ಕೊರೋನಾ ಬಂದ ನಂತರ ಜೀವನವೇ ಅಯೋಮಯವಾಗಿದೆ. ಇನ್ನು ಮಕ್ಕಳ ಪಾಲಿಗಂತೂ ತಲೇ ನೋವೇ ಆಗಿದೆ. ಈ ಕೊರೋನಾ ಸೋಂಕಿನ ನಡುವೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಬೇಡವೇ ಎಂಬ ಗೊಂದಲದಲ್ಲಿ ಪೋಷಕರು ಇದ್ದಾರೆ, ಈ ನಡುವೆಯೇ ಸೆಪ್ಟೆಂಬರ್ 1,2020 ರಿಂದ ಅನ್‌ಲಾಕ್ 4.0 ಆರಂಭವಾಗಲಿದೆ. ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ಕೂಡ ಆರಂಭವಾಲಿದ್ಯಾ ? ಎನ್ನುವ ಪ್ರಶ್ನೆಗೆ ನಮ್ಮ ಉತ್ತರ ಹೌದು ಆರಂಭವಾಗತ್ತೆ. ಆದರೆ ಎಲ್ಲೆಲ್ಲಿ ಯಾವಾಗಿನಿಂದ ಆರಂಭವಾಗತ್ತೆ ಎನ್ನುವ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ.

ತೆಲಂಗಾಣ:
ತೆಲಂಗಾಣ ರಾಜ್ಯದಲ್ಲಿ ಆನ್‌ಲೈನ್ ತರಗತಿಗಳು ತರಗತಿಗಳು ಮುಂದುವರೆದಿದ್ದು, ೩೦ ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು ಆಗಸ್ಟ್ 27 ರಿಂದ ಫ್ರಾರಂಭವಾಗಿದೆ ಮತ್ತು ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು ಶಾಲೆಗೆ ಹಾಜರಾಗುತ್ತಿದ್ದಾರೆ.
ಒಡಿಶಾ:
ಒಡಿಶಾ ರಾಜ್ಯದಲ್ಲಿ ಅಕ್ಟೋಬರ್ 22 ರಿಂದ 26ರ ವರೆಗೂ ನಡೆಯುವ ದುರ್ಗಾ ಪೂಜೆ ಹಬ್ಬದ ವರೆಗೂ ಶಾಲೆಗಳು ಮುಚ್ಚಿರುತ್ತವೆ.
ತ್ರಿಪುರಾ:
ಅನೇಕ ರಾಜ್ಯಗಳು ಕೇಂದ್ರ ಸರ್ಕಾರದ ಆದೇಶಕ್ಕಾಗಿ ಕಾಯತ್ತಿದ್ದು, ತ್ರಿಪುರಾ ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಆರಂಭವಾಗಿವೆ. ಆಗಸ್ಟ್ 21 ರಿಂದ ತ್ರಿಪುರಾ ರಾಜ್ಯದಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ.
ವೆಸ್ಟ್ ಬೆಂಗಾಲ:
ವೆಸ್ಟ್ ಬೆಂಗಾಲದ ರಾಜ್ಯ ಸರ್ಕಾರವು ಸೆಪ್ಟೆಂಬರ್ 20 ರಿಂದ ಶಾಲೆಗಳು ಆರಂಭವಾಗಲಿದೆ ಎಂದು ಆದೇಶ ಹೊರಡಿಸಿದೆ.
ಸಿಕ್ಕಿಂ:
ಸಿಕ್ಕಿಂ ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ಶಿಕ್ಷಕರು ಶಾಲೆಗೆ ಹಾಜರಾಗಲಿದ್ದಾರೆ.
ಅಸ್ಸಾಂ:
ಅಸ್ಸಾಂ ರಾಜ್ಯದಲ್ಲಿ ಈಗಾಗಲೇ ಶಿಕ್ಷಕರಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಿದ್ದು, ರಾಜ್ಯದಲ್ಲಿ ತರಗತಿಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿವೆ.
ಕರ್ನಾಟಕ:
ನಮ್ಮ ಕರ್ನಾಟಕ ರಾಜ್ಯದಲ್ಲಿ ಇನ್ನೂ ಶಾಲೆಗಳು ಯಾವಾಗ ತೆರೆಯುತ್ತವೆ ಎಂಬುದಕ್ಕೆ ಖಚಿತ ಮಾಹಿತಿಯಿಲ್ಲ. ಆದರೆ ಕಾಲೇಜು ತರಗತಿಗಳು ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿವೆ.


Click it and Unblock the Notifications











