ಫೆಶರ್ಸ್ ನೀವಾಗಿದ್ರೆ ಕಾರ್ಪೋರೇಟಿವ್ ಆಫೀಸ್‌ನಲ್ಲಿ ಹೇಗೆ ದುಡಿದ್ರೆ ನಿಮ್ಮ ಸೀಟು ಉಳಿಯುತ್ತೆ

ಕಾರ್ಪೋರೇಟಿವ್ ಜಗತ್ತಿನಲ್ಲಿ ತುಂಬಾ ಸ್ಪರ್ಧೆಗಳು ಇರುತ್ತದೆ. ಆಫೀಸ್ ಮೊದಲ ದಿನದಲ್ಲೆ ನೀವು ಸರಿಯಾದ ಹೆಜ್ಜೆ ಇಟ್ಟರೆ ಮಾತ್ರ ನೀವು ಇತರರ ಜತೆ ರೇಸ್‌ ನಲ್ಲಿ ಚೆನ್ನಾಗಿ ಓಡಿ ಸಕ್ಸಸ್ ನಿಮ್ಮದಾಗಿಸಿಕೊಳ್ಳಬಹುದು

By Kavya

ಕಾಲೇಜು ದಿನಗಳಲ್ಲಿ ಯಾವುದೇ ಒಂದು ಕೆಲಸ ಮಾಡಿ ಮುಗಿಸಬೇಕೆಂದಾದ್ರೆ ನಾವು ಇತರರಿಗೆ ಅವಲಂಭಿತರಾಗಿರುತ್ತೇವೆ. ಆದ್ರೆ ಕಾಲೇಜು ಮುಗಿದ ಬಳಿಕ ಕೂಡಲೇ ಕೆಲಸ ಸಿಕ್ಕಿದರೆ ನಿಮಗೆ ಅಡ್ಜಸ್ಟ್ ಆಗಲು ತುಂಬಾ ಕಷ್ಟವಾಗುತ್ತದೆ. ಇನ್ನು ಕಾರ್ಪೋರೇಟಿವ್ ಸಂಸ್ಥೆಗಳಲ್ಲಿ ಫೆಶರ್ಸ್ ತುಂಬಾ ಕಷ್ಟಪಡುತ್ತಾರೆ.

ಫೆಶರ್ಸ್ ನೀವಾಗಿದ್ರೆ ಕಾರ್ಪೋರೇಟಿವ್ ಆಫೀಸ್‌ನಲ್ಲಿ ಹೇಗೆ ದುಡಿದ್ರೆ ನಿಮ್ಮ ಸೀಟು ಉಳಿಯುತ್ತೆ

<strong>Also Read: ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ</strong>Also Read: ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

ಇನ್ನು ಕಾರ್ಪೋರೇಟಿವ್ ಜಗತ್ತಿನಲ್ಲಿ ತುಂಬಾ ಸ್ಪರ್ಧೆಗಳು ಇರುತ್ತದೆ. ಆಫೀಸ್ ಮೊದಲ ದಿನದಲ್ಲೆ ನೀವು ಸರಿಯಾದ ಹೆಜ್ಜೆ ಇಟ್ಟರೆ ಮಾತ್ರ ನೀವು ಇತರರ ಜತೆ ರೇಸ್‌ ನಲ್ಲಿ ಚೆನ್ನಾಗಿ ಓಡಿ ಸಕ್ಸಸ್ ನಿಮ್ಮದಾಗಿಸಿಕೊಳ್ಳಬಹುದು. ಫೆಶರ್ಸ್ ಹೆಚ್ಚಿನ ತಪ್ಪುಗಳನ್ನ ಮಾಡಬಹುದು ಅದಕ್ಕೆ ಅವರ ಉದಾಸೀನತೆ ಕಾರಣ ಅಲ್ಲ ಬದಲಿಗೆ ಅವರು ಸರಿಯಾದ ಗೈಡ್ ಪಡೆಯದೇ ಕೆಲಸ ಮಾಡಲು ಮುನ್ನುಗ್ಗುವುದು ಕೂಡಾ ಒಂದು ಕಾರಣವಾಗಿರಬಹುದು. ಬನ್ನಿ ಕಾರ್ಪೋರೇಟಿವ್ ವರ್ಲ್ಡ್ ನಲ್ಲಿ ಫೆಶರ್ಸ್ ಹೇಗಿದ್ರೆ ಸಕ್ಸಸ್ ತಮ್ಮದಾಗಿಸಿಕೊಳ್ಳಬಹುದು ಎಂದು ನಿಮಗೆ ಇಲ್ಲಿ ಟಿಪ್ಸ್ ನೀಡಲಾಗಿದೆ ಮುಂದಕ್ಕೆ ಓದಿ.

