ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2020 ಮೊದಲ ಸುತ್ತಿನ ಸೀಟು ಹಂಚಿಕೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಯುಜಿಸಿಇಟಿ 2020 ಇಂಜಿನಿಯರಿಂಗ್/ಆರ್ಕಿಟೆಕ್ಚರ್/ಕೃಷಿ ವಿಜ್ಞಾನ /ವೆಟರಿನರಿ /ಫಾರ್ಮಾ ಸೈನ್ಸ್ ಕೋರ್ಸ್ ಗಳಿಗೆ ನ್ಯಾಚುರೋಪತಿ ಮತ್ತು ಯೋಗ ಮೊದಲನೇ ಸುತ್ತಿನಲ್ಲಿ ಸೀಟುಗಳನ್ನು ಹಂಚಿಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಸೂಕ್ತವಾದ ಚಾಯ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು, ಶುಲ್ಕ ಪಾವತಿಸಲು ಡಿಸೆಂಬರ್ 7,2020ರ ಮಧ್ಯಾಹ್ನ 2ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿತ್ತು.
ಅಭ್ಯರ್ಥಿಗಳ ಮನವಿ ಮೇರೆಗೆ ಸೂಕ್ತವಾದ ಚಾಯ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು, ಶುಲ್ಕ ಪಾವತಿಸಲು ಮತ್ತು ಕಾಲೇಜಿಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಇದು ಅಂತಿಮ ಅವಕಾಶವಾಗಿರುತ್ತದೆ.
ವೇಳಾಪಟ್ಟಿ ಇಲ್ಲಿದೆ:
ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ ಚಾಯ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು -ಡಿಸೆಂಬರ್ 8,2020ರ ಬೆಳಿಗ್ಗೆ 11 ಗಂಟೆ ವರೆಗೆ ಅವಕಾಶ
ಚಾಯ್ಸ್ 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು, ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು, ಹಾಗು ಕಾಲೇಜಿನಲ್ಲಿ ಪ್ರವೇಶ ಪಡೆಯುವುದು - ಡಿಸೆಂಬರ್ 8,2020ರಂದು ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ
ಚಾಯ್ಸ್ 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿಸಿದ ನಂತರ ಪ್ರವೇಶ ಪತ್ರಗಳನ್ನು ಪಡೆಯಲು ಡಿಸೆಂಬರ್ 8,2020ರ ಸಂಜೆ 5:30ರ ವರೆಗೆ ಅವಕಾಶ