ವಿ ಟಿ ಯು ಐದು ಮತ್ತ ಆರನೇ ಸೆಮಿಸ್ಟರ್ ಫಲಿತಾಂಶ ಪ್ರಕಟ

ಕೆಲದಿನಗಳ ಹಿಂದಷ್ಟೆ ಏಪ್ರಿಲ್ 15 ರ ಒಳಗೆಫಲಿತಾಂಶ ಪ್ರಕಟಗೊಳಿಸುವ ಮಾಹಿತಿ ನೀಡಿದ್ದ ವಿಟಿಯು ದಿನಾಂಕ 12-04-2017 ರಂದು ಫಲಿತಾಂಶ ಬಿಡುಗಡೆಗೊಳಿಸಿದೆ.

ವಿಟಿಯು ಫಲಿತಾಂಶ ಇಂದು ಬರುತ್ತೆ ನಾಳೆ ಬರುತ್ತೆ ಎಂದು ಕಾದು ಕೂತಿದ್ದ ವಿದ್ಯಾರ್ಥಿಗಳಿಗೆ ಕೊಂಚ ಸಮಾಧಾನವಾಗಿದೆ. ವಿಟಿಯು ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಕೆಲದಿನಗಳ ಹಿಂದಷ್ಟೆ ಏಪ್ರಿಲ್ 15 ರ ಒಳಗೆಫಲಿತಾಂಶ ಪ್ರಕಟಗೊಳಿಸುವ ಮಾಹಿತಿ ನೀಡಿದ್ದ ವಿಟಿಯು ದಿನಾಂಕ 12-04-2017 ರಂದು ಫಲಿತಾಂಶ ಬಿಡುಗಡೆಗೊಳಿಸಿದೆ. ಐದು ಮತ್ತು ಆರನೇ ಸೆಮಿಸ್ಟರ್ ಗಳ ಫಲಿತಾಂಶವು ನಿನ್ನೆ ರಾತ್ರಿ ಪ್ರಕಟವಾಗಿದ್ದು ವಿದ್ಯಾರ್ಥಿಗಳು ವಿಟಿಯು ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಬಿಇ ಪದವಿಯ ಒಂದು, ಎರಡು, ಮೂರು, ನಾಲ್ಕು, ಐದು ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳ ಕ್ರ್ಯಾಷ್ ಕೋರ್ಸ್ ಫಲಿತಾಂಶದ ಜೊತೆಗೆ ಎಂ.ಟೆಕ್ ಪ್ರಾಜೆಕ್ಟ್ ರಿಸಲ್ಟ್ ಕೂಡ ಪ್ರಕಟಿಸಲಾಗಿದೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಕ್ರ್ಯಾಷ್ ಕೋರ್ಸ್ ಗಳ ಫಲಿತಾಂಶವನ್ನು ಮೊದಲಿಗೆ ಪ್ರಕಟಿಸಲಾಗಿದೆ.

ವಿ ಟಿ ಯು ಫಲಿತಾಂಶ ಪ್ರಕಟ

ಫಲಿತಾಂಶ ನೋಡುವ ವಿಧಾನ

  • ವಿಟಿಯು ಅಧಿಕೃತ ವಿಳಾಸಕ್ಕೆ ಭೇಟಿ ನೀಡಿ
  • ಎಕ್ಸಾಮಿನೇಷನ್ ವಿಭಾಗದಲ್ಲಿ ರಿಸಲ್ಟ್ ಬಟಬ್ ಕ್ಲಿಕ್ ಮಾಡಿ
  • ರಿಸಲ್ಟ್ ಪುಟ ತೆರೆದುಕೊಳ್ಳುವುದು. ನೀಡಿರುವ ಸೂಚನೆ ಗಮನಿಸಿ
  • ಯುಎಸ್ಎನ್ ಮೂಲಕ ನಿಮ್ಮ ರಿಸಲ್ಟ್ ಪಡೆಯಿರಿ

ಪ್ರಕಟವಾಗಬೇಕಿರುವ ಫಲಿತಾಂಶ

ಏಪ್ರಿಲ್ 15 ರ ಒಳಗೆ ಎಲ್ಲಾ ಫಲಿತಾಂಶಗಳು ಪ್ರಕಟಿಸುವುದಾಗಿ ವಿಟಿಯು ಹೇಳಿಕೆ ನೀಡಿತ್ತು, ಕ್ರ್ಯಾಷ್ ಕೋರ್ಸ್ ಹೊರತು ಪಡಿಸಿ ರೆಗ್ಯುಲರ್ ಸೆಮಿಸ್ಟರ್ ನ ಎಲ್ಲಾ ಫಲಿತಾಂಶವು ಇನ್ನು ಪ್ರಕಟವಾಗಬೇಕಿದೆ. ಇದೇ ವಾರದಲ್ಲಿ ರೆಗ್ಯುಲರ್ ಸೆಮಿಸ್ಟರ್ ಫಲಿತಾಂಶಗಳು ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಮರುಮೌಲ್ಯಮಾಪನಕ್ಕೆ ಅವಕಾಶ

ಐದು ಮತ್ತು ಆರನೇ ಸೆಮಿಸ್ಟರ್ ಸೇರಿದಂತೆ ಒಂದರಿಂದ ನಾಲ್ಕನೆ ಸೆಮಿಸ್ಟರ್ ಫಲಿತಾಂಶದ ವಿಚಾರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 17-04-2017 ರಿಂದ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ vtu.ac.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
VTU declared crash course results of 2016-2017 exams for 5th and 6th semester students late night yesterday around 10 pm.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X