ಹದಿಮೂರು ವರ್ಷಗಳ ನಂತರ ಪದವಿ ಪಡೆದ ಫೇಸ್ ಬುಕ್ ಜನಕ ಮಾರ್ಕ್ ಜುಕರ್ಬರ್ಗ್

Posted By:

ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲಾತಾಣ ಎಂದೆನಿಸಿರುವ ಫೇಸ್ ಬುಕ್ ನ ಸ್ಥಾಪಕ ಮಾರ್ಕ್ ಜುಕರ್ಬರ್ಗ್ 13 ವರ್ಷಗಳ ಬಳಿಕ ಪದವಿ ಪಡೆದೆದಿದ್ದಾರೆ.

ಜುಕರ್ಬರ್ಗ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುವಾಗ ಡ್ರಾಪ್ ಔಟ್ ಆಗಿದ್ದರು. ಫೇಸ್ ಬುಕ್ ನ ಕಡೆಗೆ ಹೆಚ್ಚು ಗಮನ ಕೇಂದ್ರಿಕರಿಸಬೇಕಾದ ಕಾರಣ 2004ರಲ್ಲಿ ಹಾರ್ವಡ್ ವಿವಿಯಲ್ಲಿ ತಮ್ಮ ಪದವಿಯ 2ನೇ ವರ್ಷ ಕಲಿಯುತ್ತಿರುವಾಗ ಕಾಲೇಜಿನಿಂದ ಹೊರ ನಡೆದಿದ್ದರು.

ಯಾವ ಕಾಲೇಜಿನಿಂದ ಹೊರಬಿದ್ದಿದ್ದರೋ ಅದೇ ಕಾಲೇಜು ಅವರಿಗೆ ಇಂದು ಪದವಿ ನೀಡಿ ಗೌರವಿಸಿದೆ. ಪದವಿ ಪಡೆದ ಜುಕರ್ಬರ್ಗ್ ತಾವು ಕಾಲೇಜು ದಿನಗಳಲ್ಲಿ ಇದ್ದ ಕೊಠಡಿಗೆ ಭೇಟಿ ನೀಡಿ ಸಂಭ್ರಮಿಸಿದ್ದಾರೆ.

ಗಮನ ಸೆಳೆದ ಜುಕರ್ಬರ್ಗ್ ಮಾತು

ಪದವಿ ಸ್ವೀಕರಿಸಿದ ಜುಕರ್ಬರ್ಗ್ ಸಭೆಯನ್ನುದ್ದೇಶಿಸಿ ತಮ್ಮ ಮನದ ಮಾತುಗಳನ್ನು ಹೇಳುತ್ತಿದ್ದಂತೆ ಸಭೆಯಿಂದ ಚಪ್ಪಾಳೆಗಳ ಸುರಿಮಳೆಯಾಯಿತು.

"ಅಮ್ಮ ನಾನು ನಿಮಗೆ ಹೇಳುತ್ತಿದ್ದೆ, ಒಂದು ದಿನ ನಾನು ನನ್ನ ಪದವಿಯನ್ನು ಪಡೆದುಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ಜುಕರ್ಬರ್ಗ್ ತಮ್ಮ ತಾಯಿಗೆ ನೀಡಿದ ಮಾತನ್ನು ಪೂರೈಸಿದ್ದಾರೆ

ಹದಿಮೂರು ವರ್ಷಗಳ ನಂತರ ಪದವಿ ಪಡೆದ ಮಾರ್ಕ್ ಜುಕರ್ಬರ್ಗ್

ಪರಿಪೂರ್ಣವಾಗಿ ಫೇಸ್ ಬುಕ್ ನಲ್ಲಿ ಗಮನ ಹರಿಸಿ ವಿಶ್ವದ ನಂ.1 ಸಾಮಾಜಿಕ ಮಾಧ್ಯಮವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿರುವ ಜುಕರ್ಬರ್ಗ್ ಪದವಿ ಸ್ವೀಕರಿಸುವ ವೇಳೆ ಇಂದಿನ ಯುವ ಸಮೂಹ ಸಮಾಜವನ್ನು ಹೊಸ ದಿಕ್ಕಿನತ್ತ ಸಾಗಿಸಬೇಕಿದೆ ಎಂದು ಹೇಳಿದ್ದಾರೆ.

ಸಮಾಜ ಸೇವೆ ಬಗ್ಗೆ ಹೆಚ್ಚು ಒತ್ತು ನೀಡಿ, ಅಸಮಾನತೆಯನ್ನು ಸಮಾಜದಿಂದ ಹೊರಹಾಕಿ , ನಮ್ಮಲ್ಲಿರುವ ಸಮಸ್ಯೆಗಳಿಗೆ ಕ್ರಿಯಾತ್ಮಕವಾಗಿ ಪರಿಹಾರಗಳನ್ನು ಹುಡುಕಿ ಎಂದು ಯುವಕರಿಗೆ ಕರೆ ನೀಡಿದ್ದಾರೆ.

ಕೇವಲ ನಿಮ್ಮ ಉದ್ದೇಶ ಅರಿತರೆ ಸಾಲುದು ಎಲ್ಲರ ಉದ್ದೇಶಗಳು ತಿಳಿಯುವಂತ ಸಮಾಜ ನಿರ್ಮಾಣ ನಾವು ಮಾಡಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.

ವಿಶ್ವದಾದ್ಯಂತ 200 ಕೋಟಿಗೂ ಅಧಿಕ ಬಳಕೆದಾರರು ಜುಕರ್ಬರ್ಗ್ ನ ಫೇಸ್'ಬುಕ್ ಬಳಸುತ್ತಿದ್ದಾರೆ. ವಿಶ್ವದ ಪ್ರಬಲ ಮಾಧ್ಯಮವಾಗಿ ಅದು ಬೆಳದಿದೆ.

ಹಾರ್ವರ್ಡ್'ನಲ್ಲಿ 2 ರೀತಿಯಲ್ಲಿ ಪದವಿ ಪಡೆಯಬಹುದು. ಮೊದಲನೆಯದಾಗಿ ಕಾಲೇಜಿಗೆ ಹೋಗಿ ಪಡೆದುಕೊಂಡರೆ ಎರಡನೆಯದಾಗಿ ವಿಶ್ವವೇ ಬೆರಗಾಗುವಂತ ಕೆಲಸ ಮಾಡಿದರೆ ವಿವಿಯೇ ನಿಮಗೆ ಪದವಿಯನ್ನು ನೀಡಿ ಗೌರವಿಸುತ್ತದೆ. ಎಂದು ಜುಕರ್ಬರ್ಗ್ ಈ ಹಿಂದೆ ಬಿಲ್'ಗೇಟ್ಸ್ ಅವರೊಂದಿಗೆ ನಡೆದ ವಿಡಿಯೋ ಸಂಭಾಷಣೆಯಲ್ಲಿ ಹೇಳಿಕೊಂಡಿದ್ದರು.

ಮತ್ತೊಂದು ಜಾಗತಿಕ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್'ನ ಸಂಸ್ಥಾಪಕರಾದ ಬಿಲ್ ಗೇಟ್ಸ್ ಕೂಡ ಹಾರ್ವರ್ಡ್'ನ ಡ್ರಾಪ್'ಔಟ್ ವಿದ್ಯಾರ್ಥಿ. ಅವರು ಕಾಲೇಜನ್ನು ಆರ್ಧಕ್ಕೆ ಕೈ ಬಿಟ್ಟು ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸಿ ಮೈಕ್ರೋಸಾಫ್ಟ್'ಅನ್ನು ವಿಶ್ವದ ನಂ.1 ಸಂಸ್ಥೆಯನ್ನಾಗಿಸಿದ್ದರು.

English summary
Thirteen years after dropping out of Harvard University to work on Facebook, Mark Zuckerberg on Thursday (May 25) finally got his degree.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia