UPSC NDA Exam 2021 Guidelines : ಯುಪಿಎಸ್ಸಿ ಎನ್‌ಡಿಎ ಪರೀಕ್ಷೆಗೆ ಹಾಜರಾಗುವವರು ಮಾರ್ಗಸೂಚಿಯನ್ನು ತಪ್ಪದೇ ಓದಿ

ಕೇಂದ್ರ ಲೋಕಸೇವಾ ಆಯೋಗವು ಎನ್‌ಡಿಎ ಪರೀಕ್ಷಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಪರೀಕ್ಷಾ ಮಾರ್ಗಸೂಚಿಯನ್ನು ಓದಿಕೊಳ್ಳತಕ್ಕದ್ದು.

ಯುಪಿಎಸ್ಸಿ ಎನ್‌ಡಿಎ ಪರೀಕ್ಷೆ ಮಾರ್ಗಸೂಚಿ ರಿಲೀಸ್

ಯುಪಿಎಸ್ಸಿ ಎನ್‌ಡಿಎ ಪರೀಕ್ಷೆಯನ್ನು ನವೆಂಬರ್ 14, 2021 ರಂದು ನಡೆಸಲಾಗುತ್ತಿದೆ. ಈ ವರ್ಷ ಒಟ್ಟಾರೆ 5 ಲಕ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಯುಪಿಎಸ್ಸಿ ಎನ್‌ಡಿಎ ಪರೀಕ್ಷೆ 2021 ಅನ್ನು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್-19 ಪ್ರೋಟೋಕಾಲ್‌ಗಳೊಂದಿಗೆ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ.

ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಂದರೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಒಟ್ಟು 400 ಹುದ್ದೆಗಳನ್ನು ಭರ್ತಿ ಮಾಡಲು ಯುಪಿಎಸ್ಸಿ ಎನ್‌ಡಿಎ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

UPSC NDA 2021 : ಪರೀಕ್ಷೆಯ ಮಾರ್ಗಸೂಚಿಗಳು ಇಲ್ಲಿವೆ :

* ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದ ಪ್ರಿಂಟ್‌ಔಟ್ ಜೊತೆಗೆ ತಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಜರುಪಡಿಸಬೇಕು.
* ಪರೀಕ್ಷೆಗೆ ನಿಗದಿತ ಸಮಯಕ್ಕಿಂತ 10 ನಿಮಿಷಗಳ ಮುಂಚಿತವಾಗಿ ಹಾಜರಾಗಬೇಕು.
* ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ ನಮೂದಿಸಲಾದ ಸ್ಥಳದಲ್ಲಿ ಮಾತ್ರ ಪರೀಕ್ಷೆಗೆ ಹಾಜರಾಗಬೇಕು.
* ಹಾಜರಾತಿ ಪಟ್ಟಿ ಮತ್ತು OMR ಶೀಟ್ ಅನ್ನು ಭರ್ತಿ ಮಾಡಲು ಅಭ್ಯರ್ಥಿಗಳು 'ಕಪ್ಪು ಬಾಲ್ ಪಾಯಿಂಟ್ ಪೆನ್' ಅನ್ನು ಮಾತ್ರ ಬಳಸಬೇಕು.
* ಎಲ್ಲಾ ಅಭ್ಯರ್ಥಿಗಳು ಫೇಸ್ ಮಾಸ್ಕ್ ಧರಿಸಬೇಕು ಮತ್ತು ಪರೀಕ್ಷಾ ಕೇಂದ್ರದಲ್ಲಿ 'ಸಾಮಾಜಿಕ ದೂರ' ಮತ್ತು 'ವೈಯಕ್ತಿಕ ನೈರ್ಮಲ್ಯ'ದ COVID-19 ಮಾನದಂಡಗಳನ್ನು ಅನುಸರಿಸಬೇಕು.
* ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್, ಪೆನ್ ಡ್ರೈವ್, ಸ್ಮಾರ್ಟ್ ವಾಚ್ ಅಥವಾ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ.
* ಪರೀಕ್ಷೆಯ ಪ್ರವೇಶ ಪತ್ರವನ್ನು ಅಕ್ಟೋಬರ್ 22, 2201 ರಂದು ನೀಡಲಾಯಿತು. ಅಭ್ಯರ್ಥಿಗಳು ಪ್ರವೇಶ ಕಾರ್ಡ್‌ನಲ್ಲಿ ನಮೂದಿಸಲಾದ ಸೂಚನೆಗಳನ್ನು ಪರಿಶೀಲಿಸಲು ಮತ್ತು ಅದರಂತೆ ಅನುಸರಿಸಲು ಸಲಹೆ ನೀಡಲಾಗುತ್ತದೆ.

UPSC NDA 2021 ಕುರಿತು ಹೆಚ್ಚಿನ ನವೀಕರಣಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್ https://www.upsc.gov.in/ ಗೆ ಭೇಟಿ ನೀಡಿ.

For Quick Alerts
ALLOW NOTIFICATIONS  
For Daily Alerts

English summary
Union public service commission released exam guidelines for NDA 2021 Exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X