ಟೈಂ ಬಗ್ಗೆ ಇರಲಿ ಹೆಚ್ಚಿನ ಗಮನ:

ಟೈಂ ಬಗ್ಗೆ ಇರಲಿ ಹೆಚ್ಚಿನ ಗಮನ:

ಇದು ಮೊದಲಿಗೆ ನೆನಪಿಟ್ಟುಕೊಳ್ಳ ಬೇಕಾದ ಅಂಶ. ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಆಫೀಸ್‌ನಲ್ಲಿ ಎಲ್ಲರಿಗಿಂತಲೂ ಜ್ಯೂನಿಯರ್ ಆಗಿರುತ್ತೀರಿ ಹಾಗಾಗಿ ಯಾವುದೇ ಸೀನಿಯರ್ ಅಧಿಕಾರಿಗಳು ನಿಮ್ಮನ್ನ ಕಾಯುವಂತೆ ಮಾಡುವ ಅಧಿಕಾರ ನಿಮಗೆ ಇಲ್ಲ. ಟ್ರಾಫಿಕ್ ಜಾಮ್ ಇರಬಹುದು ಇಲ್ಲ ಆಫೀಸ್‌ನಿಂದ ನಿಮ್ಮ ಮನೆ ತುಂಬಾ ದೂರದಲ್ಲಿ ಇರಬಹುದು. ಹಾಗಾಂತಹ ಈ ಕಾರಣಗಳನ್ನ ಹೇಳಿ ತಪ್ಪಿಸಿಕೊಳ್ಳಬೇಡಿ. ಯಾಕೆಂದ್ರೆ ಇದೆಲ್ಲಾ ಕಾರಣವೇ ಅಲ್ಲ. ಬದಲಿಗೆ ಸರಿಯಾದ ಟೈಂಗೆ ಆಫೀಸ್‌ಗೆ ಬರಲು ಯತ್ನಿಸಿ.

ಅಷ್ಟೇ ಅಲ್ಲ ಕಚೇರಿಯಲ್ಲಿ ಮೀಟಿಂಗ್ ಏರ್ಪಡಿಸಿದ್ದಾಗ ಸರಿಯಾದ ಟೈಂ ಗೆ ನೀವು ಹಾಜರಾಗಿ. ನೀವು ನಿಮ್ಮ ಮೊದಲ ದಿನ ಕಚೇರಿಗೆ ಸರಿಯಾದ ಟೈಂ ಗೆ ತೆರಳಿದ್ರೆ ನಿಮ್ಮ ಕೆರಿಯರ್ ಬೆಳವಣಿಗೆಗೆ ಯಾವುದೇ ಅಡೆ-ತಡೆ ಇರುವುದಿಲ್ಲ.

