Young Achievers Scholarship Entrance Test 2022 : ಯುವ ಸಾಧಕರ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಯುವ ಸಾಧಕರ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2022 : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯುವ ಸಾಧಕರ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2022 ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರವೇಶ ಪರೀಕ್ಷೆಯ ಅರ್ಜಿ ಪ್ರಕ್ರಿಯೆಯು ಜುಲೈ 27 ರಿಂದ ಆಗಸ್ಟ್ 26ರ ವರೆಗೆ ನಡೆಯಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ yet.nta.ac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಯುವ ಸಾಧಕರ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2022ಗೆ ಅರ್ಜಿ ಆಹ್ವಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಇದಾಗಿದ್ದು, ಸೆಪ್ಟೆಂಬರ್ 11 ರಂದು ಪರೀಕ್ಷೆಯು ನಡೆಯಲಿದೆ ಮತ್ತು ಅದಕ್ಕಾಗಿ ಪ್ರವೇಶ ಪತ್ರಗಳನ್ನು ಸೆಪ್ಟೆಂಬರ್ 5 ರಂದು ಪ್ರಕಟ ಮಾಡಲಾಗುತ್ತದೆ.

ಪ್ರವೇಶ ಪರೀಕ್ಷೆಯು ಭಾರತದಾದ್ಯಂತ 78 ನಗರಗಳಲ್ಲಿ ಮೂರು ಗಂಟೆಗಳ ಕಾಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ನಡೆಯಲಿದೆ. ಪತ್ರಿಕೆಯು 100 ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ. "ಪರೀಕ್ಷೆಯ ಯೋಜನೆ/ ಪಠ್ಯಕ್ರಮ, ಅರ್ಹತೆ, ಗುರುತಿಸಲಾದ ಶಾಲೆಗಳ ಪಟ್ಟಿ, ಪರೀಕ್ಷಾ ನಗರಗಳು, ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಇತ್ಯಾದಿಗಳನ್ನು ಅಧಿಕೃತ ವೆಬ್‌ಸೈಟ್- yet.nta.ac.in ನಲ್ಲಿ ಹೋಸ್ಟ್ ಮಾಡಲಾದ ಮಾಹಿತಿ ಬುಲೆಟಿನ್‌ನಲ್ಲಿ ನೀಡಲಾಗಿರುತ್ತದೆ" ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಯುವ ಸಾಧಕರ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2022ಗೆ ಅರ್ಜಿ ಆಹ್ವಾನ

ವಿದ್ಯಾರ್ಥಿವೇತನ ಪಡೆಯಲು ಇಚ್ಚಿಸುವ ಅಭ್ಯರ್ಥಿಯ ಪೋಷಕರ ವಾರ್ಷಿಕ ಆದಾಯವು ರೂ 2.5 ಲಕ್ಷ ಮೀರಬಾರದು. ಈ ಯೋಜನೆಯಡಿಯಲ್ಲಿ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ರೂ (p.a) ಮತ್ತು 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ 1,25,000 ರೂ ವಿದ್ಯಾರ್ಥಿವೇತನವನ್ನು ನೀಡಲಾಗುವುದು.

ಅಭ್ಯರ್ಥಿಗಳು NTA ಸಹಾಯ ಕೇಂದ್ರಕ್ಕೆ 011 4075 9000 ಅಥವಾ 011 6922 7700 ಗೆ ಕರೆ ಮಾಡಬಹುದು ಅಥವಾ NTA ಗೆ ಯಾವುದೇ ಸ್ಪಷ್ಟೀಕರಣಕ್ಕಾಗಿ @nta.ac.in ವಿಳಾಸಕ್ಕೆ ಮೇಲ್ ಮಾಡಬಹುದು.

For Quick Alerts
ALLOW NOTIFICATIONS  
For Daily Alerts

English summary
NTA invited application for young achievers scholarship entrance test 2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X