ಸರಾಗವಾಗಿ ಇಂಗ್ಲೀಷ್ ಮಾತನಾಡಲು ನೀವು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಈಗಂತೂ ನಮ್ಮ ದುನಿಯಾ ಥಟ್ ಥಟ್ ಎಂದು ಓಡುತ್ತಿದೆ. ಎಲ್ಲೆಡೆ ಮಾರ್ಡನ್ ಬದಲಾವಣೆಯನ್ನ ನೀವು ಕಾಣಬಹುದು. ನಮ್ಮ ಲೈಫ್ ಸ್ಟೈಲ್, ಆಚಾರ ವಿಚಾರ ಎಲ್ಲದರಲ್ಲೂ ಇದೀಗ ಆಧುನಿಕತೆಯ ಲೇಪ ಹಚ್ಚಿರುವುದು ನೀವು ಕಾಣಬಹುದು. ಇನ್ನೂ ಈ ವಿಷಯಕ್ಕೆ ಭಾಷೆ ಹೊರತಲ್ಲ. ಹೌದು ಈಗಂತೂ ಚಿಕ್ಕ ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯ ವರೆಗೂ ಪಟ ಪಟ ಎಂದು ಇಂಗ್ಲೀಷ್ ಮಾತನಾಡುವವರನ್ನ ನೀವು ನೋಡಬಹುದು. ಅದು ಬಿಡಿ ಸಂದರ್ಶನ ಎಂದು ಹೋದಾಗ ಅಲ್ಲಿ ಬರೀ ಇಂಗ್ಲೀಷ್‌ನಲ್ಲೇ ಮೇಲಿಂದ ಮೇಲೆ ಪ್ರಶ್ನೆಗಳನ್ನ ಕೇಳುತ್ತಾರೆ. ನಿಮಗೆ ಇಂಗ್ಲೀಷ್ ಮಾತನಾಡಲು ಸಾಧ್ಯವಾಗದೇ ಹೋದ್ರೆ ಅವರು ಕೇಳುವ ಪ್ರಶ್ನೆಗೆ ಉತ್ತರಸಿಲು ಕೂಡಾ ಕಷ್ಟವಾಗುತ್ತದೆ ಅಷ್ಟೇ ಯಾಕೆ ನಿಮ್ಮಲ್ಲಿದ್ದ ಪಾಸಿಟೀವ್ ಕಾಂಫಿಡೆನ್ಸ್ ಕೂಡಾ ನೀವು ಕಳೆದುಕೊಳ್ಳುತ್ತೀರಾ.

 

ಬನ್ನಿ ನೀವು ಕೂಡಾ ಪಟ ಪಟ ಎಂದು ಇಂಗ್ಲೀಷ್ ಮಾತನಾಡಬಯಸುವವರಾಗಿದ್ದರೆ, ಏನೆಲ್ಲಾ ಟಿಪ್ಸ್ ಫಾಲೋ ಮಾಡಿ ಇಂಗ್ಲೀಷ್ ಮಾತನಾಡಲು ಕಲಿಯಬಹುದು ಎಂದು ಕೆರಿಯರ್ ಇಂಡಿಯಾ ನಿಮಗೆ ಟಿಪ್ಸ್ ನೀಡುತ್ತಿದೆ ಮುಂದಕ್ಕೆ ಓದಿ

also read: ಈ ಮೂರು ಅಭ್ಯಾಸಗಳಿಂದ ನಿಮ್ಮ ಕೆರಿಯರ್ ಲೈಫ್ ಹಾಳಾಗುತ್ತೆ ಹುಷಾರ್!

1. ಮಾತನಾಡಲು ಹಿಂಜರಿಕೆ ಬೇಡ

ಇಂಗ್ಲೀಷ್ ಮಾತನಾಡುವಾಗ ತಪ್ಪು ಮಾಡುತ್ತೀರಿ ಎಂಬ ಭಯ ನಿಮಗೆ ಬೇಡ. ಕಾಂಫಿಡೆಂಟ್ ಆಗಿರಿ. ನೀವು ತಪ್ಪು ಮಾತನಾಡುತ್ತೀರಿ ಎಂದು ಮಾತನಾಡದೇ ಇರಬೇಡಿ. ಯಾಕೆಂದ್ರೆ ತಪ್ಪು ತಪ್ಪು ಮಾತನಾಡಿದಾಗ ಮಾತ್ರ ಅದನ್ನ ಕೇಳಿದ ನಿಮ್ಮ ಸ್ನೇಹಿತರು ನಿಮ್ಮ ತಪ್ಪನ್ನ ಸರಿಪಡಿಸಲು ಸಾಧ್ಯ. ನೀವು ಮಾತನಾಡದೇ ಇದ್ದರೆ ಅವರು ನಿಮ್ಮ ತಪ್ಪು ಸರಿಪಡಿಸುವುದಾದ್ರೂ ಹೇಗೆ ಹೇಳಿ.

 

2. ಇಂಗ್ಲೀಷ್ ವಾತಾವರಣ ನಿರ್ಮಿಸಿ

ಹೌದು ನೀವು ಕೂಡಾ ಪಟ ಪಟ ಎಂದು ಇಂಗ್ಲೀಷ್ ಮಾತನಾಡಬೇಕು ಎಂದು ಅಂದುಕೊಂಡಿದ್ದರೆ, ಮೊದಲಿಗೆ ಇಂಗ್ಲೀಷ್ ಮಾತುಗಳು ಬಳಕೆಯಾಗುವಲ್ಲಿ ನೀವು ಹೆಚ್ಚು ಕಾಲ ಕಳೆಯಿರಿ. ಹೌದು ಇಂಗ್ಲೀಷ್ ಮಾತನಾಡುವ ಸ್ನೇಹಿತರ ಜತೆ ಹೆಚ್ಚು ಒಡನಾಟ ಬೆಳೆಸಿಕೊಳ್ಳಿ. ಅವರ ಸುತ್ತಮುತ್ತನೇ ಓಡಾಡಿಕೊಂಡು ಇರಿ. ನೀವು ಅವರ ಜತೆ ಮಾತನಾಡುತ್ತಾ ಇದ್ದಾಗಲೇ ಸುಲಭವಾಗಿ ಇಂಗ್ಲೀಷ್ ಮಾತನಾಡಲು ಸಾಧ್ಯವಾಗುವುದು. ಬರೆದು ಇಂಗ್ಲೀಷ್ ಕಲಿಯುದಕ್ಕಿಂತ ಮಾತನಾಡುತ್ತಾ ಇಂಗ್ಲೀಷ್ ಕಲಿಯುವುದು ಹೆಚ್ಚು ಎಫೆಕ್ಟೀವ್ ಆಗಿರುತ್ತದೆ.

3. ಪ್ರತೀ ದಿನ ಪ್ರ್ಯಾಕ್ಟೀಸ್ ಮಾಡಿ

ಹೌದು ಪ್ರ್ಯಾಕ್ಟೀಕಲ್ ಆಗಿಯೂ ಅಭ್ಯಾಸ ಮಾಡಿದ್ರೆ ನೀವು ಸುಲಭವಾಗಿ ಇಂಗ್ಲೀಷ್ ಕಲಿಯಬಹುದು. ಪ್ರತೀ ದಿನ ಪ್ರ್ಯಾಕ್ಟೀಸ್ ಮಾಡಿ. ಅದಕ್ಕಾಗಿ ಸ್ಟಡಿ ಪ್ಲ್ಯಾನ್ ಕೂಡಾ ರಚಿಸಿ.ವಾರಕ್ಕೆ ಎಷ್ಟು ಗಂಟೆ ಇಂಗ್ಲೀಷ್ ಕಲಿಕೆಗೆ ಮೀಸಲಿಡಬೇಕು ಎಂದು ನಿರ್ಧಾರಮಾಡಿಕೊಳ್ಳಿ. ಹಾಗೂ ಆ ಪ್ಲ್ಯಾನ್ ಅನ್ನೇ ಫಾಲೋ ಕೂಡಾ ಮಾಡಿ.

4. ಇಂಗ್ಲೀಷ್ ಕಲಿಕೆಗೆ ಈ ನಾಲ್ಕು ಅಂಶ ಅಗತ್ಯ

ಹೌದು ಇಂಗ್ಲೀಷ್ ಮಾತನಾಡಲು ನೀವು ಕಲಿಯಬೇಕೆಂದಿದ್ದರೆ ನಿಮ್ಮ ಜೀವನದಲ್ಲಿ ಈ ನಾಲ್ಕು ಅಂಶ ರೂಢಿಸಿಕೊಳ್ಳಿ. ಓದುವುದು, ಬರೆಯುವುದು, ಮಾತನಾಡುವುದು ಹಾಗೂ ಕೇಳುವುದು ಈ ನಾಲ್ಕು ಅಂಶಗಳು ನಿಮ್ಮ ಇಂಗ್ಲೀಶ್ ಜ್ಞಾನ ಹೆಚ್ಚಿಸಲು ಸಹಾಯಮಾಡುತ್ತದೆ.

5. ನೋಟ್ ಮಾಡಿಕೊಳ್ಳಿ

ಹೌದು ನೀವು ಇಂಗ್ಲೀಷ್ ಮಾತನಾಡಲು ಕಲಿಯಬೇಕು ಎಂದು ನಿರ್ಧಾರ ಮಾಡಿಕೊಂಡ ಬಳಿಕ ಮೊದಲಿಗೆ ನಿಮ್ಮ ಬಳಿ ಯಾವಾಗಲೂ ಒಂದು ಚಿಕ್ಕದಾದ ಪಾಕೆಟ್ ನೋಟ್ ಬುಕ್ ಇಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ಎಂದಾದ್ರೂ ಮಾತನಾಡುವಾಗ ಹೊಸ ಪದದ ಪರಿಚಯವಾದ್ರೆ ಕೂಡಲೇ ಅದನ್ನ ಬರೆದಿಟ್ಟುಕೊಳ್ಳಿ. ಹಾಗೂ ಮುಂದೆ ನೀವು ಮಾತನಾಡುವ ವೇಳೆ ಆ ಪದ ಬಳಸಿ. ಕಡಿಮೆ ಅಂದ್ರೂ ದಿನಕ್ಕೆ ಮೂರು ಬಾರಿ ನಿಮ್ಮ ಮಾತಿನಲ್ಲಿ ಆ ಪದಗಳನ್ನ ಬಳಸಿಕೊಳ್ಳುವುದು ಉತ್ತಮ.

6. ವೆಬ್‌ಸೈಟ್‌ಗಳ ಸಹಾಯ ಪಡೆಯಿರಿ

ಹೌದು ಈಗಂತೂ ಇಂಗ್ಲೀಷ್ ಕಲಿಕೆಗೆ ಅದೆಷ್ಟೋ ವೆಬ್‌ಸೈಟ್‌ಗಳು ನಿಮಗೆ ಸಿಗುತ್ತದೆ. ಜಸ್ಟ್ ಲಾಗಿನ್ ಆಗಿ ಅದರ ಪ್ರಯೋಜನ ಪಡೆದುಕೊಳ್ಳಿ. ಕೆಲವೊಂದು ಆಪ್ ಗಳು ಕೂಡಾ ಇದ್ದು, ನೀವು ನಿಮ್ಮ ಮೊಬೈಲ್, ಕಂಪ್ಯೂಟರ್ ಇಲ್ಲ ಲ್ಯಾಪ್‌ಟಾಪ್ ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಯಾವಾಗೆಲ್ಲಾ ಫ್ರೀ ಇರುತ್ತೀರೋ ಆವಾಗೆಲ್ಲಾ ಅದರ ಪ್ರಯೋಜನ ಪಡೆದುಕೊಳ್ಳಬಹುದು.

7. ಮಕ್ಕಳ ಪಠ್ಯಪುಸ್ತಕ ಖರೀದಿಸಿ

ಹೌದು ಮಕ್ಕಳ ಪಠ್ಯ ಪುಸ್ತಕದಲ್ಲಿ ಬಹಳ ಸುಲಭವಾದ ಇಂಗ್ಲೀಷ್‌ನಲ್ಲಿ ಪಠ್ಯ ಹಾಗೂ ಪದ್ಯಗಳಿರುತ್ತದೆ. ಇವುಗಳನ್ನ ಖರೀದಿಸಿ ನೀವು ಕೂಡಾ ಓದಿಕೊಳ್ಳಬಹುದು. ಇವು ನಿಮಗೆ ಸುಲಭವಾಗಿ ಅರ್ಥವಾಗುವುದಲ್ಲದೇ, ನೀವು ಕೂಡಾ ಈಜಿ ವೇಯಿಂದ ಇಂಗ್ಲೀಷ್ ಕಲಿಯಬಹುದು

8. ಸುದ್ದಿ ಪತ್ರಿಕೆ ಓದಿ

ಹೌದು ಸಾಮಾನ್ಯವಾಗಿ ಇಂಗ್ಲೀಷ್ ಹಾಗೂ ಕನ್ನಡ ಪತ್ರಿಕೆಯಲ್ಲಿ ಹೆಚ್ಚಾಗಿ ಒಂದೇ ವಿಷಯಕ್ಕೆ ಸಂಬಂಧಪಟ್ಟ ಸುದ್ದಿಗಳಿರುತ್ತದೆ. ಹಾಗಾಗಿ ಎರಡು ಭಾಷೆಯ ಪತ್ರಿಕೆಗಳನ್ನ ಖರೀದಿಸಿ ಓದಿ. ಮೊದಲಿಗೆ ಇಂಗ್ಲೀಷ್ ಪತ್ರಿಕೆಯನ್ನ ಗಟ್ಟಿಯಾಗಿ ಓದಿಕೊಳ್ಳಿ, ಬಳಿಕ ಕನ್ನಡ ಪತ್ರಿಕೆಯಲ್ಲಿ ಬಂದಿರುವ ಅದೇ ಸುದ್ದಿಯನ್ನ ಮತ್ತೊಮ್ಮೆ ಓದಿ. ಇದರಿಂದ ನಿಮಗೆ ಇಂಗ್ಲೀಷ್ ಪದಗಳ ಅರ್ಥಗಳು ಸುಲಭವಾಗಿ ತಿಳಿಯುವುದು.

9. ಇಂಗ್ಲೀಷ್ ಸಿನಿಮಾಗಳನ್ನ ನೋಡಿ

ಹೌದು ಯಾವುದೇ ಭಾಷೆ ನೀವು ಸುಲಭವಾಗಿ ಕಲಿಯಬೇಕಂದ್ರೆ ಅದಕ್ಕೆ ಸಿನಿಮಾ ಒಂದು ಸುಲಭ ಮಾರ್ಗವಾಗಿದೆ. ಹಾಗಾಗಿ ಸಿನಿಮಾ ದಿಂದ ಇಂಗ್ಲೀಷ್ ಮಾತನಾಡಲು ಕೂಡಾ ನೀವು ಕಲಿಯಬಹುದು. ಹೆಚ್ಚಿನ ಸಿನಿಮಾಗಳು ಇಂಗ್ಲೀಷ್ ಸಬ್‌ಟೈಟಲ್ ಹೊಂದಿರುತ್ತದೆ. ನೀವು ಸಿನಿಮಾ ನೋಡುವಾಗ ಜತೆ ಜತೆಗೆ ಆ ಸಬ್‌ಟೈಟಲ್ ಕೂಡಾ ಓದಿಕೊಳ್ಳಿ. ಇದರಿಂದ ಮುಂದೆ ನೀವು ಕೂಡಾ ಪಟ ಪಟ ಎಂದು ಇಂಗ್ಲೀಷ್ ಮಾತನಾಡಬಹುದು

10. ಕೋಚಿಂಗ್ ಕ್ಲಾಸ್‌ಗಳಿಗೆ ಸೇರಿ

ಹೌದು ಇಂಗ್ಲೀಷ್ ಕಲಿಕೆಗೆ ಕೋಚಿಂಗ್ ಕ್ಲಾಸ್‌ಗಳು ಕೂಡಾ ಸಹಾಯಕವಾಗಿದೆ. ನಾವಾಗಿಯೇ ಇಂಗ್ಲೀಷ್ ಕಲಿಯುದಕ್ಕಿಂತ ನಮಗೆ ಇಂಗ್ಲೀಷ್ ಕಲಿಸುವವರು ಇದ್ದರೆ ಕೂಡಾ ಬೆಸ್ಟ್ ಅಲ್ವಾ.. ಹಾಗಾಗಿ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಗಳಿಗೆ ಸೇರಿಕೊಳ್ಳಿ. ಕ್ಲಾಸ್ ನಲ್ಲಿ ಹೇಳಿಕೊಟ್ಟದ್ದು, ಅಲ್ಲಿಗೆ ಮರೆಯದೇ ಮನೆಗೆ ಬಂದ ಮೇಲೆ ಮತ್ತೊಮ್ಮೆ ಸ್ಟಡಿ ಮಾಡಿ. ಹಾಗೂ ನೆಕ್ಸ್ಟ್ ದಿನ ಮತ್ತೊಮ್ಮೆ ರಿವಿಜನ್ ಮಾಡುವುದು ಅಗತ್ಯ.

also read: ಏನೆಲ್ಲಾ ಚಿತ್ರ-ವಿಚಿತ್ರ ಕೆಲಸಗಳಿವೆ ಗೊತ್ತಾ... ಇವರ ಆದಾಯವೂ ಅಷ್ಟಕಷ್ಟೆ!

For Quick Alerts
ALLOW NOTIFICATIONS  
For Daily Alerts

  English summary
  In today's scenario, having good English language skills is a must. English is becoming the language of the world and all of us have to keep up to it. If you have been learning English for a while and yet cannot communicate with ease, you will need a bit of creativeness and commitment, but learning English now is easier than ever
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more