ದೇಶಾದ್ಯಂತ ಕನಿಷ್ಠ 18000 ವೇತನ ಜಾರಿಗೆ ಕೇಂದ್ರ ಸರ್ಕಾರ ನಿರ್ಧಾರ

ಈ ಮಸೂದೆಯಿಂದ ದೇಶದ 4 ಕೋಟಿ ಜನರಿಗೆ ಪ್ರಯೋಜನಕಾರಿಯಾಗಲಿದ್ದು, ದೇಶದ ಎಲ್ಲೆಡೆ ಎಲ್ಲ ವಿಭಾಗಗಳಲ್ಲಿ ಏಕ ರೂಪದ ಕನಿಷ್ಠ ವೇತನ ನಿಗದಿಗೆ ಇದು ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಉದ್ಯೋಗಿಗಳಿಗೆ ಇದು ಜಾರಿಯಾಗಲಿದೆ

ದೇಶದ ಎಲ್ಲಾ ವಲಯಗಳ ಉದ್ಯೋಗಿಗಳಿಗೆ ಮಾಸಿಕ ಕನಿಷ್ಠ ರೂ.18000 ವೇತನ ನೀಡಬೇಕು ಎನ್ನುವ ಮಹತ್ವದ ವಿಧೇಯಕಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಕೇಂದ್ರ ಸಚಿವ ಸಂಪುಟವು ಹೊಸ ವೇತನ ಸಂಹಿತೆಗೆ ಒಪ್ಪಿಗೆ ಸೂಚಿಸಿದ್ದು, ನಾಲ್ಕು ಕಾರ್ಮಿಕ ಸಂಬಂಧಿ ಕಾನೂನುಗಳನ್ನು ಒಂದೆಡೆಗೆ ತಂದು ಕನಿಷ್ಠ ವೇತನವನ್ನು ಇದು ಕಡ್ಡಾಯ ಮಾಡಲಿದೆ. ಹೊಸ ಕನಿಷ್ಠ ವೇತನ ವಿಧೇಯಕದಲ್ಲಿನ ಅಧಿನಿಯಮದ ಪ್ರಕಾರ, ಕಾರ್ಮಿಕರಿಗೆ ಪ್ರತಿ ತಿಂಗಳೂ ಕನಿಷ್ಠ ವೇತನ 18 ಸಾವಿರ ನೀಡಬೇಕಾಗುತ್ತದೆ.

 ಕನಿಷ್ಠ 18000 ವೇತನ ಜಾರಿಗೆ ಕೇಂದ್ರದ ನಿರ್ಧಾರ

ಈ ಮಸೂದೆಯಿಂದ ದೇಶದ 4 ಕೋಟಿ ಜನರಿಗೆ ಪ್ರಯೋಜನಕಾರಿಯಾಗಲಿದ್ದು, ದೇಶದ ಎಲ್ಲೆಡೆ ಎಲ್ಲ ವಿಭಾಗಗಳಲ್ಲಿ ಏಕ ರೂಪದ ಕನಿಷ್ಠ ವೇತನ ನಿಗದಿಗೆ ಇದು ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಉದ್ಯೋಗಿಗಳಿಗೆ ಇದು ಜಾರಿಯಾಗಲಿದ್ದು, ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಕನಿಷ್ಠ ವೇತನವನ್ನು ನಿಗದಿ ಮಾಡಬಹುದಾಗಿದೆ.

ಪ್ರತಿ ಆರು ಯೂನಿಟನ್ನು ಒಂದು ಕುಟುಂಬ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಮಾಸಿಕ ಕನಿಷ್ಠ ವೇತನ 9 ಸಾವಿರದಿಂದ 18 ಸಾವಿರಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಈ ಮೊದಲು ಕುಟುಂಬದಲ್ಲಿನ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮೂರು ಯೂನಿಟ್ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅವಲಂಬಿತ ಪೋಷಕರು ಹಾಗೂ ಪ್ರತಿ ಮಗುವನ್ನು ಒಂದು ಯುನಿಟ್ ಎಂದು ಪರಿಗಣಿಸಲು ಕೇಂದ್ರ ಮುಂದಾಗಿದೆ.

ಪ್ರಸಕ್ತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಆಗುವ ಸಾಧ್ಯತೆಯಿದೆ. ಅಲ್ಲಿ ಅನುಮೋದನೆ ಸಿಕ್ಕಿದ ನಂತರ ಕಾನೂನಾಗಿ ಜಾರಿಗೆ ಬರಲಿದೆ.

For Quick Alerts
ALLOW NOTIFICATIONS  
For Daily Alerts

English summary
the universal minimum wage would be applicable for all workers irrespective of their pay. At present, the minimum wage rates fixed by the Centre and states are applicable to workers getting up to Rs 18,000 monthly pay.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X