ಮುಖ್ಯ ಪರೀಕ್ಷೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ: ಯು ಪಿ ಎಸ್ ಸಿ ಇಂದ ಇ-ಕರೆ ಪತ್ರ

Posted By:

2016 ರ ಯು ಪಿ ಎಸ್ ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ವ್ಯಕ್ತಿತ್ವ ಪರೀಕ್ಷೆ (ಪರ್ಸನಾಲಿಟಿ ಟೆಸ್ಟ್) ಗೆ ಇ-ಸಮ್ಮೋನ್ ಲೆಟರ್ ಬಿಡುಗಡೆ ಮಾಡಲಾಗಿದೆ.
ಯು ಪಿ ಎಸ್ ಸಿ ಅಧಿಕೃತ ವೆಬ್ಸೈಟ್ ನಲ್ಲಿ ಸಂದರ್ಶನದ ಪತ್ರ ಲಭ್ಯವಾಗುತ್ತಿದ್ದು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ವ್ಯಕ್ತಿತ್ವ ಪರೀಕ್ಷೆಗೆ ಇ-ಸಮ್ಮೋನ್ ಲೆಟರ್

2016 ರ ಡಿಸೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಆ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಮಾರ್ಚ್ 20 ರಂದು ಸಂದರ್ಶನದ ಮೂಲಕ ವ್ಯಕ್ತಿತ್ವ ಪರೀಕ್ಷೆ ನಡೆಸಲಾಗುತ್ತದೆ.

ಇ-ಸಮ್ಮೊನ್ ಲೆಟರ್ ಡೌನ್ಲೋಡ್ ಮಾಡಿ ಕೊಳ್ಳುವ ವಿಧಾನ

  • ಯು ಪಿ ಎಸ್ ಸಿ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ http://www.upsc.gov.in/
  • ವೆಬ್ ಪೇಜ್ ನಲ್ಲಿ ಸಿವಿಲ್ ಸರ್ವಿಸ್ 2016 ಇ-ಸಮ್ಮೊನ್ ಲೆಟರ್ ಮೇಲೆ ಕ್ಲಿಕ್ ಮಾಡಿ
  • ಹೊಸ ವಿಂಡೋ ಓಪನ್ ಆಗುವುದು
  • ನಿಮ್ಮ ರೋಲ್ ನಂಬರ್ ಮತ್ತು ಪಾಸ್ವರ್ಡ್ ನಮೂದಿಸಿ
  • ವೆರಿಫಿಕೇಷನ್ ಕೋಡ್ ಸರಿಯಾಗಿ ಟೈಪ್ ಮಾಡಿ
  • submit ಬಟನ್ ಕ್ಲಿಕ್ ಮಾಡಿ
  • ಸಂದರ್ಶನ ಪತ್ರ ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಯು ಪಿ ಎಸ್ ಸಿ ಆಯ್ಕೆ ವಿಧಾನ

ಅಭ್ಯರ್ಥಿಗಳ ಆಯ್ಕೆ ಒಟ್ಟು ಮೂರು ಹಂತಗಳಲ್ಲಿ ನಡೆಯುತ್ತದೆ. ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಿ ನಂತರ ಮೂರನೇ ಹಂತದಲ್ಲಿ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ (ಪ್ರಿಲಿಮ್ಸ್ ಮತ್ತು ಮೈನ್ಸ್) ಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ.
ಪ್ರತಿ ವರ್ಷ ಹನ್ನೆರಡರಿಂದ ಹದಿನೈದು ಸಾವಿರ ಮಂದಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಬರೆಯಲು ಅರ್ಹರಾಗಿರುತ್ತಾರೆ. ಮುಖ್ಯ ಪರೀಕ್ಷೆ ಪಾಸ್ ಆದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಯು ಪಿ ಎಸ್ ಸಿ ಪರೀಕ್ಷೆ

ಲೋಕ ಸೇವಾ ಆಯೋಗವು ನಾಗರೀಕ ಸೇವಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಈ ಮೂಲಕ ದೇಶದ ವಿವಿಧ ನಾಗರೀಕ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಯು ಪಿ ಎಸ್ ಸಿ ಪರೀಕ್ಷೆಗಳು ಅತ್ಯಂತ ಕಠಿಣ ಪರೀಕ್ಷೆಗಳಾಗಿದ್ದು ಇದರಲ್ಲಿ ತೇರ್ಗಡೆ ಹೊಂದುವವರ ಸಂಖ್ಯೆ ಬಹಳ ಕಡಿಮೆ. ಶೇ 0.1 ಮಂದಿ ಮಾತ್ರ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಸೇವೆ ಸಲ್ಲಿಸಬಹುದು.

English summary
The e-summon letter for the personality test for candidates who have successfully passed the main examination 2016

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia