ಯುಪಿಎಸ್ಸಿ: ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ

Posted By:

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ)ದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ.

ಜೂನ್‌ 18ರಂದು ಆಯೋಗವು ನಾಗರೀಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ ನಡೆಸಿತ್ತು. ಹೆಚ್ಚಾಗಿ ಕೇಂದ್ರ ಸರ್ಕಾರದ ಯೋಜನೆಗಳಾದ ಜಿಎಸ್ಟಿ, ವಿದ್ಯಾಂಜಲಿ, ಸ್ಮಾರ್ಟ್ ಇಂಡಿಯಾ ಹ್ಯಾಕತಾನ್ ಮತ್ತು ಬೇನಾಮಿ ವ್ಯವಹಾರದ ಕುರಿತಾದ ಪ್ರಶ್ನೆಗಳನ್ನು ಕೇಳಲಾಗಿತ್ತು.

ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ

ಫಲಿತಾಂಶ ನೋಡುವ ವಿಧಾನ

  • ಆಯೋಗದ ಅಧಿಕೃತ ವೆಬ್ಸೈಟ್ www.upsc.gov.in ವಿಳಾಸಕ್ಕೆ ಭೇಟಿ
  • ನೀಡಿಬಲಭಾಗದಲ್ಲಿ ಕಾಣುವ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಅರ್ಹತೆ ಪಡೆದವರ ಪಿಡಿಎಫ್ ಫೈಲ್ ತೆರೆಯುವುದು
  • ನಿಮ್ಮ ನೋಂದಣಿ ಸಂಖ್ಯೆ ಗುರುತಿಸಿ

ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ವಿವರವಾದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

www.upsc.gov.in ವೆಬ್‌ಸೈಟ್‌ನಲ್ಲಿ ಆಗಸ್ಟ್‌ 17ರಿಂದ 31ರವರೆಗೆ ಅರ್ಜಿಗಳು ಲಭ್ಯವಾಗಲಿದೆ. ಅಭ್ಯರ್ಥಿಗಳು ಮೊದಲು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ ಅರ್ಜಿ ಭರ್ತಿ ಮಾಡಬೇಕು.

'ಇ-ಪ್ರವೇಶ ಪತ್ರ' ಮತ್ತು ಪರೀಕ್ಷಾ ವೇಳಾಪಟ್ಟಿ ಆಯೋಗದ ವೆಬ್‌ಸೈಟ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯುವ ಎರಡು ವಾರಗಳ ಮುನ್ನ ಲಭ್ಯವಾಗಲಿದೆ.ಮುಖ್ಯ ಪರೀಕ್ಷೆ ಅಕ್ಟೋಬರ್‌ 28ರಿಂದ ಆರಂಭವಾಗಲಿವೆ.

English summary
The UPSC Preliminary exam 2017 results have been released by the Union Public Service Commission. Candidates who had written the exam can now check the result of the civil services preliminary examination online.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia