ಕೆಲಸದಲ್ಲಿ ಮನಸ್ಸನ್ನು ಆರಾಮದಾಯಕವಾಗಿರಿಸಿಕೊಳ್ಳಲು ಬೇಕಾಗುವ 5 ವಿಧಾನಗಳು

Posted By: Sushma Charhra

ನಮ್ಮ ಪ್ರತಿ ದಿನವನ್ನೂ ನಾವು ಬ್ಯುಸಿಗೊಳಿಸಿಕೊಳ್ಳುತ್ತಿದ್ದೇವೆ. ಆರಾಮದಾಯಕವಾದ ದಿನವನ್ನು ನಾವು ಕಳೆಯುತ್ತಿಲ್ಲ. ಪ್ರತಿದಿನ ಮೀಟಿಂಗು, ಆ ಮೀಟಿಂಗ್ ನ ವಿಚಾರಗಳನ್ನು ತಿಳಿಸುವುದಕ್ಕೆ ಮತ್ತೊಂದು ಮೀಟಿಂಗ್, ಕಾಲ್ಸ್., ಪ್ರಸೆಂಟೇಷನ್ಸ್,.. ಅಬ್ಬಬ್ಬಾ, ಈ ಆಫೀಸಿನ ಕಿರಿಕಿರಿಯನ್ನು ಹೇಳೋಕೆ ಆಗುತ್ತಾ.. ವಿವರಿಸೋಕೆ ಆಗುತ್ತಾ... ಮನಸ್ಸು ಹುಚ್ಚು ಹಿಡಿದು ಬಿಡುವಷ್ಟು ಹಿಂಸೆ ಅನ್ನಿಸೋದೆ ಹೆಚ್ಚು..ನಾವೊಂಥರಾ ದಿನದಿಂದ ದಿನಕ್ಕೆ ಮಿಷಿನ್ ಗಳಂತಾಗುತ್ತಿದ್ದೇವಾ ಅನ್ನಿಸೋದಿಲ್ವಾ..ಆದ್ರೆ ಒಂದು ಸಂಶೋಧನೆಯ ಪ್ರಕಾರ ನಾವು ಆರಾಮದಾಯಕವಾಗಿರಲು ಸಾಧ್ಯವಿದೆ. ಆದ್ರೆ ನಮ್ಮ ದೈನಿಂದಿನ ಚಟುವಟಿಕೆಗಳಲ್ಲಿ ಸ್ವಲಪ ಬದಲಾವಣೆ ಮಾಡಿಕೊಳ್ಳಬೇಕು. ಅದೇನು ಕಷ್ಟದ ವಿಚಾರವಲ್ಲ.

1.ಏನೇ ಬರಲಿ ಎದುರಿಸಿ ಬಿಡೋಣ

ಏನೇ ಬರಲಿ ಎದುರಿಸೋಣ ಅನ್ನೋ ಮನಸ್ಥಿತಿ ತುಂಬಾ ಮುಖ್ಯ. ಒತ್ತಡ ಪ್ರತಿಯೊಬ್ಬರಿಗೂ ಇರುತ್ತೆ. ಒತ್ತಡ ಇಲ್ಲದೆ ಇದ್ರೆ ಅದನ್ನು ಆಫೀಸು, ಕೆಲಸ ಅಂತ ಹೇಳೋಕೆ ಆಗಲ್ಲ. ಪ್ರತಿಯೊಂದು ಸಂಬಳ ಕೊಡೋ ಕಂಪನಿಯೂ ಪ್ರತಿಯೊಬ್ಬ ಕೆಲಸಗಾರನಿಂದಲೂ ತನ್ನ ಕಂಪೆನಿಗೆ ಲಾಭ ಬರುವಷ್ಟು ಕೆಲಸ ಮಾಡಿಸಿಕೊಳ್ಳಬೇಕು ಅಂತಲೇ ಯೋಚಿಸೋದು. ಆ ನಿಟ್ಟಿನಲ್ಲಿ ನಿಮ್ಮನ್ನ ಒತ್ತಡಕ್ಕೆ ನೂಕೋದು. ಆದರ��� ನೀವದನ್ನು ಎದುರಿಸಲು ಸನ್ನದ್ಧರಾಗಿರಬೇಕು. ಆಫೀಸಲ್ಲಿ ಎಲ್ಲಾ ಕೆಲಸಕ್ಕೂ ಏನೇ ಬರಲಿ ಎದುರಿಸೋಣ ಅನ್ನುವ ಮನಸ್ಥಿತಿ ಇರಬೇಕು. ಆ ತಾಕತ್ತಿರಬೇಕು. ಆಗಲೇ ನೀವು ನಿಮ್ಮ ಮನಸ್ಸನ್ನ ಆರಾಮಾಗಿರಿಸಿಕೊಳ್ಳಲು ಸಾಧ್ಯ. ಇಲ್ಲದೇ ಹೋದಲ್ಲಿ ಟೆಕ್ಷನ್ ಅನ್ನೋ ಭೂತದ ಬಲೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.

