ಕೆಲಸದ ಮಧ್ಯೆ ಬಿಡುವಿನ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯಲು ಇಲ್ಲಿದೆ ಟಿಪ್ಸ್

By Nishmitha Bekal

ಒಂದೇ ಜಾಗದಲ್ಲಿ ಕುಳಿತು ಇಡೀ ದಿನ ಕೆಲಸ ಮಾಡುವುದೆಂದ್ರೆ ಪ್ರತಿಯೊಬ್ಬರಿಗೂ ಬೋರ್ ಕೆಲಸ ಎಂದು ಅನಿಸಬಹುದು. ಹಾಗಿದ್ರೆ ಈ ಬೋರ್ ಹೋಗಿಸಲು ಏನು ಮಾಡಬಹುದು ಎಂದು ಇಲ್ಲಿ ನಿಮಗೆ ಕೆಲವು ಸಲಹೆ ನೀಡಲಾಗಿದೆ.

 

ನಿಮ್ಮ ಕೈಯಲ್ಲಿ ಬಹು ದೊಡ್ಡ ಪ್ರಾಜೆಕ್ಟ್ ಇರಬಹುದು, ಅಥವಾ ಇಡೀ ಟೀಂ ನ ಹೊಣೆ ನಿಮ್ಮಲ್ಲಿ ಇರಬಹುದು, ಅಷ್ಟೇ ಅಲ್ಲ ಜತೆಗೆ ಒಂದಿಷ್ಟು ಹೆಚ್ಚುವರಿ ಕೆಲಸ ಕೂಡಾ ಇರಬಹುದು. ಎಷ್ಟೇ ಬ್ಯುಸಿ ಆಗಿದ್ದರೂ ಈ ಕೆಲಸ ಮಧ್ಯೆ ನಿಮಗೆ ಸಮಯ ಸಿಕ್ಕಾಗ ಮತ್ತೆ ಬೋರ್ ಎನಿಸಬಹುದು. ಈ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯ ಬಹುದು ಎಂದು ಇಲ್ಲಿ ನಿಮಗೆ ಟಿಪ್ಸ್ ನೀಡಲಾಗಿದೆ ಮುಂದಕ್ಕೆ ಓದಿ.

More Read: ಸಂದರ್ಶನದಲ್ಲಿ ಕೇಳುವ ಈ 4 ಕಾಮನ್ ಪ್ರಶ್ನೆಗಳಿಗೆ ಕಾಮನ್ ಆಗಿ ಉತ್ತರಿಸಿ ಕೆಲಸಗಿಟ್ಟಿಸುವುದು ಹೇಗೆ?

ಓದಲು ಪ್ರಾರಂಭಿಸಿ

ಕೆಲಸ ಮಧ್ಯೆ ಒಂದಿಷ್ಟು ಸಹದ್ಯೋಗಿಗಳ ಮಧ್ಯೆ ನಿಮಗೆ ಪುಸ್ತಕ ಓದಲು ಆಸಕ್ತಿ ಇಲ್ಲದೇ ಇರಬಹುದು. ಆದ್ರೆ ನಿಮ್ಮ ಜಾಬ್ ಪ್ರೊಫೈಲ್ ಗೆ ಸಂಬಂಧಪಟ್ಟಂತಹ ಪುಸ್ತಕಗಳನ್ನ ಖರೀದಿಸಿ, ಓದಿಕೊಳ್ಳಿ. ಹಾಗೂ ಓದಿದ ಬಳಿಕ ನಿಮಗೆ ಸಹದ್ಯೋಗಿಗಳಿಗೂ ಕೆಲಸದ ಬಗ್ಗೆ ನೀವು ಓದಿರುವ ಪಾಯಿಂಟ್ಸ್ ಗಳನ್ನ ಸಲಹೆ ರೂಪದಲ್ಲಿ ನೀಡಿ. ಹಾಗೂ ನಂತರ ನಿಮ್ಮ ಕೆಲಸದಲ್ಲಿ ಪ್ರೊಡಕ್ಚಿವಿಟಿ ಎಷ್ಟು ಹೆಚ್ಚಾಗುತ್ತದೆ ಎಂದು ನೀವೇ ಗಮನಿಸಿಕೊಳ್ಳಿ.

ಲಂಚ್ ಕ್ಲಬ್ ಸೇರ್ಪಡೆಗೊಳ್ಳಿ

ಲಂಚ್ ಕ್ಲಬ್ ನಲ್ಲಿ ಬರೀ ನಿಮ್ಮ ಆಫೀಸ್ ಮಂದಿ ಮಾತ್ರ ಇರುವುದಿಲ್ಲ. ಬದಲಿಗೆ ನಿಮ್ಮ ಪಕ್ಕದ ಆಫೀಸ್ ಮಂದಿಯೂ ಇರಬಹುದು. ನಿಮ್ಮ ಆಫೀಸ್ ಏರಿಯಾದ ಮಂದಿಯೂ ಇರಬಹುದು. ನೀವು ಕೂಡಾ ಇಂತಹ ಕ್ಲಬ್ ಗೆ ಸೇರ್ಪಡೆಗೊಳ್ಳಿ. ಇಂತಹ ಕ್ಲಬ್ ನಿಂದ ನಿಮಗೆ ಹೊಸಬರ ಪರಿಚಯ ಮಾತ್ರ ಆಗುವುದಲ್ಲ ಬದಲಿಗೆ ನಿಮ್ಮ ನೆಟ್‌ವರ್ಕ್ ಕೂಡಾ ಹೆಚ್ಚಾಗುವುದು. ಹಾಗೂ ಈ ಚಟುವಟಿಕೆ ಕೂಡಾ ನಿಮ್ಮ ಕೆಲಸ ಮೇಲೆ ಧನಾತ್ಮಕ ಪ್ರಭಾವಬೀರುವುದು.

ಆನ್‌ಲೈನ್ ಕೋರ್ಸ್ ಗೆ ಸೇರ್ಪಡೆಗೊಳ್ಳಿ

ಹಲವಾರು ವಿಶ್ವವಿದ್ಯಾನಿಲಯಗಳು ಹಲವಾರು ಫೇಮಸ್ ಆನ್‌ಲೈನ್ ಕೋರ್ಸ್ ಗಳನ್ನ ನೀಡುತ್ತಾ ಬಂದಿವೆ. ನಿಮ್ಮ ಜ್ಞಾನ ಮತ್ತಷ್ಟೂ ಹೆಚ್ಚಿಸಬೇಕಾದ್ರೆ ನೀವು ಕೂಡಾ ಇಂತಹ ಆನ್‌ಲೈನ್ ಕೋರ್ಸ್ ಗಳಿಗೆ ಸೇರಬಹುದು. ಇದರಿಂದ ಒಂದು ಕಡೆ ನಿಮ್ಮ ವಿದ್ಯಾರ್ಹತೆ ಮಟ್ಟ ಕೂಡಾ ಹೆಚ್ಚಾಗುತ್ತದೆ ಹಾಗೂ ಹೆಚ್ಚಿನ ಜ್ಞಾನ ನೀವು ಪಡೆದಂತಾಗುವುದು.

ವರ್ಕ್ ಡೆಸ್ಕ್ ಕ್ಲೀನ್ ಮಾಡಿ

ಹೌದು ಸ್ವಚ್ಚವಾದ ಡೆಸ್ಕ್ ಇದ್ದರೆ ಕೆಲಸ ಮಾಡಲು ಕೂಡಾ ಮನಸ್ಸಾಗುವುದು. ಹಾಗಾಗಿ ಕೆಲಸ ಬಿಡುವಿನಲ್ಲಿ ನಿಮಗೆ ಬೋರ್ ಆದಾಗ ನೀವು ನಿಮ್ಮ ಡೆಸ್ಕ್ ಸ್ವಚ್ಛ ಮಾಡುವುದು, ಹೊಸ ಫೋಟೋ ಗಳನ್ನ ಅರೇಂಜ್ ಮಾಡಿ. ಫ್ರೆಶ್ ಹೂಗಳನ್ನ ಜೋಡಿಸಿ ಇಡುವುದು ಮುಂತಾದ ಕೆಲಸಗಳನ್ನ ಮಾಡಿ. ಇದರಿಂದ ನಿಮ್ಮ ಡೆಸ್ಕ್ ನೋಡಲು ಮತ್ತಷ್ಟು ಚೆನ್ನಾಗಿರುವುದು ಮಾತ್ರವಲ್ಲದೇ ನಿಮಗೆ ಕೆಲಸ ಮಾಡಲು ಮನಸ್ಸಾಗುವುದು ಕೂಡಾ.

More Read: ಈ 4 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಬ್ಯುಸಿನೆಸ್ ಖಂಡಿತಾ ಸಕ್ಸಸ್ ಆಗುತ್ತೆ

For Quick Alerts
ALLOW NOTIFICATIONS  
For Daily Alerts

    English summary
    Peoples generally get bored with the same work and Same profile, Your Bore will affects your productivity. Here are a few things you could try out the next time you get bored at work.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more