UPSC Civil Services Prelims Guidelines : ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯ ಮಾರ್ಗಸೂಚಿ ರಿಲೀಸ್

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2021ನೇ ಸಾಲಿನ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪ್ರಿಲಿಮಿನರಿ ಪರೀಕ್ಷೆಯನ್ನು ಅಕ್ಟೋಬರ್ 10ರಂದು ನಿಗದಿಪಡಿಸಲಾಗಿದೆ. ಈ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಆಯೋಗವು ಪರೀಕ್ಷಾ ಮಾರ್ಗಸೂಚಿಗಳನ್ನು ಮತ್ತು ಇತರೆ ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

ಯುಪಿಎಸ್ಸಿ ನಾಗರಿಕ ಸೇವೆ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ

ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಈ ಹಿಂದೆ ಜೂನ್ 27 ರಂದು ನಡೆಸಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್ -19 ರ ಎರಡನೇ ಅಲೆಯಿಂದಾಗಿ ಪರೀಕ್ಷೆಯನ್ನು ಮುಂದೂಡಲಾಯಿತು.

ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಹಾಗೂ ಇತರ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವೆ ಪರೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ ಅವುಗಳೆಂದರೆ ಪ್ರಾಥಮಿಕ/ಪ್ರಿಲಿಮಿನರಿ, ಮುಖ್ಯ/ಪ್ರಮುಖ ಪರೀಕ್ಷೆ ಮತ್ತು ಸಂದರ್ಶನ ಸುತ್ತುಗಳು.

ಭಾನುವಾರ ನಡೆಯುವ ನಾಗರಿಕ ಸೇವೆಗಳ ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಪರೀಕ್ಷಾ ಸಭಾಂಗಣ ಮತ್ತು ಆವರಣಗಳಲ್ಲಿ ಮಾಸ್ಕ್ ಅಥವಾ ಫೇಸ್ ಕವರ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೇ ಮುಖವಾಡ/ಮುಖ ಕವಚವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ" ಎಂದು ಯುಪಿಎಸ್‌ಸಿ ಹೇಳಿದೆ.

ಆಯೋಗವು ಹೊರಡಿಸಿರುವ ಪರೀಕ್ಷಾ ಮಾರ್ಗಸೂಚಿಗಳು ಇಲ್ಲಿವೆ:

* ಮಾಸ್ಕ್ ಅಥವಾ ಫೇಸ್ ಕವರ್ ಧರಿಸುವುದು ಕಡ್ಡಾಯವಾಗಿರುತ್ತದೆ. ಮಾಸ್ಕ್/ಫೇಸ್ ಕವರ್ ಇಲ್ಲದ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ.

* ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆ ಸಮಯದಲ್ಲಿ ಮತ್ತು ಅಗತ್ಯವಿರುವ ಸಮಯದಲ್ಲಿ ತಮ್ಮ ಮುಖವಾಡಗಳನ್ನು ತೆಗೆಯಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

* ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಪಾರದರ್ಶಕ ಬಾಟಲಿಯಲ್ಲಿ ತನ್ನದೇ ಆದ ಸ್ಯಾನಿಟೈಜರ್ (ಸಣ್ಣ ಗಾತ್ರ) ಅನ್ನು ಒಯ್ಯಬಹುದು.

* ಅಭ್ಯರ್ಥಿಗಳು ಪರೀಕ್ಷಾ ಹಾಲ್/ಕೊಠಡಿಗಳ ಒಳಗೆ ಹಾಗೂ ಆವರಣದಲ್ಲಿ ಕೋವಿಡ್ -19 ನಿಯಮಗಳಾದ 'ಸಾಮಾಜಿಕ ಅಂತರ' ಹಾಗೂ 'ವೈಯಕ್ತಿಕ ನೈರ್ಮಲ್ಯ' ವನ್ನು ಕಾಪಾಡಿಕೊಳ್ಳಬೇಕು.

* ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಆಕಾಂಕ್ಷಿಗಳು ಕೊನೆಯ ಕ್ಷಣದಲ್ಲಿ ಭಯಪಡುವ ಬದಲು ತಮ್ಮ ಸಿದ್ಧತೆಯನ್ನು ಹೇಗೆ ಮಾಡಬೇಕು ಎಂದು ತರಬೇತಿ ನೀಡುವ ಅಧ್ಯಾಪಕರು ಸಲಹೆ ನೀಡಿ.

ಯುಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆಯನ್ನು ಭಾನುವಾರ ನಿಗದಿಪಡಿಸಲಾಗಿದ್ದು, "ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಶಾಂತ ಮತ್ತು ಸಂಯೋಜಿತ ಮನಸ್ಸನ್ನು ಹೊಂದಿರಬೇಕು ಏಕೆಂದರೆ ಪರೀಕ್ಷಾ ಪರಿಸ್ಥಿತಿಗಳು ಮಿದುಳನ್ನು ಇನ್ನಷ್ಟು ವೇಗವಾಗಿ ಚಲಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಅಭ್ಯರ್ಥಿಗಳು ಕೊನೆಯ ಕ್ಷಣಗಳಲ್ಲಿ ಭಯಪಡುವ ಬದಲು ತಮ್ಮ ಸಿದ್ಧತೆಯ ಕಡೆಗೆ ಹೆಚ್ಚು ನಂಬಿಕೆ ಹೊಂದಿರಬೇಕು"ಎಂದು ವಿಷನ್ ಐಎಎಸ್ ಕೋಚಿಂಗ್ ಸೆಂಟರ್‌ನ ಅಧ್ಯಾಪಕರು (ಸಮಾಜಶಾಸ್ತ್ರ ಮತ್ತು ಭಾರತೀಯ ಸಮಾಜ) ಸ್ಮೃತಿ ಶಾ ಹೇಳಿದ್ದಾರೆ.

ಯುಪಿಎಸ್‌ಸಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಪರೀಕ್ಷಾರ್ಥಿಗಳು ಯಾವುದೇ ಮೊಬೈಲ್ ಫೋನ್ (ಸ್ವಿಚ್-ಆಫ್ ಮೋಡ್‌ನಲ್ಲಿಯೂ), ಪೇಜರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ಪ್ರೊಗ್ರಾಮೆಬಲ್ ಸಾಧನ, ಸ್ಮಾರ್ಟ್ ವಾಚ್‌ಗಳು ಮತ್ತು ಪೆನ್ ಡ್ರೈವ್‌ನಂತಹ ಸ್ಟೋರೇಜ್ ಮೀಡಿಯಾಗಳನ್ನು ಹೊಂದಿರಬಾರದು ಮತ್ತು ಬಳಸಬಾರದು. ಅಭ್ಯರ್ಥಿಗಳು ಸಾಮಾನ್ಯ ಅಥವಾ ಸರಳವಾದ ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಗಳು/ ಸಭಾಂಗಣಗಳ ಒಳಗೆ ಬಳಸಲು ಅನುಮತಿ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.

ಯುಪಿಎಸ್ಸಿ ನೀಡಿರುವ ಸೂಚನೆಗಳಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾದಲ್ಲಿ ಭವಿಷ್ಯದಲ್ಲಿ ಅಭ್ಯರ್ಥಿಗೆ ಪರೀಕ್ಷೆಗಳಿಂದ ನಿಷೇಧವನ್ನು ಮಾಡುವಂತೆ ಶಿಸ್ತಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಲೋಕಸೇವಾ ಆಯೋಗ ಎಚ್ಚರಿಕೆ ನೀಡಿದೆ.

For Quick Alerts
ALLOW NOTIFICATIONS  
For Daily Alerts

English summary
UPSC Civil Services Prelims 2021 on October 10 ; Check Guidelines And Other Details in Kannada. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X