Gandhi Jayanthi: ಗಾಂಧಿ ಬಗ್ಗೆ ನಿಮಗೆಷ್ಟು ಗೊತ್ತು ?

By Kavya

ದೇಶದ ರಾಷ್ಟ್ರಪಿತ ಎಂದೇ ಖ್ಯಾತಿ ಗಳಿಸಿರುವ ಮಹಾತ್ಮ ಗಾಂಧಿ ಅಕ್ಟೋಬರ್ 2, 1869 ರಂದು ಜನಿಸಿದರು. ಇನ್ನು ಅಹಿಂಸೆ ಮಂತ್ರದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇವರ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ಗಾಂಧೀಜಿಯವರ ಪೂರ್ತಿ ಹೆಸರು ಮೋಹನ್ ದಾಸ್ ಕರಮ ಚಂದ್ರ ಗಾಂಧಿ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಇವರ ಪಾತ್ರ ತುಂಬಾ ಹಿರಿದು. ಈ ಗಣ್ಯ ವ್ಯಕ್ತಿಯ ಬಗ್ಗೆ ನಿಮಗೆಷ್ಟು ತಿಳಿದಿದೆ ಎಂದು ಚೆಕ್ ಮಾಡಲು ಇಲ್ಲಿ ಕೆಲವು ಪ್ರಶ್ನೆಗಳನ್ನ ನೀಡಲಾಗಿದೆ. ಇವುಗಳಲ್ಲಿ ನೀವೆಷ್ಟು ಪ್ರಶ್ನೆಗೆ ಸರಿಯಾದ ಉತ್ತರ ನೀಡಬಲ್ಲೀರಿ ಎಂದು ಚೆಕ್ ಮಾಡಿಕೊಳ್ಳಿ

ಗಾಂಧಿ ಜಯಂತಿ ವಿಶೇಷ: ಗಾಂಧಿ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿ ತಿಳಿಯೋಣ

 

ಮಹಾತ್ಮ ಗಾಂಧೀಜಿಯ ಕುರಿತ್ತಾದಂತಹ ಪ್ರಮುಖ15 ಪ್ರಶ್ನೆಗಳು ಹೀಗಿವೆ

1. ಮಹಾತ್ಮ ಗಾಂಧಿಯವರು ಎಂದು ಹಾಗೂ ಎಲ್ಲಿ ಜನಿಸಿದರು?

ಉತ್ತರ: ಅಕ್ಟೋಬರ್ 02, 1869 ರಂದು ಗುಜರಾತಿ ಪೋರಬಂದರಿನಲ್ಲಿ ಜನಿಸಿದರು

2. ಮಹಾತ್ಮ ಗಾಂಧಿಯವರ ತಂದೆ-ತಾಯಿ ಹಾಗೂ ಪತ್ನಿ ಮತ್ತು ಮಕ್ಕಳ ಹೆಸರೇನು?

ಉತ್ತರ: ತಂದೆ ಕರಮಚಂದ್ರ ಗಾಂಧಿ ಹಾಗೂ ತಾಯಿ ಪುತಲೀಬಾಯಿ ಮತ್ತು ಪತ್ನಿ ಕಸ್ತೂರ ಬಾ. ಇನ್ನು ಗಾಂಧಿಯವರಿಗೆ ೪ ಜನ ಮಕ್ಕಳಿದ್ದು, ಅವರ ಹೆಸರುಗಳು ಹೀಗಿವೆ ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ, ರಾಮದಾಸ್ ಗಾಂದಿ ಮತ್ತು ದೇವದಾಸ್ ಗಾಂಧಿ.

3. ಮಹಾತ್ಮ ಗಾಂಧಿಯವರಿಗೆ ಎಷ್ಟನೇ ವಯಸ್ಸಿಗೆ ವಿವಾಹವಾಯಿತು?

ಉತ್ತರ:13 ವರ್ಷ

4.ಮಹಾತ್ಮ ಗಾಂಧಿ ಅವರ ಹತ್ಯೆ ಯಾವಾಗಾ ಆಯಿತು ಹಾಗೂ ಹತ್ಯೆಗೈದವರಾರು?

