ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಡ್ಡಾಯ ಯೋಗ ಶಿಕ್ಷಣ

Posted By:

ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಭಾರತ ಈಗ ದೇಶದ ಎಲ್ಲಾ ತಾಂತ್ರಿಕ ಕಾಲೇಜುಗಳಿಗೆ ಪರಿಚಯಿಸುತ್ತಿದೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಪದವಿ ಪಡೆಯುವವರು ಇನ್ನು ಮುಂದೆ ಯೋಗವನ್ನು ಕೂಡ ಕಡ್ಡಾಯವಾಗಿ ಅಭ್ಯಾಸ ಮಾಡಬೇಕಿದೆ.

ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಆದೇಶ ಹೊರಡಿಸಿದೆ.

ಯೋಗ, ಕ್ರೀಡೆ ಅಥವಾ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು, ಒಂದು ವೇಳೆ ಯೋಗ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಡಿಗ್ರಿ ಸಿಗುವುದಿಲ್ಲ ಎಂದು ಎಐಸಿಟಿಇ ಆದೇಶದಲ್ಲಿ ತಿಳಿಸಿದೆ.

ಇಂಜಿನಿಯರಿಂಗ್ ಪದವಿಗೆ ಯೋಗ

ವಿದ್ಯಾರ್ಥಿ/ನಿಯರು ತಮ್ಮ ಶೈಕ್ಷಣಿಕ ವಿಷಯಗಳ ಜತೆಗೆ ಇವುಗಳಲ್ಲಿ ಭಾಗವಹಿಸುವದರಿಂದ ಅವರ ಕಲಿಕೆಗೆ ಮತ್ತಷ್ಟು ಮಹತ್ವ ಬರುತ್ತದೆ. ಉತ್ಸಾಹದ ಜೀವನ ಶೈಲಿಯನ್ನು ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ.

ಯೋಗಾಭ್ಯಾಸ ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿಗಳು ಪಾಸಾಗಬೇಕಾಗಿಲ್ಲ. ಇದಕ್ಕೆ ಯಾವುದೇ ಅಂಕ ಇರುವುದಿಲ್ಲ, ವಿದ್ಯಾರ್ಥಿಗಳು ಇಂಥ ಚಟುವಟಿಕೆಗಳಲ್ಲಿ ಕನಿಷ್ಠ ಶೇಕಡ 25ರಷ್ಟು ಹಾಜರಾತಿ ಹೊಂದಿರುವುದು ಕಡ್ಡಾಯ. ಇದು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕವಾಗಲಿದೆ ಎಂದು ಎಐಸಿಟಿಇ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾಹಿತಿ ಪ್ರಕಾರ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಯೋಗ ಹಾಗೂ ಕ್ರೀಡೆಯನ್ನು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಕೆಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎನ್ ಸಿ ಸಿ ಹಾಗೂ ಎನ್ ಎಸ್ ಎಸ್ ಇತ್ತು. ಆದ್ರೆ ಇದ್ರಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂಬುದು ಕಡ್ಡಾಯವಿರಲಿಲ್ಲ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯೋಗ ಹಾಗೂ ಕ್ರೀಡೆಯನ್ನು ಕಡ್ಡಾಯ ಮಾಡಿದೆ. ಯೋಗ ಹಾಗೂ ಕ್ರೀಡೆ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇಕಡಾ 25ರಷ್ಟಾದ್ರೂ ಇರಬೇಕು. ಎಐಸಿಟಿಇ ಅಡಿಯಲ್ಲಿ 10 ಸಾವಿರ ಶಿಕ್ಷಣ ಸಂಸ್ಥೆಗಳು ಬರುತ್ತವೆ. ಸುಮಾರು 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

English summary
Students in the engineering colleges and technical institutions will now have to practice yoga as a mandatory criteria to earn their college degree.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia