ಯುಪಿಎಸ್ಸಿ: ಪ್ರಶ್ನೆ ಪತ್ರಿಕೆಗಳಲ್ಲಿನ ತಪ್ಪುಗಳಿಗೆ ಅಹವಾಲು ಸಲ್ಲಿಸಲು ಅವಕಾಶ

Posted By:

ಕೇಂದ್ರೀಯ ಲೋಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳು ಅಥವಾ ವ್ಯತ್ಯಾಸಗಳೇನಾದರೂ ಕಂಡುಬಂದಲ್ಲಿ ಅಹವಾಲು ಸಲ್ಲಿಸಲು ಪರೀಕ್ಷಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಅಹವಾಲು ಸಲ್ಲಿಸಲು ಒಂದು ವಾರ ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್‌(ಈಮೇಲ್‌ನಲ್ಲಿ - upsc@gov.in)ನಲ್ಲಿ ಮಾತ್ರ ಸಲ್ಲಸತಕ್ಕದ್ದು. ಯಾವುದೇ ಕಾರಣಕ್ಕೂ ಅಂಚೆ ಮೂಲಕ ಅಥವಾ ಖುದ್ದು ಹಸ್ತಾಂತರಕ್ಕೆ ಅವಕಾಶವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಯುಪಿಎಸ್ಸಿ ಅಹವಾಲು ಸಲ್ಲಿಸಲು ಅವಕಾಶ

ಪ್ರತೀ ಪರೀಕ್ಷೆಗೆ 7 ದಿನಗಳ (ಒಂದು ವಾರ) ಕಾಲಾವಕಾಶ ಅಂದರೆ, ಪರೀಕ್ಷೆ ಮುಗಿದ ಮರುದಿನದಿಂದ 7ನೇ ದಿನ ಸಂಜೆ 6 ಗಂಟೆಯೊಳಗೆ ಆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಲ್ಲಿ ತಪ್ಪು ಅಥವಾ ವ್ಯತ್ಯಾಸವಿದ್ದರೆ ಅದನ್ನು ಆಯೋಗದ ಗಮನಕ್ಕೆ ತರತಕ್ಕದ್ದು ಎಂದು ಇತ್ತೀಚೆಗೆ ಯುಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಉದಾಹರಣೆಗೆ, ಮಾರ್ಚ್‌ 1ರಂದು ಯಾವುದಾದರೊಂದು ಪರೀಕ್ಷೆ ನಡೆದರೆ, ಆ ಪರೀಕ್ಷೆ ಬರೆಯುವ ಅಭ್ಯರ್ಥಿ ಮಾರ್ಚ್‌ 8ರ ಸಂಜೆ 6 ಗಂಟೆಯೊಳಗೆ ತಪ್ಪುಗಳ ಬಗ್ಗೆ ಅಹವಾಲು ಸಲ್ಲಿಸಬಹುದು ಎಂದು ಆಯೋಗ ತಿಳಿಸಿದೆ.

ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲು ನಡೆಸಲಾಗುವ ಸಿವಿಲ್‌ ಸರ್ವಿಸ್ ಪರೀಕ್ಷೆಯೂ ಈ ಸಾಲಿಗೆ ಸೇರುತ್ತದೆ.

ಆಯೋಗದಿಂದ ಆಯೋಜನೆಯಾಗುವ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗುತ್ತಾರೆ.
ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಬಗ್ಗೆ ಅಹವಾಲು ಸಲ್ಲಿಸಲು ಗಡುವು ವಿಧಿಸುತ್ತಿರುವುದು ಯುಪಿಎಸ್‌ಸಿ ಇತಿಹಾಸದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
The Union Public Service Commission (UPSC) has fixed a seven-day time frame for candidates to report mistakes or discrepancies in question papers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia