ವಿಟಿಯು ಕಿರಿಕಿರಿ: ಅಂದು ಫಲಿತಾಂಶ ವಿಳಂಬ, ಇಂದು ಶುಲ್ಕ ಹೆಚ್ಚಳ!

ಒಂದೇ ಬಾರಿಗೆ ಪರೀಕ್ಷಾ ಶುಲ್ಕವನ್ನು ಶೇ 150ರಷ್ಟು ಹೆಚ್ಚಳ ಮಾಡಿರುವುದು ಮತ್ತು ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸದೆ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳುತ್ತಿರುವುದಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ವಿದ್ಯಾರ್ಥಿಗಳು ಆಕ್ರೋಷಗೊಂಡಿದ್ದಾರೆ. ಮೊನ್ನೆಯವರೆಗೂ ಫಲಿತಾಂಶದ ವಿಳಂಬ ಮಾಡುವ ಮೂಲಕ ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿದ್ದ ವಿಟಿಯು ಇಂದು ಪರೀಕ್ಷಾ ಶುಲ್ಕ ಹೆಚ್ಚಿಸಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಂದೇ ಬಾರಿಗೆ ಪರೀಕ್ಷಾ ಶುಲ್ಕವನ್ನು ಶೇ 150ರಷ್ಟು ಹೆಚ್ಚಳ ಮಾಡಿರುವುದು ಮತ್ತು ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸದೆ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳುತ್ತಿರುವುದಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ರೂ.560 ರಿಂದ ರೂ.1295

ಪ್ರತಿ ಸೆಮಿಸ್ಟರ್‌ನ ಪರೀಕ್ಷಾ ಶುಲ್ಕ ₹ 560ರಿಂದ ₹1,295ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪರೀಕ್ಷಾ ಶುಲ್ಕವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಳ ಮಾಡುವುದಾಗಿ ವಿಟಿಯು ಕುಲಪತಿ ಹೇಳಿದ್ದರು. ಆದರೆ ಏಕಾಏಕಿ ಇಷ್ಟೊಂದು ದುಬಾರಿ ಮಾಡಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ವಿಟಿಯು ನಡೆಗೆ ವಿದ್ಯಾರ್ಥಿಗಳ ಆಕ್ರೋಷ

ಆರ್ಥಿಕ ಸಂಕಷ್ಟಕ್ಕೆ ವಿದ್ಯಾರ್ಥಿಗಳಿಗೆ ದಂಡ

ವಿಟಿಯು 1999ರಿಂದ ಪೂರ್ವಾನ್ವಯ ಆಗುವಂತೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಕೇಳಿ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ತಿರಸ್ಕರಿಸಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ವಿಟಿಯುನ ₹ 441 ಕೋಟಿ ಹಣ ವಾಪಸ್ ಬರುವುದು ಅನುಮಾನವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿಶ್ವವಿದ್ಯಾಲಯ ಅದನ್ನು ತುಂಬಿಕೊಳ್ಳಲು ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಫಲಿತಾಂಶ ಪ್ರಕಟಿಸದೆ ಶುಲ್ಕ ವಸೂಲಿ

ಎಂಜಿನಿಯರಿಂಗ್ ಕೋರ್ಸ್‌ಗಳಿಗೆ (ಬಿ.ಇ ಮತ್ತು ಬಿ.ಟೆಕ್) ಸಂಬಂಧಿಸಿದಂತೆ 1ರಿಂದ 8ನೇ ಸೆಮಿಸ್ಟರ್‌ವರೆಗಿನ ಕೋರ್ಸ್‌ಗಳ ಫಲಿತಾಂಶ ಪ್ರಕಟಿಸಿ ಒಂದು ವಾರ ಕಳೆದಿದೆ. ಅನೇಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರ ಫಲಿತಾಂಶ ಪ್ರಕಟಿಸುವ ಮುನ್ನವೇ ಮುಂದಿನ ಸೆಮಿಸ್ಟರ್‌ಗಳ ಶುಲ್ಕ ಪಾವತಿಸಿಕೊಳ್ಳಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ ಶುಲ್ಕ ಪಾವತಿಗೆ ಜೂನ್ 2 ಕೊನೆಯ ದಿನ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರು ಫಲಿತಾಂಶಕ್ಕಾಗಿ ಕಾಯದೆ ಶುಲ್ಕ ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಮೊದಲು ಪೇಲಾದ ವಿದ್ಯಾರ್ಥಿಗಳು ಮರುಮೌಲ್ಯಮಾಪನದಲ್ಲಿ ಪಾಸಾಗುವ ಅನೇಕ ಉದಾಹರಣೆ ಇವೆ. ಹೀಗಾಗಿ ಫಲಿತಾಂಶ ಪ್ರಕಟಿಸಿದ ನಂತರ ಮುಂದಿನ ಸೆಮಿಸ್ಟರ್ ಪರೀಕ್ಷೆಗೆ ಶುಲ್ಕ ಪಾವತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ವಿಟಿಯು ಸಮರ್ಥನೆ

ಶುಲ್ಕ ಹೆಚ್ಚಳ ಮತ್ತು ಶುಲ್ಕ ಮರುಪಾವತಿ ಬಗ್ಗೆ ವಿಟಿಯು ಕುಲಸಚಿವ (ಮೌಲ್ಯಮಾಪನ) ಡಾ.ಸತೀಶ್ ಅಣ್ಣಿಗೇರಿ ಸಮರ್ಥಿಸಿಕೊಂಡಿದ್ದಾರೆ. ಮರುಮೌಲ್ಯಮಾಪನದಲ್ಲಿ ಪಾಸಾಗುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ವಿಟಿಯು ಕುಲಸಚಿವ ಡಾ. ಸತೀಶ್ ಅಣ್ಣಿಗೇರಿ ತಿಳಿಸಿದ್ದಾರೆ.

ಪರೀಕ್ಷಾ ಶುಲ್ಕ ಹೆಚ್ಚಿಸಬೇಕು ಎಂಬುದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ಧಾರ. ಕಳೆದ ಹತ್ತು ವರ್ಷಗಳಿಂದ ಶುಲ್ಕ ಹೆಚ್ಚಿಸಿಲ್ಲ. ಇತರೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೂ ವಿಟಿಯು ಪರೀಕ್ಷಾ ಶುಲ್ಕ ಕಡಿಮೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
The cash-strapped Visvesvaraya Technological University (VTU) increased the examination fees for all disciplines from this semester.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X