ವಿಶ್ವ ವಿಶ್ವವಿದ್ಯಾಲಗಳ ರ್ಯಾಕಿಂಗ್ 2020 : 6 ಭಾರತೀಯ ವಿಶ್ವವಿದ್ಯಾಲಯಗಳು ಟಾಪ್ 500ರ ಪಟ್ಟಿಯಲ್ಲಿವೆ

ಟೈಮ್ಸ್ ಹೈಯರ್ ಎಜುಕೇಶನ್ (ದಿ) ವಿಶ್ವ ವಿಶ್ವವಿದ್ಯಾಲಯ ರ್ಯಕಿಂಗ್ 2020ರ ಪಟ್ಟಿಯಲ್ಲಿ 6 ಭಾರತೀಯ ವಿಶ್ವವಿದ್ಯಾಲಯಗಳು ಟಾಪ್ 500ರ ಪಟ್ಟಿಯಲ್ಲಿವೆ. ಆದರೆ 2012 ರಿಂದ ಇದೇ ಮೊದಲ ಬಾರಿಗೆ ಅಗ್ರ 300ರ ಪಟ್ಟಿಯಲ್ಲಿ ಯಾವುದೇ ಭಾರತೀಯ ಸಂಸ್ಥೆಗಳು ಸ್ಥಾನ ಪಡೆದಿರುವುದಿಲ್ಲ.

2020ರ ವಿಶ್ವ ವಿಶ್ವವಿದ್ಯಾಲಗಳ ರ್ಯಾಕಿಂಗ್ ಪಟ್ಟಿ ರಿಲೀಸ್

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೋಪರ್ 301 ರಿಂದ 350 ರೊಳಗೆ ರ್ಯಾಕಿಂಗ್ ಪಡೆದ ಸಂಸ್ಥೆಗಳಾಗಿದ್ದು, ಐಐಟಿ ಮುಂಬೈ, ದೆಹಲಿ ಮತ್ತು ಖರಗ್‌ಪುರ ಸಂಸ್ಥೆಗಳು ಸೇರಿದಂತೆ 401 ರಿಂದ 500 ರೊಳಗೆ ಸ್ಥಾನ ಪಡೆದಿರುತ್ತವೆ.

ಭಾರತದ ಒಟ್ಟು 6 ವಿಶ್ವವಿದ್ಯಾಲಯಗಳು ಟಾಪ್ 500 ವಿಶ್ವವಿದ್ಯಾಲಯಗಳ ರ್ಯಾಕಿಂಗ್ ಪಟ್ಟಿಯಲ್ಲಿವೆ. 2019ರ ರ್ಯಾಕಿಂಗ್‌ ಪಟ್ಟಿಯಲ್ಲಿ ಟಾಪ್ 5 ವಿಶ್ವವಿದ್ಯಾಲಯಗಳಿದ್ದವು. ಸತತ ನಾಲ್ಕನೇ ವರ್ಷವೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಗ್ರಸ್ಥಾನದಲ್ಲಿದೆ.

ಒಟ್ಟು 92 ದೇಶಗಳಿಂದ 1,300 ವಿಶ್ವವಿದ್ಯಾಲಯಗಳು ರ್ಯಾಕಿಂಗ್ ಪಟ್ಟಿಯಲ್ಲಿದ್ದವು. ಅದರಲ್ಲಿ ಭಾರತ ದೇಶವು 56 ಸಂಸ್ಥೆಗಳನ್ನು ಪ್ರತಿನಿಧಿಸಿರುವ ದೇಶವಾಗಿದ್ದು, 5 ನೇ ಸ್ಥಾನವನ್ನು ಪಡೆದುಕೊಂಡಿದೆ.

ರ್ಯಾಕಿಂಗ್ ಪ್ರಕಾರ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ :

1. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್‌ಡಮ್
2. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುನೈಟೆಡ್ ಸ್ಟೇಟ್ಸ್
3. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್‌ಡಮ್
4. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್
5. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುನೈಟೆಡ್ ಸ್ಟೇಟ್ಸ್
6. ಪ್ರಿನ್ಸ್ಟನ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್
7. ಹಾರ್ವರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್
8. ಯೇಲ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್
9. ಚಿಕಾಗೊ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್
10. ಇಂಪೀರಿಯಲ್ ಕಾಲೇಜು ಲಂಡನ್, ಯುನೈಟೆಡ್ ಕಿಂಗ್‌ಡಮ್

For Quick Alerts
ALLOW NOTIFICATIONS  
For Daily Alerts

English summary
The times higher education released university ranking 2020. In that list 6 indian universities are in top 500.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X