Year Ender 2021 : ಈ ವರ್ಷ ಭಾರತದಲ್ಲಿ ಆನ್‌ಲೈನ್ ಮೂಲಕ ಹೆಚ್ಚು ಅಧ್ಯಯನ ಮಾಡಲಾದ ಕೋರ್ಸ್ ಯಾವುದು ಗೊತ್ತಾ ?

ಪ್ರತಿಯೊಬ್ಬರ ಬದುಕಿಗೂ ಶಿಕ್ಷಣ ಮತ್ತು ಉದ್ಯೋಗ ನಿರಂತರ ಕ್ರಿಯೆ. ಪ್ರಸಕ್ತ ವರ್ಷ ಕೊರೋನಾ ಕಾರಣದಿಂದಾಗಿ ಭಾರತದಲ್ಲಿ ಆನ್‌ಲೈನ್ ಕಲಿಕೆ ಮತ್ತು ಆನ್‌ಲೈನ್ ಮೂಲಕ ಉದ್ಯೋಗಕ್ಕೆ ಹೆಚ್ಚು ಮನ್ನಣೆಯನ್ನು ನೀಡಲಾಗಿತ್ತು. 2021ನೇ ಸಾಲಿನಲ್ಲಿ ಎದುರಾದ ಸಂಕಷ್ಟಕ್ಕೆ ಅನೇಕರು ಆನ್‌ಲೈನ್ ಕೋರ್ಸ್ ಗಳತ್ತ ಮುಖ ಮಾಡಿದ್ದಾರೆ. ಬಹುದೊಡ್ಡ ಆನ್‌ಲೈನ್ ಶಿಕ್ಷಣದ ವೇದಿಕೆಯಾಗಿರುವ ಕೋರ್ಸೆರಾ ದಲ್ಲಿ ವರ್ಷದ ಮೊದಲಾರ್ಧದಲ್ಲಿ 1.4 ಮಿಲಿಯನ್ ನಿಂದ 2.8 ಮಿಲಿಯನ್ ರಷ್ಟು ಅಂದರೆ ದುಪ್ಪಟ್ಟು ನೊಂದಣಿಯಾಗಿದ್ದಾರೆ. ಅಲ್ಲದೆ 2021ರಲ್ಲಿ ಮೆಷಿನ್ ಲರ್ನಿಂಗ್ ಕೋರ್ಸ್ ಹೆಚ್ಚು ಬೇಡಿಕೆಯಲ್ಲಿತ್ತು ಎಂದು ಕೊರ್ಸೆರಾ ತಿಳಿಸಿದೆ.

ವರ್ಷಾಂತ್ಯ  2021 : ಈ ವರ್ಷ ಹೆಚ್ಚು ಅಧ್ಯಯನ ಮಾಡಲಾದ ಆನ್‌ಲೈನ್ ಕೋರ್ಸ್ ಇದು !

ಅನೇಕ ಉದ್ಯಮಗಳು ಉತ್ತಮ ಕೌಶಲ್ಯ ಮತ್ತು ಪ್ರಚಲಿತ ವಿದ್ಯಮಾನಗಳ ಜ್ಞಾನ ಜೊತೆಗೆ ತಾಂತ್ರಿಕ ಜ್ಞಾನ ಮತ್ತು ಯಂತ್ರ ಕಲಿಕೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಈ ಮೆಷಿನ್ ಲರ್ನಿಂಗ್ ಕೌಶಲ್ಯವುಳ್ಳ ಪದವಿ ಮತ್ತು ಸ್ನಾತಕೋತ್ತರ ಪದವಿಯುಳ್ಳ ಅಭ್ಯರ್ಥಿಗಳ ಅವಶ್ಯಕತೆಯಿದ್ದು, ಸ್ಟಾಂಡ್‌ಫೋರ್ಡ್ ವಿಶ್ವವಿದ್ಯಾಲಯ ಈ ಕೋರ್ಸ್ ನೀಡುವಲ್ಲಿ ಪ್ರಮುಖ ವೇದಿಯಾಗಿ ಹೊರಹೊಮ್ಮಿದೆ ಎಂದು ಎಡ್‌ಟೆಕ್ ವೇದಿಕೆ ಹೇಳಿದೆ.

ಮೆಷಿನ್ ಲರ್ನಿಂಗ್ ಕೋರ್ಸ್ ಹೊರತುಪಡಿಸಿ ಗೂಗಲ್ ನಲ್ಲಿ ಅನೇಕರು ಡಾಟಾ ವಿಶುಲೈಸೇಶನ್, ಡಾಟಾ ಅನಾಲಿಸಿಸ್, ಡಾಟಾ ಕ್ಲಿನಿಂಗ್, ಎಸ್‌ಕ್ಯುಎಲ್ ಮತ್ತು ಡಾಟಾ ಪ್ರೊಸೆಸಿಂಗ್ ಕೌಶಲ್ಯಗಳನ್ನು ಒಳಗೊಂಡಿರುವ ಫಂಡೇಷನ್ಸ್/ಅಡಿಪಾಯಗಳು : ಡಾಟಾ, ಡಾಟಾ ಎವರಿವೇರ್ ಕೋರ್ಸ್ ಗಳನ್ನು ಹೆಚ್ಚು ಅಧ್ಯಯನ ಮಾಡಿದ್ದಾರೆ.

