ಜುಲೈ ಬದಲು ಸೆಪ್ಟೆಂಬರ್ ನಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭ

ದೇಶಾದ್ಯಂತ ಜುಲೈನಿಂದ ಆರಂಭವಾಗಬೇಕಿದ್ದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳನ್ನು ಜುಲೈ ಬದಲಾಗಿ, ಸೆಪ್ಟೆಂಬರ್ ತಿಂಗಳಿನಿಂದ ಆರಂಭಿಸಬಹುದು ಎಂದು ಯುಜಿಸಿ ನೇಮಿಸಿರುವ ಸಮಿತಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೊರೊನಾ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸೆಪ್ಟೆಂಬರ್ ನಿಂದ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭ

ಕೊರೋನಾ ಸೋಂಕಿನಿಂದ ಲಾಕ್ ಡೌನ್ ಘೋಷಣೆಯಾದ ನಂತರ ಆಗಿರುವ ಶೈಕ್ಷಣಿಕ ಪಾಠ-ಪರೀಕ್ಷೆಗಳ ನಷ್ಟ ಮತ್ತು ಆನ್ ಲೈನ್ ಶಿಕ್ಷಣದ ಬಗ್ಗೆ ಪರಿಶೀಲನೆ ನಡೆಸಲು ಯುಜಿಸಿ ಎರಡು ಸಮಿತಿಗಳನ್ನು ರಚಿಸಿತ್ತು. ಹರ್ಯಾಣ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್ ಸಿ ಕುಹಾದ್ ನೇತೃತ್ವದ ಒಂದು ಸಮಿತಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕ್ರಮಗಳನ್ನು ಪರಿಶೀಲಿಸಲು ಮತ್ತು ಬದಲಿ ಶೈಕ್ಷಣಿಕ ದಿನಾಂಕಗಳನ್ನು ಸೂಚಿಸುವಂತೆ ಕೇಳಲಾಗಿತ್ತು. ಆನ್ ಲೈನ್ ಶಿಕ್ಷಣವನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಉಪ ಕುಲಪತಿ ನಾಗೇಶ್ವರ ರಾವ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಈ ಎರಡೂ ಸಮಿತಿಗಳು ನಿನ್ನೆ ಸರ್ಕಾರಕ್ಕೆ ತಮ್ಮ ವರದಿಗಳನ್ನು ಮಂಡಿಸಿವೆ.

ವರದಿ ಹೇಳಿಕೆ:

ಒಂದು ಸಮಿತಿ ಪ್ರತಿವರ್ಷದಂತೆ ಈ ವರ್ಷ ಜುಲೈ ಬದಲು ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಪ್ರಾರಂಭ ಮಾಡುವಂತೆ ಸೂಚಿಸಿದೆ. ವಿಶ್ವವಿದ್ಯಾಲಯಗಳಲ್ಲಿ ಸೌಕರ್ಯಗಳಿದ್ದರೆ ಆನ್ ಲೈನ್ ನಲ್ಲಿ ಪರೀಕ್ಷೆಗಳನ್ನು ನಡೆಸಿ ಇಲ್ಲದಿದ್ದರೆ ಲಾಕ್ ಡೌನ್ ಮುಗಿದ ಬಳಿಕ ಎಂದಿನ ರೀತಿಯಲ್ಲಿ ಪರೀಕ್ಷೆ ನಡೆಸಲಿ ಎಂದು ಹೇಳಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಪ್ರಕಾರ ನೀಡಲಾದ ಎರಡೂ ವರದಿಗಳನ್ನು ಅಧ್ಯಯನ ಮಾಡಿ ಅಧಿಕೃತ ಮಾರ್ಗಸೂಚಿಗಳನ್ನು ಮುಂದಿನ ವಾರ ಹೊರಡಿಸುವ ಸಾಧ್ಯತೆಯಿದೆ.

ಮಾರ್ಚ್ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್ಡೌನ್ ತಂತ್ರ ಕೇಂದ್ರ ಅನುಸರಿಸಿದೆ. ಈ ಮಧ್ಯೆ ಸಮಿತಿಯೂ ಸೆಪ್ಟೆಂಬರ್ನಿಂದ ಕಾಲೇಜು ಆರಂಭಿಸುವಂತೆ ಶಿಫಾರಸ್ಸು ಮಾಡಿದ ಕಾರಣ ವರದಿ ಅನುಸಾರ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪರೀಕ್ಷೆಗಳ ಕುರಿತು ಯುಜಿಸಿ ಮಾರ್ಗಸೂಚಿ ಹೊರಡಿಸಲಿದೆ.

For Quick Alerts
ALLOW NOTIFICATIONS  
For Daily Alerts

English summary
UGC panels recommend academic session from September.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X