ಚೆನ್ನಾಗಿ ಉಡುಗೆ ಧರಿಸಿ

ಚೆನ್ನಾಗಿ ಉಡುಗೆ ಧರಿಸಿ

ಇದೀಗ ನಿಮ್ಮ ಕಾಲೇಜು ದಿನಗಳು ಮುಗಿದು ಹೋದವು. ಕಾಲೇಜು ಟೈಂನಲ್ಲಿ ಬಣ್ಣ ಬಣ್ಣದ ಟೀ ಶರ್ಟ್, ತಲೆ ತುಂಬಾ ಫ್ಯಾನ್ಸಿ ಕ್ಲಿಪ್ ಗಳನ್ನ ಧರಿಸಿ, ಫುಲ್ ಮೇಕಪ್ ಮಾಡಿಕೊಂಡು ಓಡಾಡಿರುತ್ತೀರಿ. ಆದ್ರೆ ಅದೆಲ್ಲಾ ಇಲ್ಲಿಗೆ ಮ್ಯಾಚ್ ಆಗಲ್ಲ, ಬದಲಿಗೆ ಫಾರ್ಮಲ್ ಉಡುಗೆಯಲ್ಲಿ ಕೆಲಸಕ್ಕೆ ತೆರಳಿ. ಕಾರ್ಪೋರೇಟಿವ್ ಜಗತ್ತಿನಲ್ಲಿ ನೀವು ಕೆಲಸ ಮಾಡಬೇಕೆಂದಿದ್ದೆ, ನೀವು ಫಾರ್ಮಲ್ಸ್ ಇಲ್ಲ ಸ್ಮಾರ್ಟ್ ಕ್ಯಾಶುವಲ್ಸ್ ಧರಿಸುವುದು ಬೆಸ್ಟ್. ಅದು ಬಿಟ್ಟು ಅಸಭ್ಯ ಉಡುಗೆಯನ್ನ ಧರಿಸಿ ಕಚೇರಿಗೆ ತೆರಳಿ ಮೊದಲ ದಿನವೇ ನಿಮ್ಮ ಇಂಪ್ರೇಶನ್ ಹಾಳು ಮಾಡಿಕೊಳ್ಳಬೇಡಿ.

 

ಬಾಸ್ ಜತೆ ಉತ್ತಮ ಸಂಬಂಧ ಬೆಳೆಸಿ

ಬಾಸ್ ಜತೆ ಉತ್ತಮ ಸಂಬಂಧ ಬೆಳೆಸಿ

ವರದಿ ಪ್ರಕಾರ, ಹೆಚ್ಚಿನ ಉದ್ಯೋಗಿಗಳು ಬಾಸ್ ಜತೆಗಿನ ಅಸಮಾಧಾನಕಾರ ಸಂಬಂಧದಿಂದ ಕೆಲಸ ಬಿಟ್ಟು ಹೋಗುತ್ತಾರೆ. ನೀವು ಯಾವಾಗ ಫ್ರೆಶರ್ಸ್ ಆಗಿ ಕೆಲಸಕ್ಕೆ ಸೇರುತ್ತೀರೋ ಹಾಗೂ ಆ ಕೆಲಸದಲ್ಲೇ ಕೆರಿಯರ್ ಬೆಳೆಸಬೇಕೆಂದು ಯೋಚಿಸಿದ್ದರೆ, ಮೊದಲಿಗೆ ನಿಮ್ಮ ಸ್ಥಾನವನ್ನ ಗಟ್ಟಿ ಮಾಡಿಕೊಳ್ಳಬೇಕು. ಹಾಗಾಗಿ ನಿಮ್ಮ ಬಾಸ್ ಜತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು.

ಗಾಸಿಪ್ ನಿಂದ ದೂರವಿರಿ

ಗಾಸಿಪ್ ನಿಂದ ದೂರವಿರಿ

ಆಫೀಸ್ ಪಾಲಿಟಿಕ್ಸ್ ನಿಂದಾಗಿ ಹೆಚ್ಚಿನ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಫ್ರೇಶರ್ ಆಗಿ ನೀವು ಕೆಲಸಕ್ಕೆ ಸೇರಿದ್ರೆ ಯಾವುದೇ ಗಾಸಿಪ್ ಮಾಡಲು ಹೋಗಬೇಡಿ. ಹಾಗೂ ಇತರರು ಗಾಸಿಪ್ ಮಾಡಿದ್ರೆ ಅದರಲ್ಲಿ ನೀವು ಸೇರಿಕೊಳ್ಳಬೇಡಿ. ಆದಷ್ಟು ಗಾಸಿಪ್ ನಿಂದ ದೂರವಿರಿ. ಇಲ್ಲವಾದ್ರೆ ಈ ಕಾರಣದಿಂದ ನೀವು ಕೆಲಸ ಕಳೆದುಕೊಳ್ಳುವ ಸಂಭವವಿರುತ್ತದೆ

 

For Quick Alerts
ALLOW NOTIFICATIONS  
For Daily Alerts

English summary
Back in college, we have always had somebody who would be pushing us to get the job done. The sudden independence that is associated with the job world is something freshers find difficult to understand. As a result, they often end up messing up their corporate lives in the very first months of the same.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X