2. ದಿನ ಆರಂಭಿಸುವುದಕ್ಕಿಂದ ಮುಂಚೆ ಒಂದು ವಿರಾಮ ನೀಡಿ

ಮತ್ತೊಂದು ಹಿಂಸಾತ್ಮಕ ದಿನ ನಿಮ್ಮ ಮುಂದಿದೆ. ನೀವದನ್ನು ಎದುರಿಸಲು ರೆಡಿಯಾಗಿರಲೇಬೇಕು.ಹಾಗಂತ ಅದ��� ನೀವು ಸ್ವಲ್ಪ ಹೊತ್ತು ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ಸುತ್ತಮುತ್ತಲಿನವರಿಗೆ ವಿರಾಮ ನೀಡಬಾರದ ದಿನವೇನಲ್ಲ ಅಲ್ವಾ.. ಪ್ರತಿದಿನದ ಚಟುವಟಿಕೆಯನ್ನು ಸ್ವಲ್ಪಮಟ್ಟಿಗೆ ಮೂಲೆಯಲ್ಲಿಟ್ಟು, ಮನಸ್ಸಿಗೆ ಆರಾಮ ನೀಡುವ ಚಟುವಟಿಕೆಯಿಂದ ನಿಮ್ಮ ದಿನವನ್ನು ಆರಂಭಿಸಿ.

3. ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ

ನಿಮ್ಮ ಕೆಲಸದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾದಾಗ ಹೇಗೆ ನಿಮ್ಮ ದೇಹ ಪ್ರತಿಕ್ರಿಯಿಸುತ್ತದೆ. ಬೇಸರವಾಗುತ್ತಾ ಅಥವಾ ಮತ್ತೂ ಕೆಲಸ ಮ���ಡಿ ತೋರಿಸಬೇಕು ಅನ್ನೋ ಭಾವನೆ ಬರುತ್ತಾ ..ಇನ್ನು ನಿಮ್ಮ ಬಾಸ್ ನಿಮ್ಮನ್ನು ಹೊಗಳಿದಾಗ ನಿಮಗೆ ಏನನ್ನಿಸುತ್ತೆ ಅನ್ನೋದನ್ನು ಗಮನಿಸಿ. ಇದರಿಂದ ನೀವು ನಿಮ್ಮ ಚಟುವಟಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತೆ. ತುಂಬಾ ಟೆಕ್ಷನ್ ಆಗಿದ್ದ ಮೀಟೀಂಗ್ ಮುಗಿದ ನಂತ್ರ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ. ಕಾಫಿ, ಟೀ ಸೇವಿಸಿ, ಇಲ್ಲ ಇನ್ಯಾವುದೇ ಬೇರೆ ಚಟುವಟಿಕೆಯಲ್ಲಿ ಭಾಗವಹಿಸಿ ರಿಲ್ಯಾಕ್ಸ್ ಆಗಿ ಮತ್ತೆ ಕೆಲಸ ಆರಂಬಿಸಿ.

4.ನಿಮ್ಮ ಸಹದ್ಯೋಗಿಗಳನ್ನು ಅರ್ಥ ಮಾಡಿಕೊಳ್ಳಿ, ಆದರೆ ಅವರನ್ನು ಹೀಗೆಯೇ ಎಂದು ನಿರ್ಧರಿಸಿಬಿಡಬೇಡಿ

ನೀವು ನಿಮ್ಮ ಎಲ್ಲಾ ಸಹದ್ಯೋಗಿಗಳ ಜೊತೆ ಆದಷ್ಟು ಕ್ಲೋಸ್ ಆಗಿರಿ. ಅವರ ಆಲೋಚನೆಗಳು ಮತ್ತು ಅವ್ರ ಐಡಿಯಾಗಳನ್ನು ಸ್ವೀಕರಿಸಿ. ಆದರೆ ಅವರು ಹೀಗೆಯೇ ಎಂದು ಒಂದು ನಿರ್ಧಾರ ಕೈಗೊಳ್ಳಬೇಡಿ. ಬದಲಾಗಿ ಅವರ ಭಾವನೆ, ಅವರ ಸ್ಟೈಲ್ ಇವೆಲ್ಲವನ್ನೂ ನೀವು ಅರ್ಥಮಾಡಿಕೊಳ್ಳಿ. ಅದರಿಂದ ನೀವು ನಿಮ್ಮ ಆಫೀಸಿನ ವಾತಾವರಣವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ನಿಮ್ಮ ಸುತ್ತಮುತ್ತಲಿನವರು ನಿಮ್ಮ ಜೊತೆ ಹೆಲ್ದಿಯಾಗಿದ್ದರೆ ನೀವು ಹೆಲ್ದಿಯಾಗಿರಬಹುದು ಅನ್ನೋದು ನೆನಪಿರಲಿ

5. ನಿಮ್ಮ ಭವಿಷ್ಯದ ಗೆಲುವನ್ನು ಊಹಿಸಿಕೊಳ್ಳಿ

ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಹಾಗಾಗಿ ನಿಮ್ಮ ಮನಸ್ಸನ್ನು ಭವಿಷ್ಯಕ್ಕೆ ಕರೆದುಕೊಂಡು ಹೋಗಿ. ನೀವು ಮಾಡುತ್ತಿರುವ ಕೆಲಸದಲ್ಲಿ ಕಾಣುವ ಗೆಲುವನ್ನು ಊಹಿಸಿಕೊಳ್ಳಿ, ಆದಷ್ಟು ಕಡಿಮೆ ಒತ್ತಡ ತೆಗೆದುಕೊಂಡು ಹೆಚ್ಚೆಚ್ಚು ಗೆಲುವು ಕಾಣಲು ಪ್ರಯತ್ನಿಸಿ.. ಕನಸು ಕಂಡಷ್ಟು ನೀವು ಗೆಲುವು ಕಾಣಲು ಸಾಧ್ಯ��ಿದೆ.

English summary
Day by day we are getting busy in our office work. we don't get time for our self. always mind will be full of stress. here is some tips which comfort your mind in work

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia