ಏಪ್ರಿಲ್ 15ರ ಒಳಗೆ ವಿಟಿಯು ಫಲಿತಾಂಶ

Posted By:

ಡಿಸೆಂಬರ್ 2016ರಲ್ಲಿ ನಡೆದ ಎಂಜಿನಿಯರಿಂಗ್‌ ಕೋರ್ಸ್‌ನ ವಿವಿಧ ಸೆಮಿಸ್ಟರ್‌ಗಳ ಪರೀಕ್ಷೆಯ ಫಲಿತಾಂಶ ಇದೇ ತಿಂಗಳ 15ನೇ ತಾರೀಖಿನ ಒಳಗೆ ಪ್ರಕಟಗೊಳ್ಳಲಿದೆ.

ಪರೀಕ್ಷೆ ಮುಗಿದು ನಾಲ್ಕು ತಿಂಗಳಾದರು ಫಲಿತಾಂಶ ಬರದೇ ಇದ್ದ ಕಾರಣ ಹಲವು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದರು. ಫಲಿತಾಂಶದ ವಿಳಂಬವನ್ನು ಸಮರ್ಥಿಸಿಕೊಂಡಿರುವ ವಿಟಿಯು ಈ ತಿಂಗಳ ೧೫ನೇ ತಾರೀಖಿನ ಒಳಗೆ ಫಲಿತಾಂಶಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಪ್ರಕಟವಾಗಬೇಕಿರುವ ಫಲಿತಾಂಶ

  • ಪ್ರಥಮ ವರ್ಷದಿಂದ ಅಂತಿಮ ವರ್ಷದ ಫಲಿತಾಂಶಗಳು ಸೇರಿದಂತೆ ಕ್ರ್ಯಾಷ್ ಕೋರ್ಸ್ ನ ಫಲಿತಾಂಶಗಳು ಬಾಕಿ ಇವೆ.
  • ರೆಗ್ಯುಲರ್‌ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ 1ರಿಂದ 7ನೇ ಸೆಮಿಸ್ಟರ್‌ಫಲಿತಾಂಶ ಬಾಕಿ ಇದ್ದು, ಕಳೆದ ಶೈಕ್ಷಣಿಕ ವರ್ಷ 8ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿ ಮತ್ತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶವೂ ಪ್ರಕಟವಾಗಬೇಕಿದೆ.
  • 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ವಿಶೇಷ ತರಬೇತಿಗಾಗಿ 'ಕ್ರ್ಯಾಷ್‌ ಕೋರ್ಸ್‌' ನಡೆಸಲಾಗಿತ್ತು. ಆ ಎರಡು ಸೆಮಿಸ್ಟರ್‌ಗಳ ಫಲಿತಾಂಶ ಕೂಡ ಪ್ರಕಟವಾಗಬೇಕಿದೆ.

ವಿಟಿಯು ಫಲಿತಾಂಶ

ಕ್ರ್ಯಾಷ್ ಕೋರ್ಸ್ ಫಲಿತಾಂಶ ಮೊದಲು

ರೆಗ್ಯುಲರ್ ಫಲಿತಾಂಶಗಳಿಗೂ ಮೊದಲು ಕ್ರ್ಯಾಷ್ ಕೋರ್ಸ್ ಗಳ ಫಲಿತಾಂಶವನ್ನು ಪ್ರಕಟಿಸುವುದಾಗಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಇನ್ನೆರೆಡು ದಿನಗಳಲ್ಲಿ ಕ್ರ್ಯಾಷ್ ಕೋರ್ಸ್ ಗಳ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಸಿದ್ದಾರೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ವಿಶ್ವವಿದ್ಯಾಲಯದಿಂದಲೇ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು. ಮುಂದಿನ ಬಾರಿ ಈ ರೀತಿ ವಿಳಂಬ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ ವಿಳಂಬ ವಿದ್ಯಾರ್ಥಿಗಳಿಗೆ ಸಮಸ್ಯೆ

ಇದುವರೆಗೂ ಫಲಿತಾಂಶ ಪ್ರಕಟ ಆಗದಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಉದ್ಯೋಗಕ್ಕೆ ಸೇರಿಕೊಳ್ಳಲು ಅಥವಾ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪ್ರಮಾಣ ಪತ್ರ ಅತ್ಯಗತ್ಯ ಹಾಗಾಗಿ ಫಲಿತಾಂಶ ವಿಳಂಬವಾದಷ್ಟು ಮುಂದಿನ ನಡೆಗೆ ತೊಂದರೆಯಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಳಲು.

ಅನುತ್ತೀರ್ಣ ವಿದ್ಯಾರ್ಥಿಗಳಿಗೂ ಸಮಸ್ಯೆ
ಕಳೆದ ವರ್ಷ 8ನೇ ಸಮಿಸ್ಟರ್‌ನಲ್ಲಿ ಒಂದು ಅಥವಾ ಎರಡು ವಿಷಯದಲ್ಲಿ ಅನುತ್ತೀರ್ಣವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಯಾವುದೇ ವಿದ್ಯಾರ್ಥಿ ಹಿಂದೆ ಪರೀಕ್ಷೆ ಬರೆದ ಸೆಮಿಸ್ಟರ್‌ನಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದರೆ ಮತ್ತೊಮ್ಮೆ ಪರೀಕ್ಷೆ ಬರೆಯಬೇಕು. ವಾರ್ಷಿಕ ಪರೀಕ್ಷೆ ಜೂನ್‌, ಜುಲೈನಲ್ಲಿ ಬರಲಿವೆ. ಹೀಗಾಗಿ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ.

English summary
Results of VTU regular Semesters and Crash/Extricating semester will be announced within a few days

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia