Unlock 4.0 Guidelines: ಹೊಸ ಮಾರ್ಗಸೂಚಿ ರಿಲೀಸ್- ಶಾಲೆ ಮತ್ತು ಕಾಲೇಜುಗಳು ಸೆ.30ರ ವರೆಗೆ ಸ್ಥಗಿತ

ಕೇಂದ್ರ ಗೃಹ ಸಚಿವಾಲಯವು ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಅನ್‌ಲಾಕ್‌-4 ಹೊಸ ಮಾರ್ಗ ಸೂಚಿಯನ್ನು ಪ್ರಕಟ ಮಾಡಿದೆ. ಈ ಮಾರ್ಗಸೂಚಿಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿವೆ.

ಅನ್‌ಲಾಕ್ 4.0: ಶಾಲೆ ಕಾಲೇಜುಗಳು ಸೆ.30ರ ವರೆಗೆ ತೆರೆಯಲ್ಲ

ಹೊಸ ಮಾರ್ಗಸೂಚಿಯ ಅನುಸಾರ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್‌ಗಳು ಸೆಪ್ಟೆಂಬರ್ 30 ರ ವರೆಗೆ ಸ್ಥಗಿತವಾಗಿರುತ್ತವೆ. ಆದರೆ ಆನ್‌ಲೈನ್‌ ಮತ್ತು ದೂರಶಿಕ್ಷಣ ತರಗತಿಗಳು ಮಾತ್ರ ಮುಂದುವರೆಯಲಿವೆ' ಎಂದು ತಿಳಿಸಲಾಗಿದೆ.

ಸಾಮಾಜಿಕ, ಅಕಾಡೆಮಿಕ್, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಿಗೆ 100 ಜನರ ಮಿತಿಯಲ್ಲಿ ಸೇರಬಹುದಾಗಿದ್ದು, ಈ ನಿಯಮ ಸೆಪ್ಟೆಂಬರ್ 21 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳಿಗೆ ಆನ್‌ಲೈನ್‌ ಶಿಕ್ಷಣ ಮತ್ತು ಟೆಲಿ ಕೌನ್ಸಿಲಿಂಗ್ ಕೆಲಸಗಳ ಉದ್ದೇಶಕ್ಕಾಗಿ ಶೇಕಡ.50 ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಕಂಟೈನ್‌ಮೆಂಟ್‌ ಜೋನ್‌ ಹೊರವಲಯಗಳಲ್ಲಿ ಮಾತ್ರ ಕರೆಯಬಹುದು. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಲಿದೆ.

ಕಂಟೈನ್‌ಮೆಂಟ್‌ ಜೋನ್‌ ಹೊರವಲಯದ ಪ್ರದೇಶಗಳಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸ್ವಯಂಪ್ರೇರಿತವಾಗಿ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಬಹುದು. ಆದರೆ ಅದಕ್ಕೂ ಮುನ್ನ ತಂದೆ-ತಾಯಿ, ಪೋಷಕರ ಲಿಖಿತ ಒಪ್ಪಿಗೆ ಪಡೆದಿರಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಹಾಗೂ ಪ್ರೊಫೆಷನಲ್ ಪ್ರೋಗ್ರಾಮ್‌ ಸಂಶೋಧನಾ ವಿದ್ಯಾರ್ಥಿಗಳು (ಪಿಹೆಚ್‌ಡಿ) ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಲ್ಯಾಬ್/ಪ್ರಯೋಗಾಲಯ ಚಟುವಟಿಕೆಗಳನ್ನು ನಡೆಸಲು ಉನ್ನತ ಶಿಕ್ಷಣ ಇಲಾಖೆಯು ಕೇಂದ್ರ ಗೃಹ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಅನುಮತಿ ಪಡೆಯಬಹುದು.

For Quick Alerts
ALLOW NOTIFICATIONS  
For Daily Alerts

English summary
Unlock 4.0 MHA released new guidelines- schools, colleges and other education institutions remains closed till sep 30.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X