UPSC CSE 2020 Result : 2015ರ ಟಾಪರ್ ಟೀನಾ ಡಾಬಿ ತಂಗಿ ರಿಯಾ ಡಾಬಿಗೆ 15ನೇ ರ್ಯಾಂಕ್

2020ನೇ ಸಾಲಿನ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಪರೀಕ್ಷಾ ಫಲಿತಾಂಶ ನಿನ್ನೆ ಸಂಜೆ ಪ್ರಕಟವಾಗಿದೆ. ಯುಪಿಎಸ್ಸಿ ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಈ ಪೈಕಿ 2016 ರ ಬ್ಯಾಚ್ ಟಾಪರ್ ಟೀನಾ ಡಾಬಿಯ (Tina Dabi) ಸಹೋದರಿ ರಿಯಾ ಡಾಬಿ 15 ನೇ ರ್ಯಾಂಕ್ ಪಡೆದು ಯಶಸ್ವಿಯಾಗಿದ್ದಾರೆ.

 
2016ರ ಟಾಪರ್ ಟೀನಾ ಡಾಬಿ ತಂಗಿ ರಿಯಾ  ಯುಪಿಎಸ್​ಸಿಯಲ್ಲಿ 15ನೇ ರ್ಯಾಂಕ್

2016 ರಲ್ಲಿ ಟೀನಾ ಡಾಬಿ ಅಖಿಲ ಭಾರತ ನಂಬರ್ ಒನ್ ಸ್ಥಾನ ಪಡೆದು ಖ್ಯಾತಿ ಪಡೆದಿದ್ದರು. ಇದೀಗ ಅವರ ಸಹೋದರಿಯ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಟೀನಾ ಡಾಬಿ ಸಾಮಾಜಿಕ ಜಾಲತಾಣದಲ್ಲಿ "ನನ್ನ ತಂಗಿ ರಿಯಾ ಡಾಬಿ ಯುಪಿಎಸ್‌ಸಿ 2020ರ ಪರೀಕ್ಷೆಯಲ್ಲಿ 15 ನೇ ರ್ಯಾಂಕ್ ಪಡೆದಿದ್ದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಟೀನಾ ಡಾಬಿ 2016ರಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಯುಪಿಎಸ್​ಸಿಯ ನಾಗರೀಕ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸುವ ಮೂಲಕ ಹೊಸ ದಾಖಲೆಯನ್ನು ಕೂಡ ಸೃಷ್ಟಿಸಿದ್ದರು. ಈಗ ಅವರ ತಂಗಿ ರಿಯಾ ಕೂಡ ಯುಪಿಎಸ್​ಸಿ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಇಬ್ಬರೂ ಸಹೋದರಿಯರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಟೀನಾ ದಾಬಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದಲಿತ ಸಮುದಾಯದ ಮೊದಲ ಅಭ್ಯರ್ಥಿಯಾಗಿದ್ದಾರೆ.

ಯುಪಿಎಸ್ಸಿ ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಈ ಪೈಕಿ 545 ಮಂದಿ ಪುರುಷರು ಹಾಗೂ 216 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಟಾಪ್ 25ರಲ್ಲಿ 13 ಜನ ಪುರುಷರು ಹಾಗೂ 12 ಜನ ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಬಾರಿ 25 ವಿಶೇಷ ಚೇತನ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಈ ಪೈಕಿ ಕರ್ನಾಟಕದ 18 ಮಂದಿ ತೇರ್ಗಡೆಯಾಗಿದ್ದಾರೆ.

ಜನವರಿ 8 ರಿಂದ ಜನವರಿ 17ರವರೆಗೆ ನಡೆದ ಮುಖ್ಯ ಲಿಖಿತ ಪರೀಕ್ಷೆ ಮತ್ತು ಆಗಸ್ಟ್ 2ರಿಂದ ಸೆಪ್ಟೆಂಬರ್ 22ರವರೆಗೆ ನಡೆದ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಲಿಖಿತ ಪರೀಕ್ಷೆಗೆ ಮೊದಲು, ಪ್ರಾಥಮಿಕ ಪರೀಕ್ಷೆ ಅಕ್ಟೋಬರ್ 2020ರಲ್ಲಿ ನಡೆದಿತ್ತು. ಅರ್ಹತೆ ಪಡೆದ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಮುಖ್ಯ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಒಟ್ಟು 2,046 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.

 

ಯುಪಿಎಸ್​ಸಿಯಲ್ಲಿ ಮೊದಲ 10 ರ್ಯಾಂಕ್ ಪಡೆದವರ ಪಟ್ಟಿ:

1- ಶುಭಂ ಕುಮಾರ್
2- ಜಾಗರತಿ ಅವಸ್ಥಿ
3- ಅಂಕಿತಾ ಜೈನ್
4- ಯಶ್ ಜಲುಕಾ
5- ಮಮತಾ ಯಾದವ್
6- ಮೀರಾ ಕೆ
7- ಪ್ರವೀಣ್ ಕುಮಾರ್
8- ಜೀವನ ಕಾರ್ತಿಕ್ ನಾಗಜಿಭಾಯಿ
9- ಅಪಾಲ ಮಿಶ್ರ
10- ಸತ್ಯಂ ಗಾಂಧಿ

ಯುಪಿಎಸ್ಸಿ ರ್ಯಾಂಕ್ ಪಡೆದ ಕರ್ನಾಟಕದ 18 ಅಭ್ಯರ್ಥಿಗಳು:

ಅಕ್ಷಯ್ ಸಿಂಹ ಕೆ.ಜೆ - 77
ನಿಶ್ಚಯರ್ ಪ್ರಸಾದ್ ಎಂ-130
ಸಿರಿವೆನ್ನೆಲ-204
ಅನಿರುದ್ದ್ ಆರ್ ಗಂಗಾವರಂ-252
ಸೂರಜ್ ಡಿ-255
ನೇತ್ರಾ ಮೇಟಿ-326
ಮೇಘಾ ಜೈನ್-354
ಪ್ರಜ್ವಲ್-367
ಸಾಗರ್ ಎ ವಾಡಿ-385
ನಾಗರಗೊಜೆ ಶುಭಂ-453
ಬಿಂದು ಮಣಿ ಆರ್.ಎನ್-468
ಶಕೀರ್ ಅಹ್ಮದ್ ತೊಂಡಿಖಾನ್-583
ಪ್ರಮೋದ್ ಆರಾಧ್ಯ ಎಚ್.ಆರ್-601
ಸೌರಬ್ ಕೆ-725
ವೈಶಾಖ್ ಬಗೀ-744
ಸಂತೋಶ ಎಚ್-751

ಯುಪಿಎಸ್ ಸಿ ಸಿವಿಲ್ ಸರ್ವೀಸ್ 2020: ಫಲಿತಾಂಶ ವೀಕ್ಷಿಸುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್ https://www.upsc.gov.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "ನಾಗರಿಕ ಸೇವೆ ಮುಖ್ಯ ಪರೀಕ್ಷೆ ಅಂತಿಮ ಫಲಿತಾಂಶ -2020" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಸ್ಕ್ರೀನ್ ಮೇಲೆ ಮೂಡುವುದು

For Quick Alerts
ALLOW NOTIFICATIONS  
For Daily Alerts

English summary
Union Public Service Commission (UPSC) released CSE final exam 2020 results. 2015 topper tina dabi's sister riya dabi ranked 15 in upsc 2020 CSE exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X