ವ್ಯಕ್ತಿಯ ಅರ್ಥಪೂರ್ಣ ಮತ್ತು ನೆಮ್ಮದಿಯ ಬದುಕಿಗೆ ಮಾನಸಿಕ ಆರೋಗ್ಯ ಅಥವಾ ಸೈನ್ಸ್ ಆಫ್ ವೆಲ್ ಬಿಯಿಂಗ್ ಮುಖ್ಯ. ಹಾಗಾಗಿ ತಾಂತ್ರಿಕ ಕೌಶಲ್ಯಗಳನ್ನು ಹೊರತುಪಡಿಸಿ ಅನೇಕರು ವೆಲ್ ಬಿಯಿಂಗ್ ಮತ್ತು ಸಂತೋಷದ ಬದುಕಿನ ಕಲಿಕೆಯುಳ್ಳ ಕೋರ್ಸ್ ಗಳಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

2021ರಲ್ಲಿ ಭಾರತದಲ್ಲಿ ಹೆಚ್ಚು ಅಧ್ಯಯನ ಮಾಡಲಾದ ಕೋರ್ಸ್ ಗಳ ಪಟ್ಟಿ :

ಸಂಖ್ಯೆ ಕೋರ್ಸ್ ಹೆಸರು ಕೋರ್ಸ್ ಲಭ್ಯವಿರುವ ವೇದಿಕೆ

1. ಮೆಷಿನ್ ಲರ್ನಿಂಗ್/ಯಂತ್ರ ಕಲಿಕೆ - ಸ್ಟಾಂಡ್‌ಫಾರ್ಡ್ ವಿಶ್ವಿವಿದ್ಯಾಲಯ
2. ಪ್ರೊಗ್ರಾಮಿಂಗ್ ಫಾರ್ ಎವರಿಬಡಿ - ಮಿಚಿಗನ್ ವಿಶ್ವವಿದ್ಯಾಲಯ
3. ಫಂಡೇಷನ್ಸ್/ಅಡಿಪಾಯಗಳು : ಡಾಟಾ, ಡಾಟಾ ಎವರಿವೇರ್ - ಗೂಗಲ್
4. ಕರಿಯರ್ ಡೆವಲಪ್ಮೆಂಟ್ ಗೆ ಇಂಗ್ಲೀಷ್ - ಪೆನ್ನಿಸಿಲ್ವಿಯಾ ವಿಶ್ವವಿದ್ಯಾಲಯ
5. ಹಣಕಾಸು ಮಾರುಕಟ್ಟೆಗಳು - ಯೇಲ್ ವಿಶ್ವವಿದ್ಯಾಲಯ
6. HTML, CSS ಮತ್ತು Javascript ವೆಬ್ ಡೆವಲಪರ್‌ಗಳು - ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ
7. ಕಲಿಯುವುದು ಹೇಗೆ ಎಂದು ಕಲಿಯುವುದು: ಕಠಿಣ ವಿಷಯಗಳನ್ನು ಕರಗತ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಶಕ್ತಿಯುತ ಮಾನಸಿಕ ಸಾಧನಗಳು - ಆಳವಾದ ಬೋಧನೆಯ ಪರಿಹಾರಗಳು/ಡೀಪ್ ಟೀಚಿಂಗ್ ಸಲೂಷನ್ಸ್
8. ಯೋಗಕ್ಷೇಮದ ವಿಜ್ಞಾನ/ಸೈನ್ಸ್ ಆಫ್ ವೆಲ್ ಬಿಯಿಂಗ್ - ಯೇಲ್ ವಿಶ್ವವಿದ್ಯಾಲಯ
9. ಮನೋವಿಜ್ಞಾನದ ಪರಿಚಯ - ಯೇಲ್ ವಿಶ್ವವಿದ್ಯಾಲಯ
10. ಫೌಂಡೇಶನ್ಸ್ ಆಫ್ ಯೂಸರ್ ಎಕ್ಸಿಪಿರಿಯನ್ಸ್ (UX)ಡಿಸೈನ್ -ಗೂಗಲ್

For Quick Alerts
ALLOW NOTIFICATIONS  
For Daily Alerts

English summary
Due to pandemic people opted for online learning. This year what india learned through online ? here you will get to know.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X