia