ಭಾನುವಾರ ದೇಶಾದ್ಯಂತ ಯುಪಿಎಸ್​ಸಿ ಪರೀಕ್ಷೆ: ಪರೀಕ್ಷಾ ನಿಯಮ ಮೀರಿದರೆ ಕಠಿಣ ಕ್ರಮ

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ನಿಯಮಗಳನ್ನು ಮೀರಿದರೆ ಅಭ್ಯರ್ಥಿಗಳು ಮುಂದೆ ಯಾವ ಪರೀಕ್ಷೆಯನ್ನು ತೆಗೆದುಕೊಳ್ಳುವಂತಿಲ್ಲ.

ಜೂನ್ 18, ಭಾನುವಾರ ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ಹೊಸ ನಿಯಮವೊಂದನ್ನು ಲೋಕ ಸೇವಾ ಆಯೋಗವು ಅಳವಡಿಸಿದೆ.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಯಾರಾದರು ಎಲೆಕ್ಟ್ರಾನಿಕ್ ಉಪಕರಣದೊಂದಿಗೆ ಸಿಕ್ಕಿಬಿದ್ದರೆ ಅಂತಹ ಅಭ್ಯರ್ಥಿಗಳು ಮುಂದೆ ಯಾವ ಪರೀಕ್ಷೆಯನ್ನು ತೆಗೆದುಕೊಳ್ಳುವಹಾಗಿಲ್ಲ ಎನ್ನುವಂತಹ ಸೂಚನೆ ಹೊರಡಿಸಿದೆ.

ಭಾನುವಾರ ದೇಶಾದ್ಯಂತ ಯುಪಿಎಸ್​ಸಿ ಪರೀಕ್ಷೆ

ಯುಪಿಎಸ್ಸಿಯು ಪರೀಕ್ಷಾರ್ಥಿಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್ ಫೋನುಗಳು, ಸಂವಹನ ನಡೆಸುವಂತಹ ಸಾಧನಗಳಾದ ಬ್ಲೂಟೂತ್, ಲ್ಯಾಪ್ಟಾಪ್ ಮತ್ತು ಕ್ಯಾಲುಕ್ಲೇಟರ್ ಗಳನ್ನು ತರದಂತೆ ಸೂಚಿಸಿದೆ ಅಲ್ಲದೇ ಬೆಲೆಬಾಳುವ ವಸ್ತುಗಳನ್ನು ತರದಂತೆ ಸೂಚಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಮೌಲ್ಯಯುತ ವಸ್ತುಗಳು, ಬ್ಯಾಗ್ ಗಳನ್ನು ತರಬಾರದು. ತಂದರೂ ಅವುಗಳ ಸುರಕ್ಷತೆಗೆ ಖಾತ್ರಿ ಒದಗಿಸಲಾಗುವುದಿಲ್ಲ. ಯಾವುದೇ ನಷ್ಟಕ್ಕೆ ಯುಪಿಎಸ್ ಸಿ ಹೊಣೆಯಲ್ಲ ಎಂದು ತಿಳಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ

ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಬೇಕು. ಒಂದು ವೇಳೆ ನಿಮ್ಮ ಪ್ರವೇಶ ಪತ್ರದಲ್ಲಿರುವ ಭಾವಚಿತ್ರದ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ, ನೀವು ಆಧಾರ್ ಅಥವಾ ಇನ್ನಾವುದಾದರೂ ಗುರುತಿನ ಚೀಟಿಯನ್ನು ಜತೆಗೆ ಇಟ್ಟುಕೊಳ್ಳುವುದು ಉತ್ತಮ. ಎರಡು ಭಾಗಗಳಲ್ಲಿ ನಡೆಯುವ ಪರೀಕ್ಷೆಗೆ ಎರಡು ಪಾಸ್ ಪೋರ್ಟ್ ಗಾತ್ರದ ಫೋಟೋಗಳನ್ನು ತಂದಿರಬೇಕು.

ಯಾವುದೇ ನಿಯಮ ಉಲ್ಲಂಘಟನೆ, ಅಕ್ರಮಗಳು ಕಂಡುಬಂದರೆ ಭವಿಷ್ಯದ ಪರೀಕ್ಷೆಗಳಿಗೆ ನಿಷೇಧವೂ ಸೇರಿದಂತೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ.

ಈ ಬಾರಿಯ ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ 4.59 ಅಭ್ಯರ್ಥಿಗಳು ಹಾಜರಾಗಿ 1099 ಮಂದಿ ಆಯ್ಕೆಯಾಗಿದ್ದರು.

ಕೇಂದ್ರ ಲೋಕಸೇವಾ ಆಯೋಗವು ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ಪ್ರಿಲಿಮಿನರಿ, ಮೈನ್ಸ್ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has said it will debar from future exams the candidates who bring gadgets like mobile phones or bluetooth devices inside the centre
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X