ಉತ್ತರ :30-01-1948 , ನಾಥೂರಾಮ್ ವಿನಾಯಕ್ ಗೋಡ್ಸೆ

5. ಮಹಾತ್ಮ ಗಾಂಧಿ ಅವರು ಯಾವ ಸುದ್ದಿ ಪತ್ರಿಕೆ ಸಂಪಾದಕರಾಗಿದ್ದರು?

ಉತ್ತರ: ದಕ್ಷಿಣ ಆಫ್ರಿಕಾದಲ್ಲಿನ ಇಂಡಿಯನ್ ಒಪಿನಿಯನ್ ಪತ್ರಿಕೆ, ಭಾರತದ ಗುಜರಾತಿ, ಹಿಂದಿ ಮತ್ತು ಆಂಗ್ಲಬಾಷೆಯ ಹರಿಜನ್ ಪತ್ರಿಕೆ, ಆಂಗ್ಲ ಭಾಷೆಯ ಯಂಗ್ ಇಂಡಿಯಾ ಪತ್ರಿಕೆ ಹಾಗೂ ಗುಜರಾತಿನ ನವಜೀವನ್ ಎಂಬ ಮಾಸ ಪತ್ರಿಕೆ

6. ಯಾವಾಗ ಗಾಂಧೀಜಿಯರು ಉಪ್ಪಿನ ಸತ್ಯಾಗ್ರಹ ಮಾಡಿದರು?

ಉತ್ತರ: ಮಾರ್ಚ್ 12, 1930 ರಂದು

7.ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು?

ಉತ್ತರ: ನಂದಿ ದುರ್ಗಾ

8. ಗಾಂಧೀಜಿಯವರ ರಾಜಕೀಯ ಗುರು ಯಾರು?

ಉತ್ತರ: ಗೋಪಾಲ್ ಕೃಷ್ಣ ಗೋಖಲೆ

9. ಯಾವ ವರ್ಷದಲ್ಲಿ ಗಾಂಧೀಜಿವರು ವಕೀಲರಾಗಿದ್ದರು?

ಉತ್ತರ: 1891

10. ಗಾಂಧೀಜಿಯನ್ನ ಯಾವ ರೈಲ್ವೇ ನಿಲ್ದಾಣದಲ್ಲಿ ಅವಮಾನಿಸಿ ಬಲವಂತವಾಗಿ ಇಳಿಸಲಾಗಿತ್ತು?

ಉತ್ತರ: ದಕ್ಷಿಣ ಆಫ್ರೀಕಾದ ಪೀಟರ್ ಮಾರಿಟ್ಝ್ ಬರ್ಗ್ ನಿಲ್ದಾಣದಲ್ಲಿ

 

11. ಗಾಂಧೀಜಿಯವರ ಮೂರನೇ ಸತ್ಯಾಗ್ರಹ ಯಾವುದು?

ಉತ್ತರ: ಖೇಡಾ ಸತ್ಯಾಗ್ರಹ

12. ಯಾವ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದರು?

ಉತ್ತರ: 1924 ರಲ್ಲಿ ಬೆಳಗಾವಿ

13. ದಕ್ಷಿಣ ಆಫ್ರೀಕಾದಲ್ಲಿ ಗಾಂಧೀಜಿಯವರನ್ನ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಬಯಸಿದವರು ಯಾರು?

ಉತ್ತರ: ಎ ಡಬ್ಲ್ಯೂ ಬೇಕರ್

14. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧಿಸಲ್ಪಟ್ಟಾಗ ಗಾಂಧೀಜಿಯವರನ್ನ ಎಲ್ಲಿ ಬಂಧನದಲ್ಲಿಡಲಾಯಿತು?

ಉತ್ತರ: ಅಹಮದಾಬಾದ್

15.ಗಾಂಧೀಜಿಗೆ ಮಹಾತ್ಮ ಎಂದು ಟೈಟಲ್ ನೀಡಿದವರು ಯಾರು?

ಉತ್ತರ: ರವೀಂದ್ರನಾಥ ಟಾಗೋರ್

For Quick Alerts
ALLOW NOTIFICATIONS  
For Daily Alerts

English summary
Popularly known as the 'Father of the Nation', Mahatma Gandhi was born on October 2, 1869 as Mohandas Karamchand Gandhi. His non-violence movement made a remarkable impact in the freedom struggle that steered independence for India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more