UGC Scholarship : ಈ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ, ವಿದ್ಯಾರ್ಥಿವೇತನ ಮೊತ್ತ ಮತ್ತು ಇತರೆ ಮಾಹಿತಿ

ಯುಜಿಸಿ ನೀಡುವ ಈ ವಿದ್ಯಾರ್ಥಿವೇತನಗಳ ಬಗ್ಗೆ ತಿಳಿಯಿರಿ

ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ನಾಲ್ಕು ವಿದ್ಯಾರ್ಥಿವೇತನ ಯೋಜನೆಗಳನ್ನು ಹೊಂದಿದೆ. ಈಶಾನ್ಯ ಪ್ರದೇಶಕ್ಕೆ ಇಶಾನ್ ಉದಯ್ ವಿಶೇಷ ವಿದ್ಯಾರ್ಥಿವೇತನ (ಯುಜಿಸಿ ಇಶಾನ್ ಉದಯ್ ಅಥವಾ ಯುಜಿಸಿ ಎನ್ಇಆರ್), ಒಂಟಿ ಹೆಣ್ಣು ಮಗುವಿಗೆ ಪಿಜಿ ಇಂದಿರಾ ಗಾಂಧಿ ವಿದ್ಯಾರ್ಥಿವೇತನ (ಯುಜಿಸಿ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ), ಯೂನಿವರ್ಸಿಟಿ ರ್ಯಾಂಕ್ ಹೊಂದಿರುವವರಿಗೆ ಪಿಜಿ ಸ್ಕಾಲರ್‌ಶಿಪ್ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪಿಜಿ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವ ಅಭ್ಯರ್ಥಿಗಳು ಅರ್ಜಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ cholarships.gov.in ನಲ್ಲಿ ಸಲ್ಲಿಸಬೇಕು.

ಈ ನಾಲ್ಕು ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಸಲು ಬೇಕಾದ ಅರ್ಹತೆ, ವಿದ್ಯಾರ್ಥಿವೇತನದ ಮೊತ್ತ ಮತ್ತು ಇತರ ವಿವರಗಳು ಇಲ್ಲಿವೆ.

ಯುಜಿಸಿ ಇಶಾನ್ ಉದಯ್ ವಿದ್ಯಾರ್ಥಿವೇತನ:

ಯುಜಿಸಿ ಇಶಾನ್ ಉದಯ್ ವಿದ್ಯಾರ್ಥಿವೇತನ:

ಇಶಾನ್ ಉದಯ್ ವಿದ್ಯಾರ್ಥಿವೇತನವು ಭಾರತದ ಈಶಾನ್ಯ ಪ್ರದೇಶದ (NER) ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಯೋಜನೆಯಾಗಿದೆ. ಯುಜಿಸಿ ಇದನ್ನು 2014-15ರ ಶೈಕ್ಷಣಿಕ ವರ್ಷದಿಂದ ನೀಡಲು ಆರಂಭಿಸಿತು. ಯುಜಿಸಿ ಇಶಾನ್ ಉದಯ್ ವಿದ್ಯಾರ್ಥಿವೇತನವು ಈಶಾನ್ಯದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಮಾನ ಅವಕಾಶಗಳನ್ನು ಒದಗಿಸಲಿದ್ದು, ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) ಹೆಚ್ಚಿಸುವುದು ಮತ್ತು ಈ ಪ್ರದೇಶದಲ್ಲಿ ವೃತ್ತಿಪರ ಶಿಕ್ಷಣದ ಮೇಲೆ ವಿದ್ಯಾರ್ಥಿಗಳು ಹೆಚ್ಚು ಗಮನಹರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈಗ ಅರ್ಜಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ (NSP) ಹೋಸ್ಟ್ ಮಾಡಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ: 10,000

ವಿದ್ಯಾರ್ಥಿವೇತನದ ಮೊತ್ತ: ಸಾಮಾನ್ಯ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 5,400/-ರೂ ಮತ್ತು ತಾಂತ್ರಿಕ, ವೈದ್ಯಕೀಯ, ವೃತ್ತಿಪರ, ಪ್ಯಾರಾಮೆಡಿಕಲ್ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 7,800/-ರೂ ಅನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30.

ಒಂಟಿ ಹೆಣ್ಣು ಮಗುವಿಗೆ ಪಿಜಿ ಇಂದಿರಾ ಗಾಂಧಿ ವಿದ್ಯಾರ್ಥಿವೇತನ:
 

ಒಂಟಿ ಹೆಣ್ಣು ಮಗುವಿಗೆ ಪಿಜಿ ಇಂದಿರಾ ಗಾಂಧಿ ವಿದ್ಯಾರ್ಥಿವೇತನ:

ಒಂಟಿ ಹೆಣ್ಣು ಮಗುವಿಗೆ ಪಿಜಿ ಇಂದಿರಾ ಗಾಂಧಿ ಸ್ಕಾಲರ್‌ಶಿಪ್ ಅನ್ನು ಯುಜಿಸಿಯು ಪರಿಚಯಿಸಿದ್ದು, ಸಣ್ಣ ಕುಟುಂಬದಲ್ಲಿ ಜನಿಸಿರುವ ಹೆಣ್ಣು ಮಕ್ಕಳು ಶಿಕ್ಷಣದ ಮೌಲ್ಯವನ್ನು ಅರಿಯಲು ಮತ್ತು ಅವರು ಶಿಕ್ಷಣವನ್ನು ಪಡೆಯಲು ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ಒಂಟಿ ಹೆಣ್ಣು ಮಗುವಿನ ಶಿಕ್ಷಣವನ್ನು ಬೆಂಬಲಿಸಲು ಈ ಯೋಜನೆ ಸಹಾಯವಾಗಿದೆ. ಸಹೋದರ ಅಥವಾ ಸಹೋದರಿಯರಿಲ್ಲದ ವಿದ್ಯಾರ್ಥಿನಿ ಅಥವಾ ಅವಳಿ ಹೆಣ್ಣು ಮಕ್ಕಳು ಇರುವ ವಿದ್ಯಾರ್ಥಿನಿಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ: 3,000

ವಿದ್ಯಾರ್ಥಿವೇತನದ ಮೊತ್ತ: ವರ್ಷಕ್ಕೆ ರೂ36,200 (ಇದು ಪಿಜಿ ಕೋರ್ಸ್‌ನ ಎರಡು ವರ್ಷಗಳ ಪೂರ್ಣ ಅವಧಿಯ ವರೆಗೆ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30.

ವಿಶ್ವವಿದ್ಯಾಲಯದಲ್ಲಿ ಶ್ರೇಣಿ ಹೊಂದಿರುವವರಿಗೆ ಯುಜಿಸಿ ವಿದ್ಯಾರ್ಥಿವೇತನ:

ವಿಶ್ವವಿದ್ಯಾಲಯದಲ್ಲಿ ಶ್ರೇಣಿ ಹೊಂದಿರುವವರಿಗೆ ಯುಜಿಸಿ ವಿದ್ಯಾರ್ಥಿವೇತನ:

ಪದವಿಯಲ್ಲಿ ವಿಶ್ವವಿದ್ಯಾಲಯದಿಂದ ಶ್ರೇಣಿ ಪಡೆದು "ಅತ್ಯುತ್ತಮ ಸಾಧನೆ" ಮಾಡಿದ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಿಜಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವೃತ್ತಿಪರ ಮತ್ತು ದೂರಶಿಕ್ಷಣ ಕಾರ್ಯಕ್ರಮಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ವಿಶ್ವವಿದ್ಯಾಲಯದಿಂದ ಮೊದಲ ಮತ್ತು ಎರಡನೇ ಶ್ರೇಯಾಂಕ ಹೊಂದಿರುವ ವಿದ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಡೀಮ್ಡ್ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ, ಸ್ವಾಯತ್ತ ಕಾಲೇಜು ಅಥವಾ ಸ್ನಾತಕೋತ್ತರ ಕಾಲೇಜಿನಲ್ಲಿ ನಿಯಮಿತ, ಪೂರ್ಣಕಾಲಿಕ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದಲ್ಲಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿವೇತನಗಳ ಸಂಖ್ಯೆ: 3,000

ವಿದ್ಯಾರ್ಥಿವೇತನ ಮೊತ್ತ: ತಿಂಗಳಿಗೆ ರೂ 3,100 (ಪಿಜಿ ಕೋರ್ಸ್‌ನ ಎರಡು ವರ್ಷಗಳ ಅವಧಿ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30.

ಸ್ನಾತಕೋತ್ತರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿವೇತನ ಯೋಜನೆ:

ಸ್ನಾತಕೋತ್ತರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿವೇತನ ಯೋಜನೆ:

ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಯುಜಿಸಿಯ ಪಿಜಿ ವಿದ್ಯಾರ್ಥಿವೇತನ ಯೋಜನೆ ಸಹಾಯವಾಗಲಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಹಣಕಾಸಿನ ನೆರವು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. MA, MSc, MCom, MSW, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕೋರ್ಸ್ ಗಳಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಈ ಕೋರ್ಸ್‌ಗಳನ್ನು ವೃತ್ತಿಪರೇತರ ಕೋರ್ಸ್‌ಗಳೆಂದು ಪರಿಗಣಿಸಲಾಗುತ್ತದೆ.

ವಿದ್ಯಾರ್ಥಿವೇತನಗಳ ಸಂಖ್ಯೆ: 1,000

ವಿದ್ಯಾರ್ಥಿವೇತನ ಮೊತ್ತ: ಎಂಇ, ಎಂಟೆಕ್ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವವರಿಗೆ ತಿಂಗಳಿಗೆ ರೂ 7,800 ಮತ್ತು ಇತರ ಕೋರ್ಸ್ಗಳಲ್ಲಿ ಅಧ್ಯಯನ ಮಾಡುವವರಿಗೆ ತಿಂಗಳಿಗೆ ರೂ 4,500 ವಿದ್ಯಾರ್ಥಿವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30.

For Quick Alerts
ALLOW NOTIFICATIONS  
For Daily Alerts

English summary
Here we are giving details of UGC scholarships which are providing for college and university students. Check eligibility, amount and how to apply here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X