ಯುಪಿಎಸ್ಸಿ: ಸಿಡಿಎಸ್ (ಐಐ) ಒಟಿಎ ಫಲಿತಾಂಶ ಪ್ರಕಟ

Posted By:

ಯುಪಿಎಸ್ಸಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆ (ಸಿಡಿಎಸ್ಐಐ) 2016ರ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಇ (ಒಟಿಎ) ಕೋರ್ಸ್ ನ ಅಂತಿಮ ಫಲಿತಾಂಶವನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಅರ್ಹತೆ ಆಧರಿಸಿ ಒಟ್ಟು 328 (258+70) ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಮೆರಿಟ್ ಪಟ್ಟಿಗೆ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಲಾಗಿಲ್ಲ, ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ಆರ್ಮಿ ಮುಖ್ಯ ಕಚೇರಿಯಲ್ಲಿ ಮಾಡುವುದಾಗಿ ತಿಳಿಸಲಾಗಿದೆ.

ಯುಪಿಎಸ್ಸಿ ಫಲಿತಾಂಶ ಪ್ರಕಟ

ಫಲಿತಾಂಶ ನೋಡುವ ವಿಧಾನ

  • ಆಯೋಗದ ಅಧಿಕೃತ ವೆಬ್ಸೈಟ್ www.upsc.gov.in ವಿಳಾಸಕ್ಕೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಅರ್ಹತೆ ಪಡೆದವರ ಪಿಡಿಎಫ್ ಫೈಲ್ ತೆರೆಯುವುದು

www.upsc.gov.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಂಡ ದಿನದಿಂದ 15 ದಿನಗಳೊಳಗೆ ಅಂಕಪಟ್ಟಿಯನ್ನು ಪ್ರಕಟಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ ಫಲಿತಾಂಶವು ಪ್ರಕಟಗೊಂಡ ಮುವತ್ತು ದಿನಗಳ ವರೆಗೆ ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 011-23385271/23381125/23098543 ಗೆ ಕಛೇರಿ ವೇಳೆ (ಬೆಳಗ್ಗೆ.10 ರಿಂದ ಸಂಜೆ 5 ರವರೆಗೆ) ಸಂಪರ್ಕಿಸಲು ಕೋರಿದೆ

ಹೆಚ್ಚಿನ ಮಾಹಿತಿಗಾಗಿ www.upsc.gov.in ಗಮನಿಸಿ

English summary
UPSV combined defence service examination 2016results released. candidates can check their results in its official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia