ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕೇಳಬಹುದಾದ ಟ್ರಿಕ್ಕಿ ಪ್ರಶ್ನೆಗಳು ಇವು

By Kavya

ಐಎಎಸ್, ಐಪಿಎಸ್, ಯುಪಿಎಸ್ ಸಿ ಸೇರಿದಂತೆ ದೇಶದ ಅತೀ ಕಷ್ಟಕರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ.. ಹಾಗಿದ್ರೆ ನೀವು ಟ್ರಿಕ್ಕಿ ಪ್ರಶ್ನೆ ಹಾಗೂ ಫನ್ನಿಯೆಸ್ಟ್ ಉತ್ತರಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅಗತ್ಯ.

ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕೇಳಬಹುದಾದ ಟ್ರಿಕ್ಕಿ ಪ್ರಶ್ನೆಗಳು ಇವು

 

ಹೌದು ಈ ಮೇಲೆ ಹೇಳಿರುವ ಹುದ್ದೆಯ ಲಿಖಿತ ಪರೀಕ್ಷೆಯ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಈ ಸಂದರ್ಶನದಲ್ಲಿ ನಿಮಗೆ ಟ್ರಿಕ್ಕಿ ಆಗಿರುವ ಹಾಗೂ ನಿಮ್ಮನ್ನ ಕಂಫ್ಯೂಸ್ ಮಾಡುವ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಪುಸ್ತಕದ ಬದನೆಕಾಯಿ ಕೇಳುವ ಬದಲು, ನಿಮ್ಮ ಜಾಣತನ ಹಾಗೂ ನೀವು ಎಷ್ಟು ಆಕ್ಟೀವ್ ಆಗಿ ಉತ್ತರಿಸುತ್ತೀರಾ ಎಂದು ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನ ಕೇಳುತ್ತಾರೆ.

UPSC: ಯುಪಿಎಸ್‌ಸಿ ನೇಮಕಾತಿ ಅಧಿಸೂಚನೆ ಪ್ರಕಟ..ಮಾ.3ರೊಳಗೆ ಅರ್ಜಿ ಹಾಕಿ

ಇನ್ನು ಈ ಟೈಂನಲ್ಲಿ ಕೆಲವೊಮ್ಮೆ ಅವರು ನಿಮಗೆ ಕೋಪ ತರಿಸುವಂತಹ ಪ್ರಶ್ನೆಯನ್ನ ಕೂಡಾ ಕೇಳಬಹುದು ಆದ್ರೆ ಯಾವುದೇ ಕಾರಣಕ್ಕೂ ನೀವು ಕೋಪ ತೋರದೇ ಆರಾಮವಾಗಿ ಉತ್ತರಿಸಬೇಕು. ಯಾಕೆಂದ್ರೆ ಇಂತಹ ಪ್ರಶ್ನೆಗಳನ್ನ ಯಾಕೆ ಕೇಳುತ್ತಾರೆ ಎಂದ್ರೆ ನೀವು ನಿಮ್ಮ ಕೋಪವನ್ನ ಹೇಗೆ ಕಂಟ್ರೋಲ್ ಮಾಡಿಕೊಳ್ಳುತ್ತೀರಿ ಎಂದು ಚೆಕ್ ಮಾಡಲು ಕೇಳಿರುತ್ತಾರೆ. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಆವೇಗಕ್ಕೆ ಒಳಗಾಗದೇ ಆರಾಮವಾಗಿ ಉತ್ತರಿಸಿ ಸೈ ಎನಿಸಿಕೊಳ್ಳಿ.

ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕೇಳಲಾಗುವಂತಹ ಫನ್ನಿಯೆಸ್ಟ್ ಹಾಗೂ ಟ್ರಿಕ್ಕಿ ಪ್ರಶ್ನೆಗಳು ಇಲ್ಲಿವೆ ಮುಂದಕ್ಕೆ ಓದಿ:

ಪ್ರಶ್ನೆ 1

ಪ್ರಶ್ನೆ 1

ಒಬ್ಬ ಮೂಗ ಶಾಪ್ ಗೆ ಬಂದು ಕೈ ಸನ್ನೆ ಮಾಡಿ ಸೋಪ್ ಬೇಕು ಎಂದು ಕೇಳಿ ಪಡೆಯುತ್ತಾನೆ, ಈಗ ಒಬ್ಬ ಕಿವುಡನಿಗೆ ಬಟ್ಟೆ ಬೇಕು ಅಂದರೆ ಅವನು ಹೇಗೆ ಕೇಳುತ್ತಾನೆ

ಉತ್ತರ: ಅವನು ಕಿವುಡ ಅವನಿಗೆ ಕಿವಿ ಕೇಳುವುದಿಲ್ಲ ಆದ್ರೆ ಮಾತು ಬರುತ್ತದೆ ಅಲ್ವಾ ಹಾಗಾಗಿ ಬಾಯಲ್ಲೇ ಬಟ್ಟೆ ಬೇಕು ಎಂದು ಕೇಳುತ್ತಾನೆ ಎಂದು ಉತ್ತರಿಸಿ

ಪ್ರಶ್ನೆ 2

ಪ್ರಶ್ನೆ 2

ಒಂದು ಕೆಂಪು ಕಲ್ಲನ್ನು ಹಳದಿ ನೀರಿನಲ್ಲಿ ಹಾಕಿದ್ರೆ ಏನಾಗುತ್ತದೆ?

ಉತ್ತರ : ಸಾಮಾನ್ಯವಾಗಿ ಈ ಪ್ರಶ್ನೆಗೆ ನೀವು ಹೀಗೆ ಉತ್ತರಿಸಬಹುದು ಹಳದಿ ಯಾಗುತ್ತದೆ ಇಲ್ಲ ಕೆಂಪು ಬಣ್ಣವೇ ಇರುತ್ತದೆ ಎಂದು ಆದ್ರೆ ಸರಿಯಾದ ಉತ್ತರ ಕಲ್ಲು ನೀರಿನಲ್ಲಿ ಮುಳುಗಿ ಒದ್ದೆಯಾಗುತ್ತದೆ ಎಂಬುದು.

ಪ್ರಶ್ನೆ 4
 

ಪ್ರಶ್ನೆ 4

ಒಂದು ಕಟ್ಟಡವನ್ನ 8 ಜನ 10 ಗಂಟೆಯಲ್ಲಿ ಕಟ್ಟುತ್ತಾರೆ, ಹಾಗಾದರೆ ಈ ಕಟ್ಟಡವನ್ನು 4 ಜನ ಎಷ್ಟು ಗಂಟೆಯಲ್ಲಿ ಕಟ್ಟುತ್ತಾರೆ?

ಉತ್ತರ: ಈ ಪ್ರಶ್ನೆ ಕೇಳಿದ ಕೂಡಲೇ ನೀವು ಕೈ ಬೆರಳಿನಿಂದ ಲೆಕ್ಕ ಮಾಡಲು ಪ್ರಾರಂಭಿಸಬಹುದು. ಆದ್ರೆ ಅಷ್ಟೆಲ್ಲಾ ಚಿಂತಿಸುವ ಅವಶ್ಯಕತೆ ಇಲ್ಲ ಇದರ ಉತ್ತರ ಮತ್ತಷ್ಟೂ ಸಿಂಪಲ್ ಆಗಿದೆ ಅದೇನೆಂದ್ರೆ ಈಗಾಗಲೇ ಆ ಕಟ್ಟಡ ನಿರ್ಮಿಸಿ ಆಗಿದೆಯಲ್ಲ ಹಾಗಾಗಿ ಒಮ್ಮೆ ಕಟ್ಟಿದ ಕಟ್ಟಡ ಮತ್ತೊಮ್ಮೆ ಕಟ್ಟಲು ಸಾಧ್ಯವಿಲ್ಲ ಎಂಬುವುದಾಗಿದೆ

ಪ್ರಶ್ನೆ 5

ಪ್ರಶ್ನೆ 5

ಮೇರಿ ತಂದೆಗೆ 5 ಜನ ಮಕ್ಕಳು ಅವರ ಹೆಸರು ನಾನಾ, ನಾಣಿ, ನಾನೋ ಹಾಗೂ ನಾನು. ಹಾಗಾದ್ರೆ 5ನೇ ಮಗಳ ಹೆಸರೇನು?

ಉತ್ತರ : ಉತ್ತರಕ್ಕಾಗಿ ಪೇಚಾಡಬೇಡಿ ಸಿಂಪಲ್ ಆಗಿದೆ ಉತ್ತರ ಮೇರಿಯೇ ಆ 5ನೇ ಮಗಳು

ಪ್ರಶ್ನೆ 6

ಪ್ರಶ್ನೆ 6

ನಿಮ್ಮ ಬಳಿ ಒಂದು ಕೈಯಲ್ಲಿ ಮೂರು ಸೇಬುಹಣ್ಣು ಹಾಗೂ ೪ ಕಿತ್ತಳೆ ಹಣ್ಣು ಇರುತ್ತದೆ ಹಾಗೂ ಮತ್ತೊಂದು ಕೈಯಲ್ಲಿ ಮೂರು ಕಿತ್ತಳೆ ಹಣ್ಣು ಹಾಗೂ ನಾಲ್ಕು ಸೇಬು ಹಣ್ಣುಗಳು ಇರುತ್ತದೆ. ಹಾಗಿದ್ರೆ ನಿಮ್ಮ ಬಳಿ ಏನಿದೆ?

ಉತ್ತರ ಏನಂದ್ರೆ ದೊಡ್ಡದಾದ ಕೈ. ಯಾಕೆಂದ್ರೆ ಇಷ್ಟೆಲ್ಲಾ ಇದೆ ಎಂದಾದ್ರೆ ನಿಮ್ಮ ಬಳಿ ಮುಖ್ಯವಾಗಿ ಏನಿದೆ ಅಂದ್ರೆ ದೊಡ್ಡದಾದ ಕೈ.

ಪ್ರಶ್ನೆ 7

ಪ್ರಶ್ನೆ 7

ಮುಂಜಾನೆ ಬ್ರೇಕ್‌ಫಾಸ್ಟ್ ಗೆ ಯಾವತ್ತೂ ತಿನ್ನಲು ಸಾಧ್ಯವಿಲ್ಲದ್ದು ಯಾವುದು?

ಉತ್ತರ :ಲಂಚ್ ಹಾಗೂ ಡಿನ್ನರ್

ಪ್ರಶ್ನೆ 8

ಪ್ರಶ್ನೆ 8

ಒಬ್ಬ ವ್ಯಕ್ತಿ 8 ಡೇಸ್ ( ದಿನ) ಹೇಗೆ ನಿದ್ರೆ ಇಲ್ಲದೇ ಇರಬಲ್ಲನು?

ಉತ್ತರ: ನೋ ಪ್ರಾಬ್ಲಂ ಆತ ಹಗಲು ಮಲಗಿಲ್ಲ ಎಂದಾದ್ರೂ ರಾತ್ರಿ ಮಲಗ ಬಲ್ಲನು

ಪ್ರಶ್ನೆ 9

ಪ್ರಶ್ನೆ 9

ನಾನು ನಿನ್ನ ಸಹೋದರಿ ಜತೆ ಓಡಿ ಹೋದ್ರೆ ನೀವು ಏನು ಮಾಡುತ್ತೀಯಾ?

ಉತ್ತರ: ಎಂತಹವರಿಗೂ ಇಂತಹ ಪ್ರಶ್ನೆ ಕೇಳಿದಾಗ ಖಂಡಿತಾ ಕೋಪ ಬರಬಹುದು. ಆದ್ರೆ ನೀವು ಸಂದರ್ಶನ ರೌಂಡ್‌ನಲ್ಲಿ ಇದ್ದೀರಾ ಎಂಬುವುದು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಪ್ರಶ್ನೆ ಕೇಳಿದಾಗ ಕೂಲ್ ಆಗಿ ಉತ್ತರಿಸಿ, ನೀವು ಕಲಿತಿದ್ದೀರಾ ಹಾಗೂ ಒಳ್ಳೆಯ ಕೆಲಸದಲ್ಲಿ ಕೂಡಾ ಇದ್ದೀರಾ. ಹಾಗಾಗಿ ನಿಮಗಿಂತ ಒಳ್ಳೆಯ ಮ್ಯಾಚ್ ನನ್ನ ಸಹೋದರಿಗೆ ಸಿಗಲು ಸಾಧ್ಯವಿಲ್ಲ ಎಂದು ಉತ್ತರಿಸಿ. ಈ ಪ್ರಶ್ನೆ ನೀವು ಹೇಗೆ ಕೋಪವನ್ನ ಕಂಟ್ರೋಲ್ ಮಾಡಬಲ್ಲಿರೀ ಎಂದು ಟೆಸ್ಟ್ ಮಾಡಲು ಕೇಳಲಾಗುತ್ತದೆ.

ಪ್ರಶ್ನೆ 10

ಪ್ರಶ್ನೆ 10

ಅರ್ಧ ಕತ್ತರಿಸಿದ ಸೇಬು ಯಾವ ತರಹ ಕಾಣುತ್ತದೆ ?

ಉತ್ತರ: ಹೌದು ಈ ಪ್ರಶ್ನೆ ಕೇಳಿದಾಗ ತುಂಬಾ ನಾಜೂಕಾಗಿ ಉತ್ತರಿಸಿ. ಅರ್ಧ ಕತ್ತರಿಸಿದ ಸೇಬು ಇನ್ನರ್ಧ ಸೇಬಿನ ತರಹ ಕಾಣುತ್ತದೆ ಎಂದು ನಾಜೂಕಾಗಿ ಉತ್ತರಿಸಿ ಆ ಕೆಲಸ ನಿಮ್ಮದಾಗಿಸಿಕೊಳ್ಳಿ

ಪ್ರಶ್ನೆ 11

ಪ್ರಶ್ನೆ 11

ಇನ್ನು ವಿಶ್ವಸುಂದರಿ ಸ್ಪರ್ಧೆಯಲ್ಲೂ ಇಂತಹದ್ದೇ ಪ್ರಶ್ನೆಗಳನ್ನ ಕೇಳಲಾಗುತ್ತದೆ. 1994 ರಲ್ಲಿ ನಡೆದ ವಿಶ್ವ ಸುಂದರಿ ಸೌಂಧರ್ಯ ಸ್ಪರ್ಧೆಯಲ್ಲಿ ಐಶ್ವರ್ಯ ರೈ ಅವರಿಗೆ ಈ ರೀತಿಯಾಗಿ ಪ್ರಶ್ನೆ ಕೇಳಲಾಗಿತ್ತು. ಅದೇನೆಂದ್ರೆ ವಿಶ್ವ ಸುಂದರಿ 1994 ಸೌಂಧರ್ಯ ಸ್ಪರ್ಧೆ ಯಾವ ಗುಣ ರೂಪಿಸಿಕೊಳ್ಳಬೇಕು ಎಂದು?

ಈ ಪ್ರಶ್ನೆಗೆ ಉತ್ತರಿಸಿದ ನೀಲಿ ಕಂಗಳ ಚೆಲುವೆ ಇದುವರೆಗೆ ವಿಶ್ವ ಸುಂದರಿ ಸ್ಪರ್ಧೆಗಳು ಕೆಳಮಟ್ಟದಲ್ಲಿರುವವರ ಬಗ್ಗೆ ಸಹಾನುಭೂತಿ ಹೊಂದಿರುವುದು ಎಂಬುವುದಕ್ಕೆ ಸಾಕ್ಷಿಯಾಗಿದೆ. ಯಾರಿಗೆ ಸ್ಟೇಟಸ್ ಹಾಗೂ ಸ್ಟೇಚರ್ ಇದೆಯೋ ಅವರ ಮೇಲೆ ಮಾತ್ರ ಸಹಾನುಭೂತಿ ತೋರದೇ ನಿರಾಶ್ರಿತರ ಮೇಲೂ ಸಹನೆ ತೋರಬೇಕು. ಬಣ್ಣ, ಹಾಗೂ ವರ್ಗಭೇದವೆಂಬ ಮನುಷ್ಯ ನಿರ್ವಿುಸಿಕೊಂಡ ಅಡೆತಡೆಗಳನ್ನು ಕಿತ್ತೊಗೆದು ಮಾನವೀಯತೆಯೇ ಪ್ರಧಾನವಾಗಬೇಕು ಎಂದು ಉತ್ತರಿಸಿದರು. ಹೀಗೆ ಉತ್ತರಿಸುತ್ತಿದ್ದಂತೆ ಇಡೀ ಸಭೆಯೇ ಎದ್ದು ನಿಂತು ಚಪ್ಪಾಳೆಯ ಮಳೆ ಸುರಿಸಿತ್ತು

For Quick Alerts
ALLOW NOTIFICATIONS  
For Daily Alerts

English summary
IAS, IFS, UPSC, IPS is toughest exams to crack. People who have studied for it, would tell you how competitive it can get, In This Examination were asked in the two stages of the examination process. This Questions not related to your Subject, But they want to know How Knowledge you really have
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more