ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕಾದ ಸಬ್‌ಜೆಕ್ಟ್ ನಲ್ಲಿ ಸಿಬಿಎಸ್ಇ 12ನೇ ತರಗತಿಯ ಫಿಸಿಕ್ಸ್ ಕೂಡಾ ಒಂದು. ಈ ಸಬ್‌ಜೆಕ್ಟ್ ನಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ ಎಂದು ಪ್ಲ್ಯಾನ್ ಕೂಡಾ ಮಾಡಿಕೊಂಡಿರುತ್ತಾರೆ ವಿದ್ಯಾರ್ಥಿಗಳು. ಈ ಸಬ್‌ಜೆಕ್ಟ್ ಬಗ್ಗೆ ತುಂಬಾ ಸೀರಿಯಸ್ ಆಗಿ ಸ್ಟಡಿ ಕೂಡಾ ಮಾಡ್ತಾರೆ ವಿದ್ಯಾರ್ಥಿಗಳು.
ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕೆಂದು ಹಗಲು ರಾತ್ರಿ ಎನ್ನದೇ ಓದುತ್ತಾರೆ ವಿದ್ಯಾರ್ಥಿಗಳು. ಮಾರುಕಟ್ಟೆಯಲ್ಲಿ ಸಿಗುವ ಅದೆಷ್ಟೋ ಪುಸ್ತಕಗಳನ್ನ ತಂದು ರೆಫರ್ ಕೂಡಾ ಮಾಡುತ್ತಾರೆ. ಸ್ನೇಹಿತರ ಜತೆ ಸೇರಿ ಗ್ರೂಪ್ ಸ್ಟಡಿ ಮಾಡುತ್ತಾರೆ. ಆದ್ರೆ ಪರೀಕ್ಷೆ ವೇಳೆ ತಮಗೆ ಗೊತ್ತಿಲ್ಲದೆನೇ ಕೆಲವೊಂದು ತಪ್ಪುಗಳನ್ನ ಮಾಡಿ ಅಂಕ ಕಳೆದುಕೊಳ್ಳುತ್ತಾರೆ.
ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮಾಡುವ ಆ ಸಾಮಾನ್ಯ 5 ತಪ್ಪುಗಳು ಯಾವುದೆಂದು ನಾವು ನಿಮಗೆ ತಿಳಿಸುತ್ತೇವೆ. ಆ ತಪ್ಪುಗಳು ನೋಡಲು ಚಿಕ್ಕದಾಗಿರಬಹುದು ಆದ್ರೆ ಅವುಗಳಿಂದ ನೀವು ತುಂಬಾ ಅಂಕ ಕಳೆದುಕೊಳ್ಳುತ್ತೀರಿ. ಆ ತಪ್ಪುಗಳು ಯಾವುವು ಎಂದು ನಾವು ನಿಮಗೆ ಇಲ್ಲಿ ಲಿಸ್ಟ್ ನೀಡುತ್ತೇವೆ. ಲಿಸ್ಟ್ ಓದಿದ ಬಳಿಕ ಮುಂದೆಂದೂ ಆ ತಪ್ಪು ಮತ್ತೆ ಮರುಕಳಿಸದಂತೆ ಎಚ್ಚರಿಕೆಯಿಂದಿರಿ

ವಿವರಣೆ ಅಗತ್ಯವಿಲ್ಲ :
ಪ್ರಬಂಧದಂತಹ ಪ್ರಶ್ನೆಗಳಿಗೆ ವಿಸ್ತಾರವಾದ ವಿರಣೆಯನ್ನ ನೀಡುವುದು ಅಗತ್ಯವಿರುತ್ತದೆ. ಆದ್ರೆ ಒಂದು ಅಂಕದ ಪ್ರಶ್ನೆಗೆ ಆ ರೀತಿಯಾಗಿ ವಿವರಣೆ ನೀಡುವ ಅಗತ್ಯವಿರುದಿಲ್ಲ. ಒಂದು ಅಂಕದ ಪ್ರಶ್ನೆಗೆ ಅಗತ್ಯವಿದ್ದಷ್ಟು ಮಾತ್ರ ವಿವರಣೆ ನೀಡಿ. ಇನ್ನು ನಿಮ್ಮ ಉತ್ತರವು 50 ಕ್ಕಿಂತ ಕಡಿಮೆ ಪದಗಳಲ್ಲಿ ಇರಬಾರದು

ಫಾರ್ಮುಲ ಮೂಲಕ ಅಂಕ ಸ್ಕೋರ್ ಮಾಡಬಹುದು
ಸಂಖ್ಯಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವಾಗ ನಾವು ಫಾರ್ಮುಲ ಹಾಕುವುದಿಲ್ಲ. ಆದ್ರೆ ಇದು ತಪ್ಪು. ಎಲ್ಲಿ ಫಾರ್ಮುಲ ಅಗತ್ಯವಿರುತ್ತದೋ ಅಲ್ಲಿ ಎಲ್ಲಾ ಫಾರ್ಮುಲ ಬಳಕೆ ಮಾಡಿ. ಯಾಕೆಂದ್ರೆ ಫಾರ್ಮುಲಕ್ಕೂ ಅಂಕಗಳಿರುತ್ತದೆ. ಅಂಶ ಮತ್ತು ಛೇದವನ್ನ ಫಾರ್ಮುಲದಲ್ಲಿ ಬರೆಯುವಾಗ ಎಚ್ಚರಿಕೆಯಿಂದಿರಿ. ಹೆಚ್ಚು ವಿದ್ಯಾರ್ಥಿಗಳು ಇಲ್ಲೇ ತಪ್ಪು ಮಾಡಿ ಅಂಕ ಕಳೆದುಕೊಳ್ಳುತ್ತಾರೆ

ರೇಖಾ ಚಿತ್ರಗಳು ನಿಮ್ಮ ಜ್ಞಾನವನ್ನ ಪ್ರತಿನಿಧಿಸುತ್ತದೆ
ರೇಖಾಚಿತ್ರದ ಜತೆ ನಿಮ್ಮ ಉತ್ತರವು ಹೆಚ್ಚು ಮಾಹಿತಿ ಪೂರ್ಣವಾಗಿರುವಂತೆ ನೋಡಿಕೊಳ್ಳಿ. ಲೇಬಲ್ ಮಾಡಲು ಮರೆಯದಿರಿ. ಪೆನ್ಸಿಲ್ ಮೂಲಕ ಲೇಬಲ್ ಮಾಡಿಕೊಳ್ಳಿ

ಪ್ರಶ್ನೆಗಳನ್ನ ಕಡೆಗಣಿಸಬೇಡಿ
ಗೊತ್ತಿಲ್ಲದೇ ನಾವು ಕೆಲವೊಮ್ಮೆ ಕೆಲವೊಂದು ಪ್ರಶ್ನೆಗಳನ್ನ ಬಿಟ್ಟು ಬಿಡುತ್ತೇವೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಏನು ಸಲಹೆ ಅಂದ್ರೆ ಪ್ರಶ್ನಾಪತ್ರಿಕೆಯ ಯಾವುದೇ ಚಿಕ್ಕ ಭಾಗವನ್ನ ಕೂಡಾ ಓದದೇ ಹಾಗೆಯೇ ಬಿಟ್ಟು ಬಿಡಬೇಡಿ. ಉತ್ತರ ಬರೆಯುವ ಮುನ್ನ ಸರಿಯಾಗಿ ಪ್ರಶ್ನೆ ಸಂಖ್ಯೆ ಬರೆದುಕೊಳ್ಳಿ

ಉತ್ತರದ ಜತೆ ಸೂಕ್ತ ಕಾರಣ ನೀಡಿ
ಹೆಚ್ಚಿನ ವಿದ್ಯಾರ್ಥಿಗಳು ಏನು ಮಾಡುತ್ತಾರೆ ಎಂದ್ರೆ 1 ಇಲ್ಲ 2 ಅಂಕದ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿ ಸುಮ್ಮನಾಗುತ್ತಾರೆ. ಹೀಗೆ ಮಾಡಿದ್ರೆ ನೀವು ಅಂಕ ಕಳೆದುಕೊಳ್ಳುತ್ತೀರಿ. ಹಾಗಾಗಿ ಇಂತಹ ಪ್ರಶ್ನೆಗಳಿಗೆ ನೀವು ಏನು ಮಾಡಬೇಕು ಅಂದ್ರೆ ಹೌದು ಅಥವಾ ಇಲ್ಲ ಉತ್ತರದ ಜತೆ ಕಾರಣ ಕೂಡಾ ನೀಡಬೇಕು
ಪರೀಕ್ಷೆ ವೇಳೆ ಈ 5 ತಪ್ಪುಗಳನ್ನು ನೀವು ಕಡಿಮೆ ಮಾಡಿಕೊಂಡರೆ ನೀವು ಅತೀ ಹೆಚ್ಚು ಅಂಕ ಸ್ಕೋರ್ ಮಾಡಬಹುದು